May 19, 2024

Bhavana Tv

Its Your Channel

ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ‍್ಯ…….? ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ‍್ಯೋತ್ಸವ ಆಚರಣೆಗೆ ಭೂಮಿ ಹಕ್ಕು ಹೋರಾಟಗಾರರ ನಿರ್ಧಾರ

ಕಾರವಾರ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ೭೪ ನೇ ಸ್ವಾತಂತ್ರೋತ್ಸವವನ್ನು ನಮಗೇಂದು ಭೂಮಿ……..? ನಮಗೇಂದು ವಸತಿ………? ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರö್ಯ……..? ಘೋಷಣೆಯೊಂದಿಗೆ ಕೋವೀಡ್ ಶಿಷ್ಟಾಚಾರ ಪಾಲಿಸಿ ೭೪ ನೇ ಸ್ವಾತಂತ್ರೋತ್ಸವವನ್ನು ಭೂಮಿ ಹಕ್ಕು ಹೋರಾಟಗಾರರು ಆಚರಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ತಿಳಿಸಿದರು.
ಅವರು ಇಂದು ಸ್ಥಳೀಯ ಪತ್ರಿಕಾ ಭವನದಲ್ಲಿ ಅಗಸ್ಟ ೧೫, ೨೦೨೧ ರಂದು ಸ್ವಾತಂತ್ರೋತ್ಸವದ ಅಂಗವಾಗಿ ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರö್ಯ………? ಎಂಬ ಲಾಂಛನ ಬಿಡುಗಡೆಗೊಳಿಸುತ್ತಾ ಮಾತನಾಡುತ್ತಿದ್ದರು.

ಆಚರಿಸುವ ಉದ್ದೇಶ:
ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ೧೦,೫೭೧ ಚ.ಕೀ.ಮೀ ವೀಸ್ತಿರ್ಣ ಹೊಂದಿದ್ದು, ಅವುಗಳಲ್ಲಿ ೮,೫೦೦ ಚ.ಕೀ.ಮೀ ಅರಣ್ಯ. ೨,೦೭೧ ಚ.ಕೀ.ಮೀ ನಲ್ಲಿ ೧೪ ಲಕ್ಷ ಜನಸಂಖ್ಯೆ ಜೀವನ ಮಾಡುತ್ತಿದ್ದಾರೆ. ಮಲೆನಾಡು, ಬಯಲುಸೀಮೆ ಮತ್ತು ಕರಾವಳಿ ಪ್ರದೇಶ ವಿಭಿನ್ನವಾದ ನೈಸರ್ಗಿಕ ಗುಣಧರ್ಮ ಹೊಂದಿದ್ದು ವಿಶೇಷ. ಅವುಗಳಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಭೂಮಿ ಹಕ್ಕಿನ ಮಂಜೂರಿಯ ನಿರೀಕ್ಷೆಯಲ್ಲಿ ೧ ಲಕ್ಷಕ್ಕೂ ಮೀರಿ ಕುಟುಂಬವು ಜಿಲ್ಲೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಇವರೆಲ್ಲ ನಿರಾಶ್ರಿತರಾಗುವ ಅತಂತ್ರತೆಯಲ್ಲಿ, ಭೂಮಿ ಹಕ್ಕಿನಿಂದ ವಂಚಿತರಾಗಿ ಸ್ವತಂತ್ರತೆಯ ಜೀವನ ನಡೆಸುವ ಡೋಲಾಯಮಾನ ಸ್ಥಿತಿಯಲ್ಲಿ ಇರುತ್ತಾರೆ. ಇಂತಹ ನಿವಾಸಿಗಳಿಗೆ ಆಡಳಿತ ವರ್ಗದಿಂದ ನಿರಂತರ ದೌರ್ಜನ್ಯ, ಕಿರುಕುಳ, ದೈಹಿಕ
ಮತ್ತು ಮಾನಸಿಕ ಹಿಂಸೆ, ಒಕ್ಕಲೆಬ್ಬಿಸುವ ಭೀತಿ, ಕಾನೂನಿನ ಗದಪ್ರಹಾರ ಮುಂತಾದ ಸಮಸ್ಯೆಗಳಿಂದ ಪೂರ್ಣ ಪ್ರಮಾಣದ ನೆಮ್ಮದಿಯ ಸ್ವಾತಂತ್ರö್ಯದಿAದ ವಂಚಿತರಾಗಿ ಜೀವನದ ಅಭದ್ರತೆಯಿಂದ ಜೀವಿಸುತ್ತಿದ್ದಾರೆ.ಮುಂದಿನ ದಿನಗಳಲ್ಲಿ ನಿರಾಶ್ರಿತರಾಗುವ ಭೀತಿಯಲ್ಲಿರುವ ಕುಟುಂಬಗಳ ಸಮಸ್ಯೆಯನ್ನು ಗಂಭೀರವಾಗಿ ಸರಕಾರ ಗಮನ ಸೆಳೆಯುವ ಉದ್ದೇಶದಿಂದ ೭೪ ನೇ ಸ್ವಾತಂತ್ರೋತ್ಸವವನ್ನು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕಾರ್ಯಾಲಯ ಶಿರಸಿಯಲ್ಲಿ ಭೂಮಿ ಹಕ್ಕು ವಂಚಿತರಿಗೇಲ್ಲಿ ಸ್ವಾತಂತ್ರö್ಯ? ಎಂಬ ಘೋಷಣೆಯೊಂದಿಗೆ ಧ್ವಜಾರೋಹಣ ಮಾಡಲಾಗುವುದು ಎಂದು ಅವರು ಹೇಳಿದರು.

ಭೂಮಿ ಹಕ್ಕು ನೀರೀಕ್ಷೆ ೧ ಲಕ್ಷಕ್ಕೂ ಮಿಕ್ಕಿ ಕುಟುಂಬಗಳು:
ಉತ್ತರ ಕನ್ನಡ ಜಿಲೆ ್ಲಯಲ್ಲಿ ಅರಣ್ಯ ೮೫,೦೦೦ ಕುಟುಂಬ, ಕಂದಾಯ ೧೧,೦೦೦ ಕುಟುಂಬ, ಹಾಡಿ ೪೫೦೦ ಕುಟುಂಬ, ಬೆಟ್ಟ ಭೂಮಿಯಲ್ಲಿ ವಾಸ್ತವ್ಯಕ್ಕಾಗಿ ೬,೫೦೦ ಕುಟುಂಬ, ಗಾಂವಠಾಣ, ಗೋಮಾಳ, ಪಾರಂಪೂಕ, ಡೊಂಗರ ಮುಂತಾದ ಜಮೀನುಗಳಲ್ಲಿ ೧೦,೦೦೦ ಹೀಗೆ ಮುಂತಾದ ಸರಕಾರದ ಒಡೆತನದ ಭೂಮಿಯಲ್ಲಿ ವಸತಿ ಮತ್ತು ಸಾಗುವಳಿಗಾಗಿ ಶೇ. ೪೩ ರಷ್ಟು ಮತ್ತು ಕೃಷಿಗಾಗಿ ಶೇ. ೫೭ ರಷು ್ಟ ಅನಧೀಕೃತ ನಿವಾಸಿಗಳಾಗಿ ಸುಮಾರು ೧,೨೫,೦೦೦ ಕುಟುಂಬ ಮುಂದಿನ ದಿನಗಳಲ್ಲಿ ನಿರಾಶ್ರಿತರಾಗುವ ಭೀತಿಯಲ್ಲಿ ಜೀವಿಸುತ್ತಿದ್ದಾರೆ ಅಂತ ಅವರು
ಹೇಳಿದರು.ಸುಮಾರು ೬೦೦೦ ಎಕರೆ ಪ್ರದೇಶ ಟಿಬೆಟಿಯನ್ನರಿಗೆ ದೇಶದ ಪ್ರಜಾ ರಾಜತಂತ್ರ ನೀತಿ ಅಡಿಯಲ್ಲಿ ಭೂಮಿ ನೀಡಿ ಆಶ್ರಯ ನೀಡಿದೆ. ದೇಶದ ಪ್ರಜೆಯನ್ನಾಗಿಸುವ ವಿದೇಶಿಗರನ್ನು ಕೇಂದ್ರ ಸರಕಾರ ಇತ್ತೀಚಿಗೆ ಕಾನೂನು ತಂದಿದೆ. ಆದರೆ, ದೇಶದ ಪ್ರಜೆಗಳನ್ನು ಕಾನೂನಿನ ನೇಪದಲ್ಲಿ ನಿರಾಶ್ರಿತರನ್ನಾಗಿ ಮಾಡುವ ಸರಕಾರದ ನೀತಿಯನ್ನ ಖಂಡಿಸುತ್ತೇವೆ.ಇAತಹ ಗಂಭೀರ ಸ್ವರೂಪದ, ಸ್ವತಂತ್ರತೆ ಇಲ್ಲದ ಜಿಲ್ಲೆಯ ಜನಸಂಖ್ಯೆಯ ಒಂದು
ಮೂರರಷ್ಟು ನಿವಾಸಿಗಳ ಸಮಸ್ಯೆ ಸರಕಾರದ ಗಮನಕ್ಕೆ ತರುವುದೇ ಸ್ವಾತಂತ್ರೋತ್ಸವದAದು ಜರಗುವ ಕಾರ್ಯಕ್ರಮದ ಉದ್ದೇಶವಾಗಿದೆ.

ಭೂಮಿ ಹಕ್ಕು ಭೀಕ್ಷೆಯಲ್ಲ:
ನಿರಂತರವಾಗಿ ಭೂಮಿ ಹಕ್ಕಿಗಾಗಿ ಹೋರಾಟ ಜರಗುತ್ತಿದ್ದರೂ ಪ್ರತಿ ಚುನಾವಣೆಯಲ್ಲಿಯೂ ಎಲ್ಲಾ ಪಕ್ಷಗಳು ಚುನಾವಣೆ ಪ್ರನಾಳಿಕೆಯಲ್ಲಿ ಮಂಜೂರಿ ಆಶ್ವಾಸನೆ ನೀಡಿದ್ದಾಗಿಯೂ ಆಡಳಿತ ಪಕ್ಷ ಅತಿಕ್ರಮಣದಾರರ ಸಮಸ್ಯೆ ನಿರ್ಲಕ್ಷಿಸಿರುವುದು ವಿಷಾದಕರ. ಭೂಮಿ ಹಕ್ಕು ಭೀಕ್ಷೆಯಲ್ಲ
ಸಂವಿಧಾನಾತ್ಮಕವಾದ ಹಕ್ಕು ಎಂದು ರವೀಂದ್ರ ನಾಯ್ಕ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಯಲ್ಲಾಪುರ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ತೆಂಗೀನಕೇರಿ, ಅಂಕೋಲಾ ತಾಲೂಕ ಸಂಚಾಲಕ ಏಕನಾಥ ನಾಯ್ಕ, ಕಾರವಾರ ತಾಲೂಕ ಸಂಚಾಲಕ ರೋಹಿದಾಸ ವೈಂಗನಕರ, ಪುಂಡ್ಲಿಕ್ ದೇವು ನಾಯ್ಕ ಕಾರವಾರ ಮುಂತಾದವರು ಉಪಸ್ಥಿತರಿದ್ದರು.

error: