May 6, 2024

Bhavana Tv

Its Your Channel

ಗೇರುಸೊಪ್ಪಾ ಕೆ.ಪಿ.ಸಿ ಸಿಬ್ಬಂದಿಗಳು ಆಯೋಜಿಸಿದ ಮಹಿಳಾ ದಿನಾಚರಣೆ ಕಾರ್ಯಕ್ರಮ

ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಕೆ.ಪಿ.ಸಿ ಕಛೇರಿಯ ಆವರಣದಲ್ಲಿ ಕೆ.ಪಿ.ಸಿ ಸಿಬ್ಬಂದಿಗಳು ಆಯೋಜಿಸಿದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯೆ ವಿಜಯಲಕ್ಷ್ಮಿ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿ ಇಂದು ಮಹಿಳೆಯರು ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ತಾಯಿಯಾಗಿ, ಸಹೋದರಿಯಾಗಿ ಎಲ್ಲರೊಡನೆ ಪ್ರೀತಿ ವಿಶ್ವಾಸದಿಂದ ಜೀವನ ನಡೆಸುತ್ತಿದ್ದಾಳೆ. ಪ್ರತಿ ರಂಗದಲ್ಲಿರುವoತೆ ಕೆ.ಪಿ.ಸಿಯಲ್ಲಿಯೂ ಅನೇಕ ಮಹಿಳಾ ಸಿಬ್ಬಂದಿಗಳು ಇದ್ದು, ಪುರುಷ ಸಿಬ್ವಂದಿಗಳoತೆ ಶ್ರಮಿಸುತ್ತಿದ್ದಾರೆ ಎಂದರು.
ಗೇರುಸೊಪ್ಪಾ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ, ಸರ್ಕಾರದ ಸೌಲಭ್ಯವನ್ನು ಬಳಸಿಕೊಂಡು ಎಲ್ಲಾ ರಂಗದಲ್ಲಿಯೂ ಇನ್ನಷ್ಟು ಸಾಧನೆ ಮಾಡಬೇಕಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕೆ.ಪಿ.ಸಿ.ಮಹಿಳಾ ಉದ್ಯೋಗಿ ಸಂಘದ ಅಧ್ಯಕ್ಷೆ ಶ್ರೀಲಕ್ಷ್ಮೀ ವಿ.ಶಂಕರ್ ಮಾತನಾಡಿ ಜಗತ್ತಿನ ಎಲ್ಲಡೆಯು, ಮಹಿಳೆಯರು ಉದ್ಯೋಗದಲ್ಲಿದ್ದು, ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬ ನಿರ್ವಹಣೆಯ ಜೊತೆ, ತಾನು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿಯೂ ಯಶ್ವಸಿಯಾಗಿ  ನಿಭಾಯಿಸುತ್ತಿದ್ದಾರೆ. ಕೇವಲ ಒಂದು ದಿನ ಮಹಿಳೆಯರನ್ನು ಗೌರವಿಸದೇ, ಪ್ರತಿ ದಿನವು ಅವರ ಸೇವೆ ಗುರುತಿಸಿ ಗೌರವಿಸುವ ಕಾರ್ಯ ಮಾಡಬೇಕಿದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅಭಿಯಂತರಾದ ನಾರಾಯಣ ಗಜಕೋಶ್, ಮಹೇಂದ್ರ ಜೆ.ಸಿ, ಅಧಿಕ್ಷಕ ಅಭಿಯಂತರಾದ ರಾಯಪ್ಪ ಸಿಂಧೋಳ್, ಮೋಹನ ಜೆ.ಇ, ಕೆ.ಪಿ.ಸಿ ಅಧಿಕಾರಿಗಳಾದ ಪ್ರಕಾಶ್ ಕುಮಾರ ಎಸ್, ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಿಬ್ಬಂದಿಗಳಿoದ ಫ್ಯಾಶನ್ ಶೋ ಜರುಗಿತು. ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ ಹೂವಿನ ಗಿಡ ವಿತರಿಸಲಾಯಿತು.
error: