May 3, 2024

Bhavana Tv

Its Your Channel

ಹೆಗಡೆ ಗ್ರಾಪಂ ವ್ಯಾಪ್ತಿಯಲ್ಲಿನ ನೆರೆ ಸಂತ್ರಸ್ತರಿಗೆ ಕಳೆದೆರಡು ವರ್ಷಗಳಿಂದ ಪರಿಹಾರ ನೀಡದೆ ಇರುವುದನ್ನು ಖಂಡಿಸಿ ಗ್ರಾಮಸ್ಥರಿಂದ ಮನವಿ

ವರದಿ: ನಟರಾಜ ಗದ್ದೆಮನೆ

ಕುಮಟಾ ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯಲ್ಲಿನ ನೆರೆ ಸಂತ್ರಸ್ತರಿಗೆ ಕಳೆದೆರಡು ವರ್ಷಗಳಿಂದ ಪರಿಹಾರ ನೀಡದೆ ಇರುವುದನ್ನು ಖಂಡಿಸಿ ಅಲ್ಲಿನ ಗ್ರಾಮಸ್ಥರು ಜಿಪಂ ನಿಕಟಪೂರ್ವ ಸದಸ್ಯ ರತ್ನಾಕರ ನಾಯ್ಕ ನೇತೃತ್ವದಲ್ಲಿ ಕುಮಟಾ ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಕುಮಟಾ ಉಪವಿಭಾಗಾಧಿಕಾರಿ ಕಚೇರಿಯ ಎದುರು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಜಮಾಯಿಸಿದ ಹೆಗಡೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ತಾರಿಬಾಗಿಲಿನ ಗ್ರಾಮಸ್ಥರು, ತಾರಿಬಾಗಿಲಿನ ನೆರೆ ಸಂತ್ರಸ್ತರಿಗೆ ಬಾಕಿ ಇರುವ ನೆರೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಅಘನಾಶಿನಿ ನದಿಗೆ ಹೊಂದಿಕೊAಡಿರುವ ಹೆಗಡೆಯ ತಾರಿಬಾಗಿಲಿಗೆ ಪ್ರತಿ ಮಳೆಗಾಲದಲ್ಲೂ ನೆರೆ ಬಂದು, ಹಾನಿಯಾಗುತ್ತಿದೆ. ಮಳೆಗಾಲದಲ್ಲಿ ಕಲುಷಿತ ನೀರು ಮನೆಗಳ ನೀರಿನ ಮೂಲಗಳಿಗೆ ನುಗ್ಗುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಇನ್ನು ಬೇಸಿಗೆಗಾಲದಲ್ಲಿ ಉಪ್ಪು ನೀರಿನ ಹಾವಳಿಯಿಂದ ಕುಡಿಯುವ ನೀರಿನ ಅಭಾವ ಉಂಟಾಗುತ್ತದೆ. ಈ ಸಮಸ್ಯೆ ನಡುವೆ ಪ್ರತಿ ಮಳೆಗಾಲದಲ್ಲೂ ನೆರೆಯಿಂದ ಅಲ್ಲಿನ ಜನರು ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗುತ್ತದೆ. ಇನ್ನು ಕಳೆದ ವರ್ಷ ನೆರೆಯಿಂದ ಹಾನಿಗೊಳಗಾದ ಮನೆಗಳಿಗೆ ಈತನಕ ಪರಿಹಾರ ನೀಡಿಲ್ಲ. ಈ ವರ್ಷದಲ್ಲಿ ನೆರೆ ಸಂತ್ರಸ್ತರಿಗೆ ೧೦ ಸಾವಿರ ರೂ. ಪರಿಹಾರ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಈ ಭಾಗದ ಸಂತ್ರಸ್ತರಿಗೆ ಕೇವಲ ೩೮೦೦ ರೂ. ಜಮಾ ಆಗಿದೆ. ಉಳಿದ ಪರಿಹಾರದ ಹಣ ಈ ತನಕ ದೊರೆತಿಲ್ಲ. ಬಾಕಿ ಇರುವ ಪರಿಹಾರದ ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಜಿಪಂ ನಿಕಟಪೂರ್ವ ಸದಸ್ಯ ರತ್ನಾಕರ ನಾಯ್ಕ ಅವರು ಒತ್ತಾಯಿಸಿದರು.

ನೆರೆ ಸಂತ್ರಸ್ತ ರವಿ ನಾಯ್ಕ ಮಾತನಾಡಿ, ನದಿಯ ಅಂಚಿಗಿನ ತಾರಿಬಾಗಿನ ಪ್ರದೇಶದ ಗ್ರಾಮಸ್ಥರು ನೆರೆ ಸಂಕಷ್ಟವನ್ನು ಪ್ರತಿ ವರ್ಷ ಅನುಭವಿಸುವಂತಾಗುತ್ತದೆ. ಸರ್ಕಾರದಿಂದ ದೊರೆಯಬೇಕಾದ ಪರಿಹಾರ ಕೂಡ ಸಮರ್ಪಕವಾಗಿ ದೊರೆಯುತ್ತಿಲ್ಲ. ನೆರೆ ಪೀಡಿತ ಪ್ರದೇಶಗಳಿಗೆ ನೀಡಬೇಕಾದ ಸೌಲಭ್ಯಗಳಿಂದ ವಂಚಿಸಲಾಗಿದೆ. ಇನ್ಮುಂದೆಯಾದರೂ ಸರ್ಕಾರದಿಂದ ಬಿಡುಗಡೆಯಾಗುವ ಸೌಲಭ್ಯವನ್ನು ಈ ಭಾಗದ ಜನರಿಗೆ ತಲುಪಿಸುವ ಕಾರ್ಯವಾಗಬೇಕೆಂದು ಆಗ್ರಹಿಸಿದರು.

ಇನ್ನು ಜೆಡಿಎಸ್ ಕುಮಟಾ ತಾಲೂಕು ಅಧ್ಯಕ್ಷ ಸಿ ಜಿ ಹೆಗಡೆ ಮಾತನಾಡಿ, ಪ್ರತಿ ಮಳೆಗಾಲದಲ್ಲೂ ನೆರೆಯಿಂದ ಕಷ್ಟ ಅನುಭವಿಸುವವರು ಹೆಗಡೆ ತಾರಿಬಾಗಿಲಿನ ಗ್ರಾಮಸ್ಥರು. ನೆರೆ ಸಂತ್ರಸ್ತರನ್ನು ಪರದಾಡಿಸುವ ಕಾರ್ಯ ಸರ್ಕಾರ ಮಾಡಬಾರದು. ಅವರಿಗೆ ನ್ಯಾಯಯುತವಾಗಿ ದೊರೆಯಬೇಕಾದ ನೆರೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಪರಿಹಾರ ನೀಡುವಂತೆ ಒತ್ತಾಯಿಸಬೇಕಾಗುತ್ತದೆ. ಈ ಗ್ರಾಮವನ್ನು ನೆರೆ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದರು.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್-೨ ತಹಸೀಲ್ದಾರ್ ಅಶೋಕ ಭಟ್ ಅವರು, ಉಪವಿಭಾಗಾಧಿಕಾರಿ ರಾಹುಲ್ ರತ್ನಂ ಪಾಂಡೆ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಪರಿಹಾರದ ಹಣವನ್ನು ಸಂತ್ರಸ್ತರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

ಈ ಮನವಿ ಸಲ್ಲಿಕೆಯಲ್ಲಿ ಹೆಗಡೆ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಪಟಗಾರ, ಉಪಾಧ್ಯಕ್ಷ ಶಾಂತರಾಮ ನಾಯ್ಕ, ಸದಸ್ಯರಾದ ಸರೋಜಾ ನಾಯ್ಕ, ಆನಂದು ನಾಯ್ಕ, ಶಶೀಧರ ಆಡುಗೊಳು, ಗ್ರಾಮಸ್ಥರಾದ
ಲಕ್ಷ್ಮೀ ಕಾಂತ ನಾಯ್ಕ, ವಿನಾಯಕ ನಾಯ್ಕ, ಲಕ್ಷ್ಮಿ ಮುಕ್ರಿ, ಈಶ್ವರ ಪಟಗಾರ, ಮಂಗಲ ಅಂಬಿಗ, ಲಕ್ಷ್ಮಿ ಅಂಬಿಗ, ಸುರೇಶ ನಾಯ್ಕ, ಜಗನ್ನಾಥ ನಾಯ್ಕ, ಶೇಖರ ಮುಕ್ರಿ ಇತರರು ಇದ್ದರು.

error: