May 18, 2024

Bhavana Tv

Its Your Channel

ಗುಣವಂತೆಯ ಶ್ರೀ ಶಂಭುಲಿoಗೇಶ್ವರ ದೇವರ ಸನ್ನಿಧಿಯಲ್ಲಿ ಶಿವರಾತ್ರಿಯ ಪ್ರಯುಕ್ತ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ

ಹೊನ್ನಾವರ: ಪಂಚ ಕ್ಷೇತ್ರಗಳಲ್ಲೊಂದಾಗಿರುವ ಗುಣವಂತೆಯ ಪುರಾಣ ಪ್ರಸಿದ್ಧ ಶ್ರೀ ಶಂಭುಲಿAಗೇಶ್ವರನ ದೇವರ ಸನ್ನಿಧಿಯಲ್ಲಿ ಶಿವರಾತ್ರಿಯ ಪ್ರಯುಕ್ತ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿoದ ನಡೆಯಿತು.
ಭಕ್ತರಿಗಾಗಿ ಬೆಳಿಗ್ಗೆ 5 ಗಂಟೆಯಿAದಲೇ ದರ್ಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶ್ರೀ ದೇವರಿಗೆ ಕ್ಷೀರಾಭೀಷೇಕ, ರುದ್ರಾಭೀಷೇಕ, ಜಲಾಭಿಷೇಕ, ಸೇರಿದಂತೆ ವಿವಿಧ ಸೇವೆಗಳು ನಡೆದವು. ಗುಣವಂತೆಯ ಶ್ರೀ ಶಂಭುಲಿAಗೇಶ್ವರ ದೇವರ ಸನ್ನಿಧಿ ಶಿವರಾತ್ರಿ ಆಚರಣೆಗೆ ಪ್ರಸಿದ್ಧವೆನಿಸಿದೆ. ದೇವಾಲಯದ ಮುಂಭಾಗದಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ನಿವಾರಣೆಯಾಗಲಿದೆ ಎನ್ನುವ ಪ್ರತೀತಿ ಇದೆ. ಶಿವರಾತ್ರಿಯ ನಿಮಿತ್ತ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಹೊನ್ನಾವರ ಪಟ್ಟಣದ ಶ್ರೀ ಮೂಡಗಣಪತಿ ದೇವಾಲಯ, ಶ್ರೀ ಚಂದ್ರಮೌಳೇಶ್ವರ, ಶ್ರೀ ರಾಮತೀರ್ಥದ ರಾಮೇಶ್ವರ, ಗ್ರಾಮೀಣ ಭಾಗದ ಮಾಳಕೋಡ ಶ್ರೀ ಕ್ಷೇತ್ರಪಾಲೇಶ್ವರ, ಖರ್ವಾ ಹಸಿಮನೆಯ ಶ್ರೀ ಕೋದಂಡೇಶ್ವರ, ಮೂಡ್ಕಣಿಯ ಶ್ರೀ ಶಂಭುಲಿಗೇಶ್ವರ, ಕಡ್ನೀರು ಶ್ರೀ ಮಹಾಲಿಂಗೇಶ್ವರ, ಉಪ್ಲೆಯ ಶ್ರೀ ಮಹಾಲಿಂಗೇಶ್ವರ, ದಿಬ್ಬಣಗಲ್ ಶ್ರೀ ಗಣಪತಿ ಈಶ್ವರ, ಶ್ರೀ ಶಂಭುಲಿAಗೇಶ್ವರ ದೇವಾಲಯ ಹಡಿನಬಾಳ, ಕೊಡಾಣಿಯ ಶ್ರೀ ಕಾಮೇಶ್ವರ, ಕರ್ಕಿಯ ಸರ್ಪಕರ್ಣೇಶ್ವರ, ಶಿರೂರಿನ ಶ್ರೀ ಭೈರವೇಶ್ವರ, ಚಂದಾವರದ ಶ್ರೀ ಕೋನೇಶ್ವರ, ಸಾಲ್ಕೋಡ ಶ್ರೀ ಬೊಂಡಕಾರೇಶ್ವರ, ದರ್ಬೆಜಡ್ಡಿ ಶ್ರೀ ಸೋಮೇಶ್ವರ, ಮಂಕಿ ಶ್ರೀ ಕೋಕ್ಕೇಶ್ವರ ಸೇರಿದಂತೆ ವಿವಿಧ ಶಿವ ಸಾನಿಧ್ಯವಿರುವ ದೇವಾಲಯಗಳಲ್ಲಿ ಶಿವಾರಾಧನೆ ಆಚರಣೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಡ್ನೀರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಶಿವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ದೇವರಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ ಬೆಳಿಗ್ಗೆಯಿಂದ ಸಂಜೆಯ ತನಕ ನಡೆಯಿತು. ವರದಶಂಕರ ವ್ರತ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ನಾಡಿನ ವಿವಿಧ ಭಾಗಗಳಿಂದ ನೂರಾರು ಭಕ್ತರು ಭೇಟಿ ನೀಡಿ ವಿವಿಧ ಸೇವೆ ಸಲ್ಲಿಸಿ, ಕೃತಾರ್ಥರಾದರು.

error: