May 17, 2024

Bhavana Tv

Its Your Channel

ಕುಮಟಾದ ಪ್ರಸಿದ್ಧ ಡಾ ಎ ವಿ ಬಾಳಿಗಾ ಕಾಲೇಜ್ ಹಿಂಭಾಗದಲ್ಲಿರುವ ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಬಾಂಬ್ ಪತ್ತೆ, ಸುದ್ದಿ ಕುಮಟಾ ಜನತೆಯನ್ನು ಬೆಚ್ಚಿ ಬೀಳಿಸಿದೆ

ಕುಮಟಾ ; ವಾಯು ವಿಹಾರಕ್ಕೆ ಬಂದ ಕೆಲ ವ್ಯಕ್ತಿಗಳು ಕಾಲೇಜ್ ಹಿಂಭಾಗದಲ್ಲಿ ಬಾಂಬ್ ರೂಪದಲ್ಲಿರುವ ವಸ್ತುವನ್ನು ಗಮನಿಸಿ , ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜ್‌ನ ಹಿಂಭಾಗದಲ್ಲಿ ನಾಡ ಬಾಂಬ್ ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಕಕ್ಕಾಬಿಕ್ಕಾಯಾದ ಕುಮಟಾ ಪೊಲೀಸರು ಕಾಲೇಜ್‌ನಲ್ಲಿ ತೀವ್ರ ಶೋಧ ಕಾರ್ಯ ನಡೆಸಿದ ಘಟನೆ ವರದಿಯಾಗಿದೆ . ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾಲೇಜ್ ಸುತ್ತಲೂ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ . ಆ ವಸ್ತು ನೋಡಲು ಥೇಟ್ ಬಾಂಬ್ ತರನೇ ಕಾಣುತ್ತಿದ್ದು , ಬಾಂಬ್‌ಗೆ ವೈಯರ್ ಅಳವಡಿಸಲಾಗಿದೆ. ಅಗ್ನಿ ಶಾಮಕ ದಳ ಸೇರಿದಂತೆ ಶ್ವಾನ ದಳ ಕೂಡ ಸ್ಥಳದಲ್ಲಿ ಬಿಡುಬಿಟ್ಟಿದೆ . ಆದರೆ ಆ ವಸ್ತು ಅಸಲಿಗೇ ಬಾಂಬ್ ಇರಬಹುದೆ ಎಂಬುದನ್ನು ಪೊಲೀಸರೇ ಖಚಿತ ಪಡಿಸಬೇಕಿದೆ . ಈಗಾಗಲೇ ಈ ಸುದ್ದಿ ಕುಮಟಾದ್ಯಂತ ಕಾಡ್ಗಿಚ್ಚಿನಂತೆ ಹರಡಿದ್ದು , ಕಾಲೇಜ್ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ . ಆ ಪ್ರದೇಶದ ಸುತ್ತಮುತ್ತಲು ಖಾಕಿ ಕಣ್ಗಾವಲಿದ್ದು , ಸಂಶಯಾಸ್ಪದವಾಗಿ ತಿರುಗಾಡುತ್ತಿರುವವರನ್ನು ವಿಚಾರಣೆ ನಡೆಸುವ ಕಾರ್ಯ ಪೊಲೀಸರಿಂದ ಸಾಗಿದೆ .
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಭೇಟಿ ನೀಡಿದ್ದಾರೆ. ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಪತ್ತೆಯಾದ ನಾಡ ಬಾಂಬ್‌ನಿAದ ಕುಮಟಾ ಜನತೆ ಆತಂಕಗೊAಡಿದ್ದು , ಬಾಂಬ್‌ನAತಹ ವಸ್ತುಗಳು ಕಾಲೇಜ್‌ನ ಹಿಂಭಾಗಕ್ಕೆ ಹೇಗೆ ಬಂತು ಎಂಬುದೇ ಯಕ್ಷ ಪ್ರಶ್ನೆಯಾಗಿದ್ದು , ಕಾಲೇಜ್ ಹಿಂಭಾಗ ಕೂಡ ದಟ್ಟ ಅರಣ್ಯದಿಂದ ಕೂಡಿದ್ದು , ವಿದ್ವಂಸಕ ಚಟುವಟಿಕೆಗಳು ನಡೆಯುತ್ತಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ,
ನಟರಾಜ ಗದ್ದೆಮನೆ

error: