May 13, 2024

Bhavana Tv

Its Your Channel

ಕುಮಟಾದ ರಾಜ್ಯೋತ್ಸವ ಸಮಿತಿಯಿಂದ ನ.೧ ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕುಮಟಾದ ರಾಜ್ಯೋತ್ಸವ ಸಮಿತಿಯಿಂದ ನ.೧ ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಪಟ್ಟಣದ ಪುರಭವನದಲ್ಲಿ ಸಂಜೆ.೫ ಘಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಪ್ರೋ.ಎಂ.ಜಿ.ಭಟ್ಟ ತಿಳಿಸಿದರು.

ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮಲ್ಲಿರುವ ಬೇಧ-ಭಾವ ಮರೆತು ಕನ್ನಡದ ಹೆಸರು ಮತ್ತು ನೆರಳಿನಲ್ಲಿ ಒಂದಾಗಬೇಕೆOದು ಕಳೆದ ೧೨ ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಕಳೆದ ೨ ವರ್ಷಗಳಿಂದ ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಲಾಗಿದೆ. ಈ ವರ್ಷ ವಿವಿಧ ಕ್ಷೇತ್ರದ ೪ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದರು.


ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣ ಯಾಜಿ ಬಳಕೂರ, ಕೊರೊನಾ ವಾರಿಯರ್ಸ್ಗಳ ಪರವಾಗಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ನೀನಾಸಂ ಪದವೀಧರ ಹಾಗೂ ನಾಟಕ ರಂಗದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀಕಾಂತ ಪಟಗಾರ ಇವರನ್ನು ಸನ್ಮಾನಿಸಲಾಗುತ್ತದೆ. ಕನ್ನಡ ನಾಡು ನುಡಿಯ ಬಗ್ಗೆ ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಅಭಿನಂದನಾ ನುಡಿಗಳನ್ನಾಡಳಿದ್ದಾರೆ ಎಂದರು

.
ಕಸಾಪ ನಿಕಟಪೂರ್ವ ತಾಲೂಕಾಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿಯು ಪ್ರತಿ ವರ್ಷ ನುಡಿಹಬ್ಬದ ಹೆಸರಿನಲ್ಲಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಕನ್ನಡ ನಾಡು, ನುಡಿ, ಭಾಷೆ ನೆಲದ ಬಗ್ಗೆ ಕನ್ನಡಿಗರಾದ ನಾವು ಅಭಿಮಾನ ಹೊಂದಿರಬೇಕು ಎಂದರು.


ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಆಚರಣಾ ಸಮಿತಿಯ ಪ್ರಮುಖರಾದ ಪ್ರಶಾಂತ ನಾಯ್ಕ, ಜಯಾ ಶೇಟ್, ಸುಬ್ಬಯ್ಯ ನಾಯ್ಕ, ಭುವನ ಭಾಗ್ವತ, ಧೀರೂ ಶಾನಭಾಗ, ಜಗದೀಶ ಭಟ್ಟ, ಬಾಬಣ್ಣ ಮುಕ್ರಿ, ನಾಗರಾಜ ಶೇಟ್, ಮಂಜುನಾಥ ನಾಯ್ಕ, ಮಂಜು ಭಂಡಾರಿ, ಜಿ.ಆರ್.ನಾಯ್ಕ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

error: