April 29, 2024

Bhavana Tv

Its Your Channel

ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ

ಹೊನ್ನಾವರ: ನ್ಯಾಶನಲ್ ಲೆವೆಲ್ ಕಾಂಪಿಟೆಟಿವ್‌ಎಕ್ಸಾಮಿನೇಶನ್ ಕಮ್ ಸ್ಕಾಲರ್‌ಶಿಪ್ ಇವರು ನಡೆಸಿದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಹೊನ್ನಾವರ ತಾಲೂಕಿನ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಏಳನೇಯ ತರಗತಿ ವಿದ್ಯಾರ್ಥಿ ಜಾನ್ವಿ ವಿಜಯ ನಾಯ್ಕ ಎರಡÀನೇ ರ‍್ಯಾಂಕ್, ಹತ್ತನೇ ತರಗತಿ ವಿದ್ಯಾರ್ಥಿ ಪಿ.ವಿವೇಕ್ ಮೂರನೇ ರ‍್ಯಾಂಕ್, ಮೂರನೇ ತರಗತಿ ವಿದ್ಯಾರ್ಥಿ ಆರುಷ್ ಗಣೇಶ ಭಟ್ ಮೂರನೇ ರ‍್ಯಾಂಕ್, ಮತ್ತು ಚಿನ್ಮಯಿ ಹೆಗಡೆ ಚಿನ್ನದ ಪದಕವನ್ನು ಪಡೆದಿದ್ದಾರೆ.
ಒಟ್ಟು 96 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದು ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಮತ್ತು ಕ್ಲಾಸ್ ಟಾರ‍್ಸ್ ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರವನ್ನು ಕೊಟ್ಟಿರುತ್ತಾರೆ.
ಈ ಎಲ್ಲಾ ವಿದ್ಯಾರ್ಥಿಗಳ ಈ ಸಾಧನೆಗೆ ಎಂ.ಪಿ.ಇ.ಸೊಸೈಟಿಯ ಆಡಳಿತ ಮಂಡಳಿ, ಅಧ್ಯಕ್ಷರು, ಸರ್ವ ಸದಸ್ಯರು, ಶಾಲೆಯ ಪ್ರಾಂಶುಪಾಲರು, ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

error: