May 18, 2024

Bhavana Tv

Its Your Channel

ಕ್ರೀಡೆ ಮಾನವನ ಅವಿಭಾಜ್ಯ ಅಂಗ – ಅಜಿತ್ ನಾಯ್ಕ

ಹೊನ್ನಾವರ : ವ್ಯಕ್ತಿಯ ವಿಕಸನ ಕ್ರೀಡೆಯಿಂದ ಮಾತ್ರ ಸಾಧ್ಯ. ಅದು ಮಾನವನ ಅವಿಭಾಜ್ಯ ಅಂಗವೆAದು ಹಳದಿಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ ನಾಯ್ಕ ಹೇಳಿದರು.
ಇತ್ತೀಚೆಗೆ ಸೂಪರ್ ನೇವಾಸ್ ಕ್ರಿಕೆಟರ್ಸ್ ಹೊಳೆಗದ್ದೆ ಇವರ ಆಶ್ರಯದಲ್ಲಿ ನಡೆದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ದಿ.ಪವನ ನಾಯ್ಕ ಮತ್ತು ದಿ.ಉಮೇಶ ನಾಯ್ಕರವರನ್ನು ನೆನಪಿಸುವ ಕಾರ್ಯಕ್ರಮವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಂಡಿರುವ ಕಾಯ೯ ಶ್ಲಾಘನೀಯ. ಬದುಕಿರುವಾಗ ಮಾಡಿದ ಉತ್ತಮ ಕಾರ್ಯವೇ ಅವರನ್ನು ಜನಸಾಮಾನ್ಯರ ನೆನಪಿನಲ್ಲಿ ಸದಾ ಉಳಿಯುವಂತೆ ಮಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೇವಗಿರಿ ಗ್ರಾಮ ಪಂಚಾಯತ ಅಧ್ಯಕ್ಷೆ ರತ್ನಾ ಸುರೇಶ ಹರಿಕಾಂತ ಮಾತನಾಡಿ, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಗ್ರಾಪಂ ಉಪಾಧ್ಯಕ್ಷ ಎಸ್. ಟಿ. ನಾಯ್ಕ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಯುವಕರೇ ದೇಶದ ಸಂಪತ್ತು. ಕ್ರೀಡೆಯಿಂದ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಜೊತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು . ನಮ್ಮೂರಿನ ಎರಡು ಮುತ್ತುಗಳನ್ನು ಕಳೆದುಕೊಂಡಿದ್ದೇವೆ ದಿ. ಪವನ ನಾಯ್ಕ ರವರ ಆದರ್ಶ ಇಂದಿನ ಯುವಕರಿಗೆ ಮಾದರಿ ಎಂದರು.
ಟ್ರೋಪಿ ಅನಾವರಣಗೊಳಿಸಿ ಉದ್ಯಮಿ ಸಚಿನ ನಾಯ್ಕ ಮಾತನಾಡಿ, ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸುವುದರ ಮೂಲಕ ಗ್ರಾಮೀಣ ಜನರಲ್ಲಿ ಕ್ರೀಡಾ ಮನೋಭಾವನೆ ಬೆಳೆಯಲು ಸಾಧ್ಯ. ಶಿಸ್ತುಬದ್ಧ ಇಂತಹ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಪಾಂಡು ಪಟಗಾರ, ದೇವೇಂದ್ರ ಶೇರುಗಾರ,ಸುದೀಶ ನಾಯ್ಕ, ಉದ್ಯಮಿ ರಾಮದಾಸ ಪೈ, ಗೋಪಾಲ ಮಡಿವಾಳ, ರಾಜು ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಿಕ್ಷಕ ನಾಗರಾಜ ಭಂಡಾರಿ ಸ್ವಾಗತಿಸಿದರೆ, ಯುವಜನ ಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ವಂದಿಸಿದರು. ಪಂದ್ಯಾವಳಿಯ ಮುಖ್ಯಸ್ಥ ರಾಜೇಶ್ ಪೈ, ವಿನಾಯಕ ನಾಯ್ಕ,ಮಣಿಕಂಠ ನಾಯ್ಕ, ಚಿರಂಜೀವಿ ನಾಯ್ಕ, ಪ್ರಸನ್ನ ನಾಯ್ಕಮುಂತಾದವರು ಸಹಕರಿಸಿದರು.

error: