May 20, 2024

Bhavana Tv

Its Your Channel

ಕುಮಟಾ ಮಣಕಿ ಮೈದಾನದಲ್ಲಿ ವಿಜೃಂಭಣೆಯಿOದ ನಡೆದ ಕನ್ನಡ ರಾಜ್ಯೋತ್ಸವ

ವರದಿ: ನಟರಾಜ ಗದ್ದೆಮನೆ ಕುಮಟಾ

ಕುಮಟಾ : ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪಟ್ಟಣದ ಮಣಕಿ ಮೈದಾನದಲ್ಲಿ ವಿಜೃಂಭಣೆಯಿOದ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಳ್ಳುವ ಮೂಲಕ ಸಹಕಾರ ನೀಡಬೇಕು. ಇನ್ನು ಸರ್ಕಾರದ ಮಟ್ಟದಲ್ಲಿ ನಮ್ಮ ಜಿಲ್ಲೆ ಕಡೆಗಣೆನೆಗೆ ಒಳಗಾಗಿದೆ. ೩ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಉಡುಪಿ ಜಿಲ್ಲೆಗೆ ಬರುತ್ತದೆ. ನಮ್ಮ ಜಿಲ್ಲೆಯಲ್ಲಿ ಅರ್ಹರಿಲ್ಲವೇ..? ಸರ್ಕಾರದ ಮಟ್ಟದಲ್ಲಿ ನನ್ನೊಬ್ಬನ ಕೂಗು ಸಾಲಲ್ಲ. ಸುಶಿಕ್ಷಿತರ ಜಿಲ್ಲೆಯಾದ ಉತ್ತರಕನ್ನಡದಲ್ಲಿ ಇವತ್ತಿಗೂ ಒಂದು ವಿಶ್ವವಿದ್ಯಾಲಯ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ನಾವೆಲ್ಲ ಒಗ್ಗಟ್ಟಾಗಬೇಕು. ಜಿಲ್ಲೆಗೆ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಹೋರಾಡಿ ಮಂಜೂರಿ ಮಾಡಿಸಿಕೊಂಡು ಬರುವಷ್ಟರ ಮಟ್ಟಿಗೆ ನಾವೆಲ್ಲ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ರಾಹುಲ ರತ್ನಂ ಪಾಂಡೆ ಮಾತನಾಡಿ, ಕನ್ನಡ ಭಾಷೆ ಸಾಂಸ್ಕೃತಿಕ, ಸಾಹಿತಿಕವಾಗಿ ಶ್ರೀಮಂತವಾಗಿದೆ ಇಂಥ ಕನ್ನಡ ಭಾಷೆಯನ್ನು ಗೌರವಿಸುವ ಪ್ರತಿಜ್ಞೆ ಮಾಡೋಣ. ನಾವು ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ವ್ಯವಹರಿಸೋಣ. ಪ್ರೀತಿಸೋಣ ಎಂದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಮತ್ತು ಸಂಘ-ಸoಸ್ಥೆಗಳಿoದ ಪ್ರದರ್ಶನಗೊಂಡ ಸ್ತಬ್ಧ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು. ಈ ಮೆರವಣಿಗೆಯಲ್ಲಿ ಆರೋಗ್ಯ ಇಲಾಖೆಯ ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ ದೊರೆತರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದ್ವಿತೀಯ ಸ್ಥಾನ ಮತ್ತು ಕುಮಟಾ ತಾಲೂಕು ನೌಕರರ ಸಂಘ ತೃತೀಯ ಸ್ಥಾನದ ಬಹುಮಾನ ಪಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಕನ್ನಡದ ತೇರಿನ ಮೆರವಣಿಗೆ ನಡೆಸಲಾಯಿತು. ಮಣಕಿ ಮೈದಾನದಿಂದ ಆರಂಭವಾದ ಮೆರವಣಿಗೆ ತಹಸೀಲ್ದಾರ್ ಕಚೇರಿಯಲ್ಲಿ ಸಮಾವೇಶಗೊಂಡಿತು. ಶಾಸಕರು, ಗಣ್ಯರು, ಅಧಿಕಾರಿಗಳ ಜನತೆಗೆ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಮುಖ್ಯಾಧಿಕಾರಿ ಸುರೇಶ ಎಂ ಕೆ, ತಹಸೀಲ್ದಾರ್ ವಿವೇಕ ಶೇಣ್ವಿ, ಡಯಟ್ ಪ್ರಾಂಶುಪಾಲ ಈಶ್ವರ ನಾಯ್ಕ, ಬಿಇಒ ರಾಜೇಂದ್ರ ಭಟ್, ತಾಪಂ ಇಒ ಸಿ ಟಿ ನಾಯ್ಕ, ಆರ್ ಜಿ ಗುನಗಿ ಇತರರು ಇದ್ದರು.

error: