ಹೊನ್ನಾವರ: ಅಪಘಾತ ಪರಿಹಾರ ವಿಮಾ ಹಣವನ್ನು ಮೃತರ ಕುಟುಂಬಕ್ಕೆ ನೀಡದೇ ಇದ್ದರಿಂದ ಕೆ.ಎಸ್.ಆರ್.ಟಿ.ಸಿ. ಕುಮಟಾ ಡಿಪೋ ಬಸ್ ಒಂದನ್ನು ಜಪ್ತಿಪಡಿಸಿಕೊಂಡ ನ್ಯಾಯಾಲಯದ ಸಿಬ್ಬಂಧಿಗಳು ಬಸ್‌ನ್ನು ಮಂಗಳವಾರ ನ್ಯಾಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ತಾಲೂಕಿನ ಕೆಕ್ಕಾರ ಗ್ರಾಮದ ಶಂಕರ ಗೌಡ ಎಂಬಾತ ೨೦೧೯ ರ ಅಗಸ್ಟ ತಿಂಗಳಲ್ಲಿ ಅಂಕೋಲಾದ ಹೊಸೂರ ಕ್ರಾಸ್ ಬಳಿ ಬಸ್ ಹತ್ತಿ ಮನೆಗೆ ಮರಳುತ್ತಿದ್ದ. ಆ ಸಮಯದಲ್ಲಿ ಬಸ್ಸಿನಿಂದ ರಸ್ತೆಗೆ ಬಿದ್ದು ಮೃತನಾಗಿದ್ದ. ಮೃತನ ಪತ್ನಿ ನಾಗರತ್ನ ಗೌಡ ಅಪಘಾತ ಪರಿಹಾರ ಕೋರಿ ಹೊನ್ನಾವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಳು.
ಪ್ರಕರಣವನ್ನು ವಿಚಾರಣೆ ಮಾಡಿದ ನ್ಯಾಯಾಲಯವು ಮೃತನ ಕುಟುಂಬಕ್ಕೆ ಪರಿಹಾರ ಹಣ ನೀಡಲು ಆದೇಶ ನೀಡಿತ್ತು. ನ್ಯಾಯಾಲಯ ನೀಡಿದ ಅವಧಿಯಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆೆ್ಥಯು ಮೃತನ ಕುಟುಂಬಕ್ಕೆ ಪರಿಹಾರ ನೀಡಿರಲಿಲ್ಲ.
ಕೋರ್ಟ ಹೇಳಿದ ಅವಧಿಯಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಹಣ ನೀಡದೇ ಇದ್ದರಿಂದ ಅರ್ಜಿದಾರಳು ಕೆ.ಎಸ್.ಆರ್.ಟಿ.ಸಿ ವಿರುದ್ಧ ಹಣ ವಸೂಲಿಗೆ ಅಮಲ್‌ಜಾರಿ ಪ್ರಕರಣ ದಾಖಲಿಸಿ ನ್ಯಾಯಾಲಯವು ಹೇಳಿದ ಮೊತ್ತ ಹಾಗೂ ಅದರ ಮೇಲಿನ ಬಡ್ಡಿ ಎಲ್ಲಾ ಸೇರಿ, ರೂ. ೧೬,೪೬,೩೮೮/- ಪರಿಹಾರ ನೀಡಬೇಕು ಎಂದು ಕೋರಿ ಕೊಂಡಿದ್ದಳು. ಆಗಲೂ ಸಹ ಕೆ.ಎಸ್.ಆರ್.ಟಿ.ಸಿ ಹಣ ಪಾವತಿಸಲು ವಿಫಲ ಆದ ಹಿನ್ನೆಲೆಯಲ್ಲಿ ಹೊನ್ನಾವರ ನ್ಯಾಯಾಧೀಶ ಕುಮಾರ ಜಿ ಬಸ್ ಜಪ್ತಿಪಡಿಸಲು ಆದೇಶ ನೀಡಿದ್ದರು.
ನ್ಯಾಯಾಲಯದ ಆದೇಶದ ಅನ್ವಯ ಹೊನ್ನಾವರ ಸೀವಿಲ್ ಕೋರ್ಟ ಸಿಬ್ಬಂದಿಗಳಾದ ಎಸ್.ಎಸ್ ಗೊಂಡಾ ಹಾಗೂ ಎಸ್ ಎನ್ ಶೆಟ್ಟಿ ಬಸ್ ಜಪ್ತಿ ಪಡಿಸಿಕೊಂಡು ಮಂಗಳವಾರ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದರು. ಅರ್ಜಿದಾರಳ ಪರವಾಗಿ ನ್ಯಾಯವಾಧಿ ಎಮ್.ಎಲ್ ನಾಯ್ಕ ಪ್ರತಿನಿಧಿಸಿದ್ದರು.
More Stories
ಬಿ.ಎಸ್.ಎಸ್. ಮೈಕ್ರೊ ಪೈನಾನ್ಸ ಲಿಮೆಟಿಡ್ ವತಿಯಿಂದ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮನೆಗೆ ಆಕಸ್ಮಿಕವಾಗಿ ಬೆಂಕಿ
ಹೊನ್ನಾವರದ ಎಸ್.ಡಿ.ಎಂ.ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪುಸ್ತಕ ‘ಬ್ಲೂಮ್’ ಬಿಡುಗಡೆ.