May 3, 2024

Bhavana Tv

Its Your Channel

ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ ತಾಯಿ

ಕುಮಟಾ ಪಟ್ಟಣದ ಸುಭಾಸ್ ರಸ್ತೆಯ ಪ್ರಸಿದ್ಧ ಡಾ ಜಾನು ಆಸ್ಪತ್ರೆಯಲ್ಲಿ ಗರ್ಭಿಣಿಯೋರ್ವಳು ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ್ದು ತಾಯಿ ಮಗು ಸುರಕ್ಷಿತರಾಗಿದ್ದಾರೆ.

ಕುಮಟಾದ ಡಾ ಜಾನು ಮಣಕಿಕರ್ಸ್ ಮೆಟರನಿಟಿ ಮತ್ತು ನರ್ಸಿಂಗ್ ಹೋಮ್‌ನಲ್ಲಿ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದವರು ಗೋಕರ್ಣದ ಗಂಗಾವಳಿ ನಿವಾಸಿಯಾದ ೨೪ ವರ್ಷದ ಹಲೀಮಾ ಸಾದಿಕ್ ಸಾಬ್. ಇವರಿಗೆ ೭ನೇ ತಿಂಗಳಿನಲ್ಲೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣ ಜಾನು ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಗರ್ಭೀಣಿಯನ್ನು ಪರೀಕ್ಷಿಸಿದ ಡಾ ಪ್ರಶಾಂತ ಮಣಕಿಕರ್ ಅವರು ನೊರಮಲ್ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಸುರಕ್ಷಿತ ಮತ್ತು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದರಿಂದ ಹಲೀಮಾ ಸಾದಿಕ್ ಸಾಬ್ ಅವರು ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಆದರೂ ಚಿಕ್ಕ ಶಿಶುಗಳ ಆರೋಗ್ಯ ಸುರಕ್ಷತಾ ದೃಷ್ಠಿಯಿಂದ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಶಿಶುಗಳನ್ನು ಮಣಿಪಾಲ ಆಸ್ಪತ್ರೆಯ ಶಿಶು ಸುರಕ್ಷತಾ ಕೇಂದ್ರದಲ್ಲಿ ಇರಿಸಲಾಗಿದೆ.

ಜಾನು ಆಸ್ಪತ್ರೆಯ ಡಾ ಪ್ರಶಾಂತ ಮಣಕಿಕರ್ ಅವರು ಉತ್ತಮ ಸ್ತ್ರೀ ರೋಗ ತಜ್ಞ ವೈದ್ಯರಾಗಿದ್ದು, ಅವರು ೧೦ ವರ್ಷಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗಲೂ ಎರಡು ಗರ್ಭೀಣಿಯರಿಗೆ ಯಶಸ್ವಿ ಹೆರಿಗೆ ಮಾಡಿಸಿದ್ದು, ಅವರು ಕೂಡ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅದರಂತೆ ಡಾ ಪ್ರಶಾಂತ ಮಣಕಿಕರ್ ಅವರ ಅಜ್ಜ ಜಾನು ಮಣಕಿಕರ್ ಮತ್ತು ತಂದೆ ಕಮಲಾಕರ್ ಮಣಕಿಕರ್ ಪ್ರಸಿದ್ಧ ವೈದ್ಯರಾಗಿದ್ದರು. ಡಾ ಜಾನು ಎಂದರೆ ಇಡೀ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡ ವೈದ್ಯರಾಗಿದ್ದರು. ಅಜ್ಜ ಮತ್ತು ತಂದೆಯವರ ಸೇವಾಭಾವವನ್ನು ಡಾ ಪ್ರಶಾಂತ ಅವರು ಮುಂದುವರೆಸಿಕೊAಡು ಹೋಗುತ್ತಿದ್ದು, ತಮ್ಮ ಅಜ್ಜನ ಹೆಸರಿನಲ್ಲಿರುವ ಆಸ್ಪತ್ರೆಯಲ್ಲೂ ಬಡ ಜನರಿಗೆ ಅತೀ ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ ೧೯೬೪ರಲ್ಲಿ ಆರಂಭವಾದ ಡಾ ಜಾನು ಮಣಕಿಕರ್ಸ್ ಮೆಟರನಿಟಿ ಮತ್ತು ನರ್ಸಿಂಗ್ ಹೋಮ್ ೫೭ ವರ್ಷಗಳಿಂದ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ ಜಿಲ್ಲೆಯಲ್ಲಿಯೇ ಹೆಸರುಗಳಿಸಿದೆ. ಈ ಪ್ರಸಿದ್ಧ ಆಸ್ಪತ್ರೆಗೆ ನ್ಯಾಷನಲ್ ಎಕ್ರಿಡೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ ಎಂಡ್ ಹೆಲ್ತ್ ಕೇರ್ ಪ್ರೊವೈಡರ್ ಎಂಬ ಪ್ರಮಾಣ ಪತ್ರ ಕೂಡ ದೊರೆತ್ತಿರುವುದು ರೋಗಿಗಳಿಗೆ ವೈದ್ಯರ ಬಗ್ಗೆ ಇನ್ನು ಹೆಚ್ಚಿನ ವಿಶ್ವಾಸ ಮೂಡುವಂತೆ ಮಾಡಿದೆ.

error: