May 17, 2024

Bhavana Tv

Its Your Channel

ಕುಮಟಾದಲ್ಲಿ ಸಿಕ್ಕಿತು ಹುಸಿ ಬಾಂಬ್, ನಿಟ್ಟುಸಿರು ಬಿಟ್ಟ ಜನರು

ವರದಿ: ನಟರಾಜ ಗದ್ದೆಮನೆ

ಕುಮಟಾ: ಮಂಗಳೂರಿನಿoದ ಬಂದಿದ್ದ ಬಾಂಬ್ ನಿಷ್ಕ್ರಿಯ ದಳ ಮಧ್ಯರಾತ್ರಿಯ ಹೊತ್ತಿಗೆ ಪತ್ತೆಯಾದ ವಸ್ತು ಬಾಂಬ್ ಅಲ್ಲ, ಡಮ್ಮಿ/ ಹುಸಿ ಬಾಂಬ್ ಎನ್ನುವುದನ್ನು ದೃಢಪಡಿಸಿದೆ.

ಈ ವಸ್ತು ನೋಡಲು ಥೇಟ್ ಬಾಂಬ್‌ನAತೇ ಇದ್ದು, ಪಿವಿಸಿ ಪೈಪ್, ಕೇಬಲ್ ಹಾಗೂ ಬ್ಯಾಟರಿ ಬಳಸಿ ಇದನ್ನು ತಯಾರಿಸಲಾಗಿದೆ. ಆದರೆ ಸ್ಫೋಟಕ ವಸ್ತುಗಳು ಮಾತ್ರ ಇದರಲ್ಲಿ
ಇಲ್ಲ. ಹೀಗಾಗಿ ಇದನ್ನು ಯಾರು, ಯಾತಕ್ಕಾಗಿ ತಯಾರಿಸಿದ್ದರು ಎಂಬ ಬಗ್ಗೆ ಪೊಲೀಸರು ತೀವ್ರ ಶೋಧ ಕಾರ್ಯಕ್ಕಿಳಿದಿದ್ದಾರೆ. ಅರಣ್ಯ ಪ್ರದೇಶದಲ್ಲಿ, ಕಾಲೇಜಿನ ಬಳಿ, ರೈಲ್ವೆ ನಿಲ್ದಾಣ ಹಾಗೂ ಹಳಿಯ ಅನತಿ ದೂರದಲ್ಲಿ ಈ ರೀತಿ ಡಮ್ಮಿ ಬಾಂಬ್ ಇಟ್ಟಿರುವುದರಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

error: