May 18, 2024

Bhavana Tv

Its Your Channel

ಹೊನ್ನಾವರ ನ್ಯಾಯಾಲಯಗಳಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ 193 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥ

ಹೊನ್ನಾವರ :- ಹೊನ್ನಾವರ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ್ ಅದಾಲತ್‌ನಲ್ಲಿ 3 ನ್ಯಾಯಾಲಯಗಳ ಒಟ್ಟೂ 193 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.
ಹೊನ್ನಾವರ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ 1 ಸಿವಿಲ್ ಪ್ರಕರಣ ಹಾಗೂ 19 ಅಮಲ್ಜಾರಿ ಪ್ರಕರಣ, 4 ಐ.ಪಿ.ಸಿ ಪ್ರಕರಣ, 31 ಚೆಕ್ ಬೌನ್ಸ÷ ಪ್ರಕರಣ. 2 ಖಾಸಗಿ ದೂರು, 2 ಜೀವನಾಂಶ ಪ್ರಕರಣ, ಎಮ್.ವಿ.ಎಕ್ಟ್ ಮತ್ತು ಕೆ.ಪಿ.ಎಕ್ಟ್ ಸೇರಿ 64 ಪ್ರಕರಣಗಳು ಸೇರಿದಂತೆ ಒಟ್ಟೂ 123 ಪ್ರಕರಣಗಳು ರಾಜಿ ಮೂಲಕ ತೀರ್ಮಾನಗೊಂಡವು
ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಮ.ಎಫ್,.ಸಿ ನ್ಯಾಯಾಲಯದಲ್ಲಿ 3 ಸಿವಿಲ್ ಪ್ರಕರಣಗಳು, 15 ಅಮಲ್ಜಾರಿ ಪ್ರಕರಣಗಳು, 34 ಚೆಕ್ ಬೌನ್ಸ್ ಪ್ರಕರಣಗಳು, ಎಮ್.ವಿ.ಎಕ್ಟ್ ಮತ್ತು ಕೆ.ಪಿ.ಎಕ್ಟ್ 7 ಪ್ರಕರಣಗಳು ಸೇರಿದಂತೆ 59 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.
ಹಿರಿಯ ಸಿವಿಲ್ ಮತ್ತು ಎಮ್.ಎ.ಸಿ.ಟಿ ನ್ಯಾಯಾಲಯದಲ್ಲಿ 8 ಮೋಟಾರ್ ವಾಹನ ಅಪಘಾತ ವಿಮಾ ಪರಿಹಾರ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡು ರೂ. 21,85,000/- ಗಳನ್ನು ನೊಂದವರಿಗೆ ನೀಡಲು ತೀರ್ಮಾನಿಸಲಾಯಿತು. 3 ಅಮಲ್ಜಾರಿ ಪ್ರಕರಣದಲ್ಲಿ ರೂ. 14,76,285/- ಹಣ ವಸೂಲಿಗೆ ತೀರ್ಮಾನಿಸಲಾಯಿತು.
ನ್ಯಾಯಾಧೀಶರಾದ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶ ಕುಮಾರ ಜಿ., ಸಂದಾನಕಾರರಾಗಿ ನ್ಯಾಯವಾದಿ ಸೂರಜ್ ನಾಯ್ಕ ಮತ್ತು ಪ್ರಿನ್ಸಿಪಲ್ ಸಿವಿಲ್ ಕೋರ್ಟಿನ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹಾಗೂ ಸಂದಾನಕಾರರಾಗಿ ನ್ಯಾಯವಾದಿ ಕೇಶವ ಎಸ್ ಭಟ್ ಕರಡಗಾರ, ಸರಕಾರಿ ಅಭಿಯೋಜಕಿ ಸಂಪದಾ ಗುನಗಾ, ಪೂರ್ಣಿಮಾ ಮಾದೇವ ನಾಯ್ಕ, ಭಟ್ಕಳ ಹಾಗೂ ವಕೀಲರು, ಕಕ್ಷಿದಾರರು ಲೋಕ್ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಕ್ಕೆ ಸಹಕರಿಸಿದರು.

error: