May 15, 2024

Bhavana Tv

Its Your Channel

ಶ್ರೀ ಶಾಂತಿಕಾOಬಾ ಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ೯ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿOದ ಸಂಪನ್ನ

ಕುಮಟಾ ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾoಬಾ ಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ೯ ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅನ್ನಸಂತರ್ಪಣೆ ವಿಜೃಂಭಣೆಯಿoದ ಸಂಪನ್ನ ಗೊಂಡಿತ್ತು.

ಈ ಬಗ್ಗೆ ಧಾರ್ಮಿಕ ಮುಖ್ಯಸ್ಥರಾದ ಪ್ರಭಾಕರ ಹೆಗಡೆ ಯವರು ಮಾಹಿತಿ ನೀಡಿ ಹೆಗಡೆಯ ಗ್ರಾಮ ದೇವಿ ಶ್ರೀ ಶಾಂತಿಕಾAಬಾ ಪರಮೇಶ್ವರಿ ದೇವಿಯ ದೇವಾಲಯದಲ್ಲಿ ನವರಾತ್ರಿ ಗಂಗಾಷ್ಟಮಿ ಜಾತ್ರೆ ಹಾಗೂ ಇತರ ಉತ್ವಗಳನ್ನು ಎಲ್ಲರೂ ಸೇರಿ ಐಕ್ಯತೆಯಿಂದ ಎಲ್ಲರೂ ಒಗ್ಗಟ್ಟಾಗಿ ನಡೆಸಿಕೊಂಡು ಬಂದಿದ್ದೇವೆ..
ಲೋಕ ಕಲ್ಯಾಣಕ್ಕಾಗಿ ಹಿರಿಯ ಧಾರ್ಮಿಕ ವಿದ್ವಾಂಸರ ಸೂಚನೆಯಂತೆ ದೇವಾಲಯದಲ್ಲಿ ಲಕ್ಷ ಪುಷ್ಪಾರ್ಚನೆ, ಕುಂಕಮಾರ್ಚನೆ, ಪ್ರತಿನಿತ್ಯ ಸುಹಾಸಿನಿಯರ ಪೂಜೆ, ಶತ ಚಂಡಿಹವನ, ಶತರುದ್ರಾಭಿಶೇಕ, ದೀಪ ನಮಸ್ಕಾರ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಯು ೯ ದಿನಗಳ ಕಾಲ ಶೃದ್ಧಾ ಭಕ್ತಿಯಿಂದ ನಡೆಸಿದ್ದೇವೆ..ಇಂದು ಮಂಗಳವಾರ ಸುಮಾರು ಐದು ಸಾವಿರ ಕ್ಕೂ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು..

ಶಾಸಕ ದಿನಕರ ಶೆಟ್ಟಿ ಆಗಮಿಸಿ ಮುಷ್ಟಿ ಕಾಣಿಕೆ ಸಮರ್ಪಿಸಿ ದೇವಿಗೆ ಸೇವೆ ಸಲ್ಲಿಸಿದರು.. ಯುವ ಮುಖಂಡ ರವಿಕುಮಾರ ಶೆಟ್ಟಿ ಹಾಗೂ ಇತರ ಮುಖಂಡರು, ಗಣ್ಯರು ಆಗಮಿಸಿ ಶ್ರೀದೇವಿ ಗೆ ಸೇವೆ ಸಲ್ಲಿಸಿದರು.. ೯ ದಿನಗಳ ಕಾಲವೂ ಪ್ರತಿದಿನ ಊರಿನ ಹಾಗೂ ವಿವಿಧ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.. ಧಾರ್ಮಿಕ ಕಾರ್ಯಕ್ರಮ ದ ಮುಖ್ಯಸ್ಥ ರಾಗಿ ಪ್ರಭಾಕರ ಹೆಗಡೆ, ದೇವಾಲಯದ ಮೊಕ್ತೆಸರ ನಾಗೇಶ ಶಾನಭಾಗ, ಹಾಗೂ ಎಲ್ಲ ಸಮಾಜದ ಯಜಮಾನರು ಹಾಗೂ ಊರಿನ ನಾಗರಿಕರು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ಶ್ರಮ ವಹಿಸಿದ್ದರು..

error: