May 13, 2024

Bhavana Tv

Its Your Channel

ಸಾಲ್ಕೋಡ ಗ್ರಾಮದಲ್ಲಿ ಜನಪ್ರತಿನಿಧಿಗಳ ಅಧಿಕಾರಿಗಳ ನಿಲಕ್ಷದಿಂದ ತೋಟ ಮನೆಗಳಿಗೆ ನೀರು ನುಗ್ಗಿದೆ.

ಹೊನ್ನಾವರ ; ಸಾಲ್ಕೋಡ್ ಹೊಳೆಗೆ ಚೆಕ್ ಡ್ಯಾಂ ನಿರ್ಮಾಣವಾಗಿತ್ತು. ಈ ತಡೆಗೋಡೆಗೆ ಬೃಹತ ಮರ ತೇಲಿ ಬಂದು ನಿಂತಿರುವ ಬಗ್ಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಮಾಹಿತಿ ನೀಡಿ ಮಳೆ ತಿವ್ರಗೊಂಡರೆ ಸಮಸ್ಯೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ವಾರ ಕಳೆದರೂ ಆ ಮರ ತೆರವು ಮಾಡದೇ ಇದ್ದ ಪರಿಣಾಮ ಶನಿವಾರ ರಾತ್ರಿ ಸುರಿದ ಮಳೆಯಿಂದ ಇನ್ನಷ್ಟು ಕಸ ಸೇತುವೆ ತಡೆಗೋಡೆ ಶೇಖರಣೆಗೊಂಡು, ಹೊಳೆಯಂಚಿನ ಹತ್ತಾರು ಮನೆಯ ಅಡಿಕೆ ತೋಟ ಮತ್ತು ಮಂಗೊಳ್ಳಿ ಕೇರಿಯ ನಾಲ್ಕು ಮನೆಗೆ ನೀರು ನುಗ್ಗಿದೆ. ಸಾಲ್ಕೋಡ್ ಹೊಳೆಗೆ ಅಳವಡಿಸಿದ ಅಡಿಕೆ ಮರದ ಕಾಲುಸಂಕದ ಮೇಲೆ ನೀರು ಹರಿಯುತ್ತಿರುದರಿಂದ ಸಾಲ್ಕೋಡ್ ಭಾಗದಿಂದ ಕೊಡಾರಿ, ಕೊಂಡಾಕುಳಿ, ಹಮ್ಮೋಡಿ, ಗಾಣಗೇರಿ ಸಂಪರ್ಕ ಕಡಿತವಾಗಿದೆ. ಸ್ಥಳಿಯ ಗ್ರಾ.ಪಂ. ಮನವಿಯನ್ನು ತಾಲೂಕಾಡಳಿತ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ನಿಲಕ್ಷದಿಂದ ಈ ಸಮಸ್ಯೆ ಉದ್ಬವಿಸಿದ್ದು, ಹತ್ತಾರು ಮನೆಗೆ ನೀರು ನುಗ್ಗಿ ಹಾನಿಯಾಗುವ ಮುನ್ನ ಕಾಲುಸಂಕದ ಸಂಚಾರಿಸುವ ಅಪಾಯ ಉಂಟಾಗುವ ಮುನ್ನ ಈ ಸೇತುವೆಯ ಬಳಿ ಸಂಗ್ರಹವಾದ ಕಸ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

error: