May 3, 2024

Bhavana Tv

Its Your Channel

ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘದ ಕುಮಟಾ ಘಟಕ ಉದ್ಘಾಟನೆ

ಕುಮಟಾ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ (ರಿ) ಕರ್ನಾಟಕ ಇದರ ಉತ್ತರಕನ್ನಡ ಹಾಗೂ ತಾಲೂಕಾ ಘಟಕಗಳ ಉದ್ಘಾಟನಾ ಸಮಾರಂಭ ಮತ್ತು ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಶನಿವಾರ ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಚಲನಚಿತ್ರ ನಿರ್ಮಾಪಕರು ಹಾಗೂ ಉದ್ಯಮಿಗಳಾದ ಸುಬ್ರಾಯ ವಾಳ್ಕೆ ಮಾತನಾಡಿ,” ,ಇಂದಿನ ದಿನದಲ್ಲಿಯೂ ಶಿಕ್ಷಕರಿಗೆ ಆಹಾರ ಕಿಟ್ ನೀಡುವ ಪರಿಸ್ಥಿತಿ ನಮ್ಮ ರಾಜ್ಯದಲ್ಲಿ ಇರುವುದು ನಾಚಿಕೆಯ ವಿಷಯ. ಇದು ಮುಂದಿನ ದಿನದಲ್ಲಿ ಬದಲಾಗಬೇಕು. ಅದಕ್ಕೆ ನಮ್ಮ ಸಂಘಟನೆ ಗಟ್ಟಿಯಾಗಿ ನಮ್ಮ ಮಾತು ಸರಕಾರಕ್ಕೆ ಕೇಳುವಂತಾಗಬೇಕು. ಖಾಸಗಿ ಶಿಕ್ಷಕರೂ ಸಹ ದೇಶದ ಬೆನ್ನೆಲುಬು. ಒಬ್ಬರ ದಾನದಿಂದ ಈ ವ್ಯವಸ್ಥೆ ಬದಲಾಗಲು ಸಾಧ್ಯವಿಲ್ಲ. ಸರಕಾರದಿಂದ ಮಾತ್ರ ಬದಲಾವಣೆ ಸಾಧ್ಯ. ಶಿಕ್ಷಣವನ್ನು ಯಾವ ಸರಕಾರವೂ ಕಡೆಗಣಿಸಿಲ್ಲ. ಆದರೆ ನಾವು ಅಲ್ಲಿಯವರೆಗೆ ತಲುಪಲು ವಿಫಲರಾಗಿದ್ದೇವೆ. ಇನ್ನು ಇಂದಿನ ದಿನಗಳಲ್ಲಿ ಪ್ರಚಲಿತದಲ್ಲಿರುವ ಕೋಚಿಂಗ್ ಸೆಂಟರ್ ಗಳನ್ನು ಪ್ರಾರಂಭಿಸುವುದರಿAದ ಖಾಸಗಿ ಶಿಕ್ಷಕರು ಉತ್ತಮ ದಿನಗಳನ್ನು ಕಾಣಲು ಸಾಧ್ಯ. ಕೊರೋನಾದಿಂದ ಖಾಸಗಿ ಶಿಕ್ಷಕರು ತುಂಬಾ ತೊಂದರೆ ಅನುಭವಿಸಿದ್ದಾರೆ. ಬರುವ ದಿನಗಳಲ್ಲಿ ಸರಕಾರವೇ ನಿಮ್ಮ ಬಳಿಬರುವಂತಾಗಲಿ “ಎಂದರು.

ಸಾಂಕೇತಿಕವಾಗಿ ಶಿಕ್ಷಕರಿಗೆ ಆಹಾರದ ಕಿಟ್ ವಿತರಿಸಿದ ತೊರ್ಕೆ ಗ್ರಾ.ಪಂ ಅಧ್ಯಕ್ಷರಾದ ಆನಂದು ಕವರಿ ಮಾತನಾಡಿ,” ದೇಶದಲ್ಲಿ ಎಲ್ಲದಕ್ಕಿಂತ ಶಿಕ್ಷಕರ ಹುದ್ದೆ ದೊಡ್ಡದು. ಖಾಸಗಿ ಶಿಕ್ಷಕರ ಇಂದಿನ ಪರಿಸ್ಥಿತಿ ನಿಜಕ್ಕೂ ಬೇಸರು ತರುವಂತಹದ್ದು. ನಿಮ್ಮ ಯಾವುದೇ ಸಮಸ್ಯೆಗೂ ಸ್ಪಂದಿಸಲು ನಾವು ಸಿದ್ದರಿದ್ದೇವೆ. “ಎಂದರು

ಮುಖ್ಯ ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಮಾತನಾಡಿ,” ಶಿಕ್ಷಕರು ಈ ನಾಡಿನ ಅನಿಮಿಶಿಕ್ತ ದೊರೆಗಳು. ಈ ವೃತ್ತಿ ಅತೀ ಶೇಷ್ಠ ಹಾಗೂ ಪವಿತ್ರವಾದ ವೃತ್ತಿ. ಕೋರೋನಾ ಅನೇಕ ಕ್ಷೇತ್ರಗಳಲ್ಲಿ ಹಾನಿ ಮಾಡಿದೆ. ಅದೇ ರೀತಿ ಶಿಕ್ಷಕರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಜೀವನ ಸಾಗಿಸಲೂ ಅನೇಕರು ಕಷ್ಟ ಪಡುತ್ತಿರುವುದು ಕಾಣಸಿಗುತ್ತಿದೆ. ಒಂದು ಸಣ್ಣ ಪಟ್ಟಣದಲ್ಲಿಯೂ ಜೀವನ ಸಾಗಿಸಲು ಸಾಕಷ್ಟು ಹಣದ ಅಗತ್ಯ ಇದೆ. ಸರಕಾರದಿಂದ ದೊರಯಬಹುದಾದ ಕನಿಷ್ಟ ಸಹಕಾರವಾದರೂ ಸಿಗುವಂತಾಗಬೇಕು. ಈ ಸಂಘಟನೆಯೂ ಸಹ ಮುಂದಿನ ದಿನದಲ್ಲಿ ಶಿಕ್ಷಕರ ಕಷ್ಟ ಎಂಬ ಖಾಯಿಲೆಯನ್ನು ಹೋಗಲಾಡಿಸುವಂತಾಗಲಿ. ಈ ನಿಟ್ಟಿನಲ್ಲಿ ಎಲ್ಲರೂ ಕೂಡಿ ಶ್ರಮಿಸೋಣ “ಎಂದರು.

ಜಿಲ್ಲಾ ಉಪಾಧ್ಯಕ್ಷರಾದ ನಿಯತಿ ಎಸ್ ಕೋಮಾರಪಂಥ ಅವರ ತಂಡ ಪ್ರಾರ್ಥಿಸಿದರು. ಜಿಲ್ಲಾಧ್ಯಕ್ಷರಾದ ಮಂಜನಾಥ ಭಂಡಾರಿ ಸ್ವಾಗತಿಸಿದರು. ರಾಜ್ಯ ಗೌರವಾಧ್ಯಕ್ಷರಾದ ಗಣೇಶ್ ಪಿ.ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗೌರವಾಧ್ಯಕ್ಷ ಎಂ.ಆರ್.ನಾಯ್ಕ ಪ್ರಾಸ್ತಾವಿಸಿದರು.

ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಗಣೇಶ ನಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿಧಿ ಕೆ, ರಾಜ್ಯ ವ್ಯವಸ್ಥಾಪಕ ಕಾರ್ಯದರ್ಶಿಗಳಾದ ಅಭಿಲಾಶ ಟಿ, ಶಿರಸಿ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಶಾಂತಾರಾಮ್ ಡಿ ನಾಯ್ಕ, ಲಕ್ಷ್ಮೀ ಕಿರಣ್ ಭಟ್, ಜಿಲ್ಲಾ ಕೋಶಾಧ್ಯಕ್ಷರಾದ ಜಗದೀಶ್ ಆರ್ ಗುನಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ ಶೇಟ್, ರಾಜ್ಯ ಸಂಘಟನಾ ಕಾರ್ಯದರ್ಶಿ ಚೇತನ್ ರಾಂಪುರ ಸೇರಿದಂತೆ ಜಿಲ್ಲೆಯ ಖಾಸಗಿ ಶಿಕ್ಷಕರು ಉಪಸ್ಥಿತರಿದ್ದರು.

error: