May 13, 2024

Bhavana Tv

Its Your Channel

ಭಾಸ್ಕೇರಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳ, ತಗ್ಗು ಪ್ರದೇಶಗಳಿಗೆ ನೀರು

ಹೊನ್ನಾವರ ತಾಲೂಕಿನೆಲ್ಲಡೆ ವ್ಯಾಪಕವಾದ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಗುಂಡಬಾಳ,ಹಾಗೂ ಭಾಸ್ಕೇರಿ ಹೊಳೆಯಲ್ಲಿ ನೀರಿನ ಹರಿವು ಭಾನುವಾರ ಹೆಚ್ಚಳವಾಗಿದೆ. ಪರಿಣಾಮ ತಗ್ಗು ಪ್ರದೇಶದ ವ್ಯಾಪ್ತಿಯಲ್ಲಿನ ತೋಟ, ಗದ್ದೆ, ಮನೆಗಳಿಗೆ ನೀರು ನುಗ್ಗಿದೆ.
ಗುಂಡಿಬೈಲ್, ಚಿಕ್ಕನಕೋಡ, ಮುಟ್ಟಾ, ಹೆಬೈಲ್, ಕೆಂಚಗಾರ, ಗುಂಡಬಾಳ ದೇವಸ್ಥಾನಕೇರಿ, ಹೊಸಾಕುಳಿ ಗ್ರಾ.ಪಂ. ವ್ಯಾಪ್ತಿಯ ಭಾಸ್ಕೇರಿ, ಹೊಸಾಕುಳಿ, ಹಡಿನಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ಅಂಚಿನ ಮನೆಗಳಿಗೆ ನೆರೆಯ ನೀರು ನುಗ್ಗಿದೆ. ಮಳೆಯು ತಿವ್ರವಾಗಿರುದರಿಂದ ನದಿ ತೀರದ ಜನರು ಆತಂಕದಲ್ಲಿ ಇದ್ದಾರೆ. ಹೊಳೆಯ ನೀರಿನ ಹರಿವು ಹೆಚ್ಚಾದಂತೆ ಮನೆಯ ಒಳಗೆ ಹೋಗುವ ಸಾಧ್ಯತೆ ಇದ್ದು, ದೋಣಿಯ ಮೂಲಕ ಜನ,ಜಾನುವಾರು ಸಾಗಾಟಕ್ಕೆ ತಾಲ್ಲೂಕು ಆಡಳಿತ ಸಿದ್ದತೆ ಮಾಡಿಕೊಳ್ಳುತ್ತಿದೆ. ತಾಲೂಕಿನ ವಿವಿಧಡೆ ತೋಟ ಗದ್ದೆಗಳಿಗೆ ನೀರು ನುಗ್ಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಹಾಗೂ ನೋಡೆಲ್ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸಿಬ್ಬಂದಿ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಭಾಸ್ಕೇರಿ ಹಾಗೂ ಹೊಸಾಕುಳಿ ಭಾಗದ ಹತ್ತಾರು ಮನೆಗೆ ಸಮೀಪಕ್ಕೆ ನೀರು ಬಂದಿರುದರಿ0ದ ಕೆಲ ಕಾಲ ಆತಂಕ ವ್ಯಕ್ತವಾಗಿತ್ತು. ಸ್ಥಳಕ್ಕೆ ಗ್ರಾ.ಪಂ.ಸದಸ್ಯರಾದ ಎಚ್.ಆರ್.ಗಣೇಶ, ಮಾದೇವಿ ಮುಕ್ರಿ, ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿದರು.

error: