
ಹೊನ್ನಾವರ: ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಕರೆದು ಕೇವಲ ನನ್ನ ಭಾಷಣದ ಕೆಲವು ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೆಲವರಿಂದ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗಿದೆ ಎಂದು ಮಾವಿನಕುರ್ವಾ ಸಾನಮೋಟಾ ನಿವಾಸಿ ಗೋವಿಂದ ಗೌಡ ಆರೋಪಿಸಿದರು.
ಈ ಕುರಿತು ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸಾನಾಮೋಟದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ನಡೆಸಿದಾಗ ಊರಿಗೆ ಗಣ್ಯ ವ್ಯಕ್ತಿ ಬರುತ್ತಾರೆ ಅವರಿಗೆ ಸ್ವಾಗತ ಮಾಡಬೇಕು,ವೇದಿಕೆಯಲ್ಲಿ ಸನ್ಮಾನ ಮಾಡಬೇಕು ಎಂದು ಹೇಳಿದ್ದರು. ಇದರಿಂದ ನಮ್ಮೂರಿನ ಸಮಸ್ಯೆ ಬಗ್ಗೆ ವೇದಿಕೆಯಲ್ಲಿ ಭಾಷಣ ನಾನು ಇಚ್ಚೆಪಟ್ಟು ಮಾಡಿ ಗ್ರಾಪಂ ಅಧ್ಯಕ್ಷ ಜಿ.ಜಿ ಶಂಕರ್ ಹೆಸರು ಪ್ರಸ್ತಾಪಿಸಿದ ನನ್ನೊಬ್ಬನ ಭಾಷಣ ಮಾತ್ರ ಎಡಿಟ್ ಮಾಡಿ ಮೊಬೈಲ್ ಗಳಲ್ಲಿ ಹರಿಬಿಟ್ಟು ನನ್ನ ಮರ್ಯಾದೆ ತೆಗೆಯುವ ಕೆಲಸವನ್ನು ಮಾಡಿದ್ದಾರೆ. ಭಾಷಣ ಪ್ರಾರಂಭದಲ್ಲಿ ಈ ಹಿಂದಿನ ಅವಧಿಯ ಗ್ರಾಪಂ ಅಧ್ಯಕ್ಷ ತಿಲಕ್ ಗೌಡ ಅವರ ಅವಧಿಯ ಕಾಮಗಾರಿ ಬಗ್ಗೆಯು ವಿಷಯ ಪ್ರಸ್ತಾಪಿಸಿದ್ದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋದಲ್ಲಿ ಜಿ.ಜಿ ಅವರ ಬಗ್ಗೆ ಆಡಿದ ಮಾತನ್ನು ಮಾತ್ರ ಹಾಕಿದ್ದಾರೆ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಯಾರು ಕೂಡಾ ಈ ರೀತಿ ಮಾಡಿ ತೇಜೊವಧೆ ಮಾಡಬಾರದು ಎಂದು ಅಸಮಧಾನ ತೊಡಿಕೊಂಡರು.
ಗೋವಿAದ ಅವರ ಹಿರಿಯ ಪುತ್ರ ಮಂಜುನಾಥ ಗೌಡ ಮಾತನಾಡಿ, ನಮ್ಮ ಗಮನಕ್ಕೆ ತರದೇ ವಯಸ್ಸಾದ ತಮ್ಮ ತಂದೆಯವರನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಮನೆಯಿಂದ ಕರೆದೊಯ್ದಿದ್ದಾರೆ. ವೇದಿಕೆಯಲ್ಲಿ ಎಲ್ಲರ ಭಾಷಣ ಮರೆಮಾಚಿ ತಂದೆಯವರ ಭಾಷಣ ಮಾತ್ರ ಹಾಕಿರುವುದಕ್ಕೆ ಅಸಮಧಾನವಿದೆ ಎಂದರು.
ಇನ್ನೊರ್ವ ಪುತ್ರ ರಾಘವೇಂದ್ರ ಗೌಡ ಮಾತನಾಡಿ, ಇಂದು ಒಬ್ಬ ಅಮಾಯಕ ವ್ಯಕ್ತಿಯನ್ನು ಉದ್ದೇಶ ಪೂರ್ವಕವಾಗಿ ತೇಜೋವದೆ ಮಾಡುವ ಪ್ರಯತ್ನವಾಗಿದೆ. ಇಂತಹ ಕುಚೋಧ್ಯ ರಾಜಕೀಯ ಮಾಡಬಾರದು. ತಿಲಕ್ ಗೌಡ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪಂಚಾಯತ ಕಾಮಗಾರಿಗಾಗಿ ತೆಂಗಿನ ಮರ ತೆಗೆದು ಪರಿಹಾರ ಕೊಟ್ಟಿಲ್ಲವಾಗಿದ್ದರು, ಈ ಬಗ್ಗೆ ತಮ್ಮ ತಂದೆ ಪ್ರಶ್ನಿಸಿದ್ದರು. ಆದರೆ ಇದನ್ನು ವಿಡಿಯೋದಲ್ಲಿ ಸೇರಿಸಿಲ್ಲ. ಇದು ವ್ಯವಸ್ಥಿತ ಹುನ್ನಾರ ಎಂದು ಆರೋಪಿಸಿದರು.
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ