
ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮ ಪಂಚಾಯತಿಯ ಸದಸ್ಯರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಏಣಿಕೆ ಮಂಗಳವಾರ ಪಟ್ಟಣದ ಮಿನಿವಿಧಾನಸೌದದಲ್ಲಿ ಜರುಗಿತು.
ಚುನಾವಣಾ ಕಣದಲ್ಲಿ ಗಣೇಶ ಗೌಡ ಮತ್ತು ನಾಗೇಶ ನಾಯ್ಕ ಇರ್ವರು ಇದ್ದರು. ಮತ ಏಣಿಕೆಯ ಬಳಿಕ ಅಂತಿಮವಾಗಿ ನಾಗೇಶ ನಾಯ್ಕ ಜಯಗಳಿಸುವ ಮೂಲಕ ಸದಸ್ಯರಾಗಿ ಆಯ್ಕೆಯಾದರು.
ಬಂಕನಹಿತ್ಲ ವಾರ್ಡನಲ್ಲಿ ಒಟ್ಟೂ-1060 ಮತದಾರರಿದ್ದು, 521 ಪುರುಷ, 539 ಮಹಿಳಾ ಮತದಾರರಿದ್ದರು. ಶನಿವಾರ ನಡೆದ ಮತದಾನದಲ್ಲಿ 655 ಜನರು ಹಕ್ಕು ಚಲಾಯಿಸಿದ್ದರು. ಮಂಗಳವಾರ ಮತ ಎಣಿಕೆಯಲ್ಲಿ ನಾಗೇಶ ನಾಯ್ಕ 367, ಗಣೇಶ ಗೌಡ 274 ಮತಗಳನ್ನು ಪಡೆದರೆ 14 ಮತಗಳು ತಿರಸ್ಕೃತವಾಗಿದೆ. ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ್,ಚುನಾವಣಾಧಿಕಾರಿ ರಾಜು ನಾಯ್ಕ, ಎಣೆಕೆ ಮೇಲ್ವಿಚಾರಕರಾಗಿ ಬಿ.ಆರ್.ನಾಯ್ಕ. ಎಣಿಕೆ ಸಹಾಯಕರಾಗಿ ಸುಧೀಶ ನಾಯ್ಕ, ಸಹಾಯಕ ಚುನಾವಣಾಧಿಕಾರಿ ಸುನೀಲ ಶೇಟ್, ಮುಖ್ಯ ತರಬೇತಿದಾರ ಎಲ್.ಜಿ.ಭಟ್, ಚುನಾವಣಾ ಪ್ರಥಮ ದರ್ಜೆ ಸಹಾಯಕ ಕೇಶವ ಎಣಿಕೆ ಕಾರ್ಯ ನಡೆಸಿಕೊಟ್ಟರು. ನಂತರ ಆಯ್ಕೆಯಾದ ನಾಗೇಶ ನಾಯ್ಕ ಇವರಿಗೆ ತಹಶೀಲ್ದಾರ ಉಷಾ ಪಾವಸ್ಕರ್ ಆದೇಶ ಪ್ರತಿ ವಿತರಿಸಿದರು.
More Stories
ಹೊನ್ನಾವರ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ
ವಿಜೃಂಭಣೆಯಿoದ ನಡೆದ ಹಿರೇಬೈಲ್ ಶ್ರೀ ಶಂಭುಲಿoಗೇಶ್ವರ ದೇವರ 50 ನೇ ವರ್ಧಂತಿ ಉತ್ಸವ
ಅಕ್ರಮ ಮರಳು ಅಡ್ಡೆಯ ಮೇಲೆ ಸಿಪಿಐ ಮಂಜುನಾಥ ಇ.ಓ ನೇತ್ರತ್ವದಲ್ಲಿ ದಾಳಿ