May 19, 2024

Bhavana Tv

Its Your Channel

ಕೋಚ್ ಕಾಶಿನಾಥ್ ನಾಯ್ಕರ ಮನೆಗೆ ನೀರಜ್ ಚೋಪ್ರಾ ಭೇಟಿ

ವರದಿ: ವೇಣುಗೋಪಾಲ ಮದ್ಗುಣಿ
ಕಾರವಾರ :- ಉತ್ತರ ಕನ್ನಡ ಜಿಲ್ಲೆ ಮೂಲದ ಕೋಚ್ ಕಾಶಿನಾಥ್ ನಾಯ್ಕರವರ ಪುಣೆಯಲ್ಲಿರುವ ಆರ್ಮಿ ಕ್ಯಾಂಪನಲ್ಲಿರುವ ಮನೆಗೆ ಆಗಮಿಸಿದ ನೀರಜ್
ಚೋಪ್ರಾ ರವರು ತಮ್ಮ ಸಾಧನೆಯ ಸಂತಸ ಹಂಚಿಕೊoಡಿದ್ದಾರೆ.ಕಾಶಿನಾಥರವರ ಪತ್ನಿ ಚೈತ್ರಾ ನಾಯ್ಕ ಆರತಿ ಬೆಳಗಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಕಾಶಿನಾಥ ಮಕ್ಕಳಾದ ದಕ್ಷ, ಲಕ್ಷ ಹಾಗೂ ಅವರ ಮನೆಯ ಸಾಕು ನಾಯಿ ರಾಕಿಯ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟರು. ಭಾರತೀಯ ಸೇನೆಯಲ್ಲಿ ಸುಬೇದಾರ ಹುದ್ದೆಯಲ್ಲಿರುವ, ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿರುವ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಕಾಶಿನಾಥ ನಾಯ್ಕ ಅವರು ಈ ಚಿನ್ನದ ಪದಕ ವೀರ ನೀರಜ್ ಚೋಪ್ರಾ ಅವರ ಹಿಂದಿನ ಶಕ್ತಿಯಾಗಿದ್ದರು.

ಎರಡು ದಶಕದಿಂದ ಸೇನೆಯಲ್ಲಿರುವ ಕಾಶಿನಾಥ ನಾಯ್ಕ, ೨೦೧೦ರ ನವದೆಹಲಿಯ ಕಾಮನ್‌ವೆಲ್ತ್ ಗೇಮ್ಸ್ನ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. ೨೦೧೩ರಿಂದ ೨೦೧೯ರವರೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು. ಆ ವೇಳೆ ನೀರಜ್ ಚೋಪ್ರಾರವರಿಗೂ ಸಹ ತರಬೇತಿ ನೀಡಿದ್ದರು. ತಾನು ತರಬೇತಿ ನೀಡಿದ್ದ ಹುಡುಗ ಚಿನ್ನ ಗೆದ್ದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ಕೂಡ ಕಾಶಿನಾಥಗೆ ೧೦ ಲಕ್ಷ ಬಹುಮಾನ ಸಹ ಘೋಷಿಸಿತ್ತು. ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲರವರ ಹೇಳಿಕೆ ನೀಡಿ ಕಾಶಿನಾಥ ಯಾರು ತನಗೆ ಗೊತ್ತೆ ಇಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ತರಬೇತಿ ನೀಡಿಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಇದು ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂಬ ಆಕ್ಷೇಪ ಅಸಮಾಧಾನ ವ್ಯಕ್ತವಾಗಿತ್ತು.ಆದರೇ ಇದೀಗ ನೀರಜ್ ಚೋಪ್ರಾ ಸ್ವತಃ ಕಾಶಿನಾಥರವರ ಮನೆಗೆ ಬಂದು ಕುಟುಂಬದವರೊAದಿಗೆ ಸಮಯ ಕಳೆದಿದ್ದಾರೆ. ನೀರಜ ಚೋಪ್ರಾ ಬರುತಿದ್ದಂತೆ ಅವರಿಗೆ ಆರತಿ ಎತ್ತಿ ಬರಮಾಡಿಕೊಂಡ ಕುಟುಂಬ ಉಭಯ ಕುಶಲೋಪರಿ ವಿಚಾರಿಸಿದರು. ತಮ್ಮ ಶಿಷ್ಯನ ಸಾಧನೆಗೆ ಸಂತಸದಿAದ ಮನೆಗೆ ಬರಮಾಡಿಕೊಂಡ ಕಾಶಿನಾಥ ರವರೊಂದಿಗೆ ನೀರಜ್ ಚೋಪ್ರಾ ಕೆಲವು ಸಮಯ ಕಳೆದರು. ಆರ್ಮಿ ಕ್ಯಾಂಪನಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ
ಚೋಪ್ರಾರವರು ಮೊದಲು ಕಾಶಿನಾಥ್ ಮನೆಗೆ ಭೇಟಿ ನೀಡಿದ್ದು ಹಿಂದೆ ಎದ್ದಿದ್ದ ವಿವಾದ ಈಗ ತಣ್ಣಗಾಗಲು ಕಾರಣವಾಗಿದೆ.

error: