May 18, 2024

Bhavana Tv

Its Your Channel

ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಕೊಡುಗೆ-ಡಾ. ಡಿ. ಎಲ್. ಹೆಬ್ಬಾರ

ಹೊನ್ನಾವರ ಫೇ.18:- 2023ರಂದು ಮಂಡನೆಯಾದ ಕರ್ನಾಟಕ ಸರ್ಕಾರದ ಮುಂಗಡ ಪತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ 37,960 ಕೋಟಿ ಅನುದಾನ ನೀಡಿ ಉದಾರತೆಯನ್ನು ಮೆರೆದಿದೆ.ಸರ್ಕಾರಿ ಕಾಲೇಜುಗಳಲ್ಲಿ ಓದುವ ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿನಿಯರಿಗೆ ಉಚಿತ ಬಸ್-ಪಾಸ್ ನೀಡಿರುವುದು ಯುವಕ-ಯುವತಿಯರ ಸಂತೋಷಕ್ಕೆ ಕಾರಣವಾಗಿದೆ. ಅಲ್ಲದೇ ಪದವಿಧರ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ರೂ.2000 ಆರ್ಥಿಕ ನೆರವು ಘೋಷಿಸಿರುವುದು ನಿರುದ್ಯೋಗಿ ಯುವಕರಲ್ಲೂ ಆಶಾ ಭಾವನೆ ಮೂಡಿಸಿದೆ.ಒಂದು ಸಾವಿರ ಶಾಲಾ ಬಸ್ ಸೌಲಭ್ಯವನ್ನು ಘೋಷಿಸಿರುವುದು ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳಕ್ಕೆ ಕಾರಣವಾಗಬಹುದು.
ಪ್ರಸ್ತುತ ಮುಂಗಡ ಪತ್ರದಲ್ಲಿ ಸಾಲವನ್ನು ಕಡಿತಗೊಳಿಸಿ ಆದಾಯಕ್ಕೆ ಹೆಚ್ಚಿನ ಆಧ್ಯತೆ ನೀಡಿ ಮಿಗುತೆಯ ಮುಂಗಡ ಪತ್ರ ಮಂಡಿಸಿ ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿರುವುದು ಮುಂಗಡ ಪತ್ರದ ವಿಶೇಷತೆಯಾಗಿದೆ.ಮಹಿಳಾ ಉದ್ಯೋಗಿಗಳಿಗೆ ಉಚಿತ ಬಸ್-ಪಾಸ್ ಸೌಲಭ್ಯ, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರ ಗೌರವಧನದಲ್ಲಿ ಹೆಚ್ಚಳ, ಮಹಿಳಾ ಕೃಷಿ ಮತ್ತು ಕೂಲಿ ಕಾರ್ಮಿಕರಿಗೆರೂ.500 ಮಾಶಾಸನ ಮುಂತಾದವುಗಳು ಸರ್ಕಾರದ ಮಹಿಳಾ ಸಬಲೀಕರಣದ ಗುರುತುಗಳಾಗಿವೆ.
ಉತ್ತರಕನ್ನಡಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಸುಪರ್ ಸ್ಪೇಷಲಿಟಿ ಆಸ್ಪತ್ರೆ ಘೋಷಿಸಿರುವುದು ಜಿಲ್ಲೆಯ ಜನರಿಗೆ ಸಂತೋಷವನ್ನುAಟುಮಾಡಿದೆ.ಏಕೆAದರೆ ಕುಮಟಾ ತಾಲೂಕು ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳು ಹಾಗೂ ಕರಾವಳಿ ತಾಲೂಕುಗಳ ಕೇಂದ್ರಸ್ಥಾನವಾಗಿದೆ.ಇದು ಈ ಭಾಗದಜನರ ಆರೋಗ್ಯದ ಕಾಳಜಿಗೆ ಸಾಕ್ಷಿಯಾಗಿದೆ.
ರೈತರಿಗೆ ಬಡ್ಡಿರಹಿತ ಸಾಲದಲ್ಲಿ ಹೆಚ್ಚಳ, ಸಣ್ಣರೈತರಿಗೆ ‘ಜೀವನಜ್ಯೋತಿ’ ಯೋಜನೆ, ನೀರಾವರಿ ಯೋಜನೆಗಳಿಗೆ ಆಧ್ಯತೆ ಮುಂತಾದವು ಕೃಷಿ ಕ್ಷೇತ್ರದ ಕಾಳಜಿಯನ್ನು ತೋರಿಸುತ್ತದೆ. ರಾಯಚೂರು, ಗುಲ್ಬರ್ಗಾ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ‘ಜವಳಿ ಪಾರ್ಕ್’ ಘೋಷಿಸಿರುವುದು ಉದ್ಯೋಗ ಸೃಷ್ಟಿಗೆ ಕಾರಣವಾಗಬಹುದು.
ಆದರೆ, ಉಚಿತಉನ್ನತ ಶಿಕ್ಷಣವು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆಅನ್ವಯವಾಗುತ್ತದೆಯೋ ಇಲ್ಲವೋ ಎನ್ನುವ ಸ್ಪಷ್ಟತೆ ಇರುವುದಿಲ್ಲ. ಅಲ್ಲದೇ ಸರ್ಕಾರಿ ಕಾಲೇಜುಗಳಿಗೆ ಮಾತ್ರ ಹೆಚ್ಚಿನ ಸೌಲಭ್ಯವನ್ನು ನೀಡಿರುವುದುಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಕೆಂಗಣ್ಣಿಗೆಗುರಿಯಾಗಿದೆ.ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನಆಧ್ಯತೆ ನೀಡದೇಇರುವುದು ಸಮಗ್ರ ಗ್ರಾಮೀಣ ಪ್ರಗತಿಗೆ ಮಾರಕವಾಗಿದೆ ಎಂದು ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಅರ್ಥಶಾಸ್ತç ವಿಭಾಗದ ಡಾ. ಡಿ. ಎಲ್. ಹೆಬ್ಬಾರ ಹೇಳಿದ್ದಾರೆ

error: