May 3, 2024

Bhavana Tv

Its Your Channel

ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ಸನ್ಮಾನ ಕಾರ್ಯಕ್ರಮ

ಕುಮಟಾ : ಜೀವನದಲ್ಲಿ ಗೆಲುವಿನ ಪ್ರಯತ್ನವನ್ನು ಆರಂಭಿಸಬೇಕು, ಗುರಿ ಮುಟ್ಟುವವರೆಗೂ ಪ್ರಯತ್ನ ನಿಲ್ಲಿಸಬಾರದು. ಪ್ರಯತ್ನದ ಆರಂಭ ಮಾಡದಿದ್ದರೆ ಗೆಲುವು ದೊರಕುವುದಾದರೂ ಹೇಗೆ? ಪ್ರಯತ್ನದ ದಾರಿಯಲ್ಲಿ ಕಷ್ಟಗಳ ಕಲ್ಲುಬಂಡೆಗಳೇ ಎದುರಾದರೂ ಪ್ರಯತ್ನವನ್ನು ನಿಲ್ಲಿಸಬಾರದು. ಭಗೀರಥ ಪ್ರಯತ್ನದ ಮೂಲಕ ಗೆಲುವು ದೊರಕಿಸಿಕೊಳ್ಳಬೇಕೆಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಕುಮಟಾ ತಾಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಯಾವುದೇ ಶಾಲೆಗೆ ಮುತ್ತು ರತ್ನಗಳಿದ್ದಂತೆ. ಸಂಸ್ಥೆಯಿAದ ವಿದ್ಯಾರ್ಥಿಗಳಿಗೆ ಒಳ್ಳೆಯದಾಗುವುದು ಇದು ಸಹಜವಾದ ಪ್ರವಾಹ. ಆದರೆ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಒಳ್ಳೆಯದಾಗುತ್ತದೆ, ಅದು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆ ಪಟ್ಟಿಯಲ್ಲಿ ಈ ಶಾಲೆಯ ಹೆಮ್ಮೆಯ ವಿದ್ಯಾರ್ಥಿಗಳಿದ್ದಾರೆ ಎಂದು ಅವರಿಗೆ ಶುಭ ಹಾರೈಸಿದರು. ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟು ಈಗಾಗಲೇ ವಿದ್ಯಾರ್ಥಿಗಳಿಗೆ ಬದುಕಿನ ಜ್ಞಾನ ನೀಡುತ್ತಿರುವ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿದ್ಯಾಪೀಠ, ನಮ್ಮ ಬಹುದೊಡ್ಡ ಕನಸು. ಅದು ಕೇವಲ ಕನಸಲ್ಲ, ಈ ಯುಗದ ಬಹುದೊಡ್ಡ ಸಂಕಲ್ಪ, ಸಾಕಾರವಾಗುತ್ತಿರುವ ಸಂಕಲ್ಪ -ಮಹಾತ್ಕಾರ್ಯ. ಆ ಮಹಾತ್ಕಾರ್ಯದ ಭಾಗವಾಗಿರುವ ಮೂರೂರು ಕಲ್ಲಬ್ಬೆಯ ವಿದ್ಯಾನಿಕೇತನ ಸಂಸ್ಥೆ- ತಾಲೂಕು , ಜಿಲ್ಲೆ ರಾಜ್ಯವಲ್ಲದೇ ವಿಶ್ವ ಸ್ತರದ ಸಂಸ್ಥೆಯಾಗಿ ನೋಡುವ ಅವಕಾಶ ನಮ್ಮೆಲ್ಲರಿಗಿದೆ ಎಂದು ಶುಭ ನುಡಿದರು.
ಕಾರ್ಯಕ್ರಮದಲ್ಲಿ ಗುರುವಂದನೆ ಸಲ್ಲಿಸಿ ಪಾಸ್ತಾವಿಕವಾಗಿ ಮಾತನಾಡಿದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಆರ್. ಜಿ.ಭಟ್ಟ ಅವರು -ಅನಿರೀಕ್ಷಿತವಾಗಿ ಸಿಕ್ಕಿರುವ ಈ ಅವಕಾಶ ನಮ್ಮ ಪಾಲಿನ ಸೌಭಾಗ್ಯವೇ ಸರಿ! ಶ್ರೀಗಳ ಪಾದ ಸ್ಪರ್ಷದಿಂದ, ಅಶೀರ್ವಾದದಿಂದ, ನಾವೆಲ್ಲ ಪಾವನರಾಗಿದ್ದೇವೆ. ಈ ಕಾರ್ಯಕ್ರಮಕ್ಕೆ ಪ್ರೇರಣಿ ದೊರಕಿದೆ. ನಮ್ಮ ಶಾಲೆ ವರ್ಷದಿಂದ ವರ್ಷಕ್ಕೆ ಪ್ರಜ್ವಲಮಾನ್ಯವಾಗಿ ಮುನ್ನಡಿಯಿಡುತ್ತಿದೆ. ಈಗಾಗಲೇ ರಾಜ್ಯಮಟ್ಟದ ಹಲವಾರು ರ‍್ಯಾಂಕ್ ಗಳನ್ನು ನಮ್ಮ ಶಾಲೆ ಗಳಿಸಿದೆ. ಅದಕ್ಕೆ ಶಿಕ್ಷಕರ ಸತತ ಪ್ರಯತ್ನ, ಅಡಳಿತ ಮಂಡಳಿಯವರ ಸೂಕ್ತ ಮಾರ್ಗದರ್ಶನವಿದೆ. ಈಗಾಗಲೇ ಹೊಸ ಕಟ್ಟಡ ಪೂರ್ಣಗೊಂಡು ಕಾಲೇಜು ಪ್ರಾರಂಭಕ್ಕೆ ಸಿದ್ದಗೊಂಡಿದೆ. ಪ್ರಜ್ಞಾವಂತ ಪಾಲಕರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವರೆಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಶಾಲೆಯ ಶಿಕ್ಷಕರನ್ನು ಶ್ರೀಗಳು ಸನ್ಮಾನಿಸಿ ಗೌರವಸಿದರು.
ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಸಂಸ್ಥೆಯ ಉಪಾಧ್ಯಕ್ಷರಾದ ವಿ ಎಸ್ ಹೆಗಡೆ, ಕಾರ್ಯದರ್ಶಿ ಟಿ ಎಸ್ ಭಟ್ ಸದಸ್ಯರಾದ ಟಿ.ಆರ್ ಜೋಶಿ, ಅಯ್ ಪಿ. ಭಟ್ಟ, ಸುಬ್ರಾಯ ಭಟ್ಟ, ಎಸ್. ವಿ ಭಟ್ಟ, ಡಾ.ಶ್ರೀಧರ ಭಟ್ಟ, ಶ್ರೀ ಜಿ.ಎಸ್.ಹೆಗಡೆ,ಶ್ರೀ ಎಂ.ಪಿ.ಭಟ್ಟ, ಶ್ರೀ ಹರೀಶ್ಚಂದ್ರ ಹೆಗಡೆ, ಶ್ರೀಮತಿ ಪ್ರತಿಭಾ ಹೆಗಡೆ, ಅಡಳಿತಾಧಿಕಾರಿ ಶ್ರೀ ಜಿ ಎಂ ಭಟ್ಟ ಮತ್ತಿತರರು ಉಪಸ್ತಿತರಿದ್ದರು.
ಸಂಸ್ಥೆಯ ಪರವಾಗಿ ಶ್ರೀ ಸುಬ್ರಾಯ ಭಟ್ಟ ಅವಲೋಕಿಸಿದರು.
ಕೋವಿಡ್ ಮಾರ್ಗಸೂಚಿ ಅನುಸರಿಸಿ, ಮುದ್ದು ವಿದ್ಯಾರ್ಥಿಗಳು ,ಶಿಕ್ಷಕರು ಸಿಬ್ಬಂದಿಗಳು ಪಾಲಕ-ಪೋಪಕರು ಭಕ್ತಾದಿಗಳು ಮಂತ್ರಾಕ್ಷತೆ ಪಡೆದರು.

error: