May 18, 2024

Bhavana Tv

Its Your Channel

ಸಾಲ್ಕೋಡ್ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ

ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಕೆಳಗಿನಕೇರಿ- ಕೊಡಾರಿ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ರವಿವಾರ ಚಾಲನೆ ನೀಡಿದರು.

ಅಕ್ಕಪಕ್ಕ ಅಡಿಕೆ ತೋಟವಿರುವುದರಿಂದ ಸೇತುವೆಯ ನಿರ್ಮಾಣದ ಬಳಿಕ ತಾತ್ಕಲಿಕ ತಡೆಗೋಡೆ ಕುಸಿತವಾಗಿ ತೋಟಕ್ಕೆ ಹಾನಿಯಾಗಲಿದೆ ಎಂದು ತೋಟದ ಮಾಲಿಕರು ಶಾಶ್ವತ ತಡೆಗೋಡೆಯ ಬಳಿಕ ಸೇತುವೆ ನಿರ್ಮಾಣ ಮಾಡುವಂತೆ ಪಟ್ಟು ಹಿಡಿದರು. ಸ್ಥಳಿಯರು ಬಹುವರ್ಷದ ನಂತರ ಸೇತುವೆ ಮಂಜೂರಾಗಿದೆ. ಈಗ ತಕರಾರು ನಿರ್ಮಾಣವಾಗಿ ಸೇತುವೆ ಕಾಮಗಾರಿ ಸ್ಥಗಿತವಾದರೆ ಸಮಸ್ಯೆ ಆಗಲಿದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಶಾಸಕರು ತೋಟದ ಮಾಲಕರೊಂದಿಗೆ ಮಾತನಾಡಿ ಸಮಸ್ಯೆ ಕುರಿತು ಅರಿವು ಮೂಡಿಸಿ ಸಂದಾನ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
    ನಂತರ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಶಾಸಕರು ಏಕಾಏಕಿ ಭೂಮಿ ಪೂಜೆ ಮಾಡುವುದಕ್ಕೆ ಸಾಧ್ಯವಿಲ್ಲ. ಸ್ಥಳಿಯರ ಸಮಸ್ಯೆ ಗಮನಿಸಿ ಅದನ್ನು ಬಗೆಹರಿಸಿ ಮಾಡುವ ಗುತುತರವಾದ ಜವಬ್ದಾರಿ ಇದ್ದು, ಈಗಲೂ ಆ ಸಮಸ್ಯೆ ಅರಿತು ಸ್ಥಳಿಯರ ವಿಶ್ವಾಸ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕನಾದ ಬಳಿಕ ಇದೇ ಹೊಳೆಗೆ 1 ಕೋಟಿ ವೆಚ್ಚದ ಸೇತುವೆ, ಗ್ರಾಮದಲ್ಲಿ ಎರಡು ಹೊಸ ಸೇತುವೆ, ಹಿಂದಿನ ಅವಧಿಯಲ್ಲಿ ಆರಂಭವಾಗಿ ನೆನೆಗುದಿಗೆ ಬಿದ್ದ ಹೊಯ್ನಿರ್ ಸೇತುವೆಯು ಪೂರ್ಣಗೊಳಿಸಲಾಗಿದೆ ಎಂದು ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
    ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಬಾಲಚಂದ್ರ ನಾಯ್ಕ, ನಾಗೇಶ ಗೌಡ, ಯಮುನಾ ನಾಯ್ಕ, ಲಕ್ಷ್ಮೀ ಮುಕ್ರಿ, ದೀಪಾ ನಾಯ್ಕ, ಅಧಿಕಾರಿ ಮಾನಸ, ಗುತ್ತಿಗೆದಾರ ಕೃಷ್ಣ ಗೌಡ, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು
error: