May 17, 2024

Bhavana Tv

Its Your Channel

ಕುಮಟಾದಲ್ಲಿ ಮೆಗಾ ಉದ್ಯಮಿ ಸಂತೆ

ಕುಮಟಾ: ದಸರಾ ಹಬ್ಬದ ನಿಮಿತ್ತ ಅ.೭ ರಿಂದ ೧೩ ರವರೆಗೆ ಪ್ರತಿನಿತ್ಯ ಬೆಳಿಗ್ಗೆ ೧೧ ಘಂಟೆಯಿAದ ರಾತ್ರಿ ೮.೩೦ ರವರೆಗೆ ಪಟ್ಟಣದ ಮಣಕಿಯ ಮಹಾತ್ಮಾ ಗಾಂಧಿ ಮೈದಾನದಲ್ಲಿ ಮೆಗಾ ಉದ್ಯಮಿ ಸಂತೆ ನಡೆಯಲಿದೆ ಎಂದು ದೇಶಪಾಂಡೆ ಫೌಂಡೇಶನ್‌ನ ಕ್ಲಸ್ಟರ್ ಮ್ಯಾನೆಜರ್ ಪ್ರಸನ್ನ ಕುಲಕರ್ಣಿ ಮಾಹಿತಿ ನೀಡಿದರು.

ಅವರು ಕುಮಟಾ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಣ್ಣ ಉದ್ದಿಮೆದಾರರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸಣ್ಣ ಉದ್ಯಮಿಗಳ ಬೆಳವಣಿಗೆ ಸಹಕಾರಿಯಾಗಲೆಂದು ಸ್ಥಳಿಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ದೊರಕಿಸುವ ಉದ್ದೇಶದಿಂದ ಸ್ಥಳೀಯ ರೋಟರಿ ಕ್ಲಬ್, ಎ.ವಿ.ಪಿ ಸೇವಾ ಸಂಸ್ಥೆ, ಸುಲಭ ಸೇವಾ ಸಂಸ್ಥೆಯ ನೆರವಿನೊಂದಿಗೆ ಕುಮಟಾದಲ್ಲಿ ಮೆಗಾ ಉದ್ಯಮ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ. ಅ. ೭ ರಿಂದ ೧೩ ವರೆಗೆ ನಡೆಯಲಿರುವ ಉದ್ಯಮ ಸಂತೆಯಲ್ಲಿ ಉತ್ತರಕನ್ನಡ ಸೇರಿದಂತೆ ಉತ್ತರಕರ್ನಾಟಕ ಭಾಗಗಳಿಂದಲೂ ಮನೆಯಲ್ಲಿ ತಯಾರಿಸಿದ ತಿಂಡಿ-ತಿನಿಸು, ಆಟಿಕೆ, ಕರ-ಕುಶಲ ವಸ್ತು, ಬಟ್ಟೆ ಸೇರಿದಂತೆ ಮತ್ತಿತರರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಉತ್ಪಾದಕರಿಂದ ಗ್ರಾಹಕರಿಗೆ ಸಿದ್ಧ ವಸ್ತುಗಳನ್ನು ಪೂರೈಸುವುದೇ ದೇಶಪಾಂಡೆ ಫೌಂಡೇಶನ್ ಮೂಲ ಉದ್ದೇಶವಾಗಿದ್ದು, ಉತ್ತರಕನ್ನಡ ಜಿಲ್ಲೆಯ ಜನತೆ ಮೆಗಾ ಉದ್ಯಮ ಸಂತೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಕುಮಟಾ ಭಾಗದಲ್ಲಿ ಕೋಕಂ, ಜೇನುತುಪ್ಪ ಹಾಗೂ ತೆಂಗು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಭಾಗದ ರೈತರು ಈ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಈ ಮೂರು ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಹಾಗೂ ಕಿರು ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ದೇಶಪಾಂಡೆ ಫೌಂಡೇಶನ್ ತನ್ನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ಎ.ವಿ.ಪಿ ಸೇವಾ ಸಂಸ್ಥೆಯ ಮುಖ್ಯಸ್ಥ ಗಣಪತಿ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷೆ ನಮ್ರತಾ ಶಾನಭಾಗ, ಕಾರ್ಯದರ್ಶಿ ಶಿಲ್ಪಾ ಜೀನರಾಜ, ಸುಲಭ ಸೇವಾ ಸಂಸ್ಥೆಯ ಮುಖ್ಯಸ್ಥ ದಿವಾಕರ ನಾಯ್ಕ, ದೇಶಪಾಂಡೆ ಫೌಂಡೇಶನ್‌ನ ಕಾರ್ಯಕ್ರಮ ಸಮನ್ವಯಾಧಿಕಾರಿ ಬಸವರಾಜ ಎ ಸೇರಿದಂತೆ ಮತ್ತಿತರರು ಇದ್ದರು.

error: