May 3, 2024

Bhavana Tv

Its Your Channel

ಸರ್ವ ಧರ್ಮಿಯರ ಭಾವೈಕ್ಯತೆಯ ಹಬ್ಬ ಚಂದಾವರ ಪೇಸ್ತ್

ಕುಮಟಾ : ಸರ್ವ ಧರ್ಮಿಯರ ಭಾವೈಕ್ಯತೆಯ ಹಬ್ಬ ಚಂದಾವರ ಪೇಸ್ತ್ ಡಿ ೩ರಂದು ಶ್ರದ್ಧಾ-ಭಕ್ತಿಯಿಂದ ನಡೆಯಲಿದ್ದು, ಕೋವಿಡ್ ನಿಯಮಾವಳಿಗಳ ಪಾಲನೆಯಾಗಲಿದೆ.

ತಾಲೂಕಿನ ಚಂದಾವರದಲ್ಲಿ ಪ್ರತಿ ಡಿಸೆಂಬರ್ ೩ರಂದು ಸಂತ್ ಫ್ರಾನ್ಸಿಸ್ ಝೇವಿಯರ್ ಚರ್ಚನಲ್ಲಿ ಪೇಸ್ತ್ ನಡೆಯುತ್ತದೆ. ಈ ಆಚರಣೆ ಚಂದಾವರ ಪೇಸ್ತ್ ಎಂದೆ ಪ್ರಸಿದ್ಧಗಳಿಸಿದ್ದರಿಂದ ಆ ಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಕ್ರಿಶ್ಚಿಯನ್ ಸಮುದಾಯದ ಜೊತೆಗೆ ಹಿಂದು, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಿಯರು ಚರ್ಚಗೆ ತೆರಳಿ ಮೊಂಬತ್ತಿ ಬೆಳಗಿ ತಮ್ಮ ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸುತ್ತಾರೆ. ಚರ್ಚ ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಅಂಗಡಿಗಳು ತೆರೆವುದರಿಂದ ಆ ಪ್ರದೇಶದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತದೆ. ಅದರಲ್ಲೂ ಗ್ರಾಮೀಣ ಭಾಗದ ಜನರು ಗಡ್ಡೆ, ಗೆಣಸು ಸೇರಿದಂತೆ ಕಾಡಿನ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಇಂಥ ಬಲೂ ಅಪರೂಪದ ಉತ್ಪನ್ನಗಳನ್ನು ಖರೀದಿಸಲು ಜನಜಂಗುಳಿಯೇ ಕಂಡುಬರುತ್ತದೆ.

ಚಂದಾವರ ಭಾಗದ ಜನರು ಪೇಸ್ತ್ ದಿನದಂದು ತಮ್ಮ ಸಂಬAಧಿಗಳಿಗೆ, ಸ್ನೇಹಿತರಿಗೆ ಮನೆಗೆ ಕರೆದು ವಿಶೇಷ ಆತಿಥ್ಯ ನೀಡುವ ಸಂಪ್ರದಾಯ ಕೂಡ ಇದೆ. ಇಂಥ ಭಾವೈಕ್ಯತೆ ಮೆರೆಯುವ ಸಂಭ್ರಮದ ಚಂದಾವರ ಪೇಸ್ತ್ ಈ ಬಾರಿಯೂ ಕೊರೋನಾ ರೂಪಾಂತರ ವೈರಸ್‌ನ್ನು ತಡೆಯಲು ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಭಕ್ತರು ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಪೇಸ್ತ್ ಆಚರಣೆಯನ್ನು ಯಶಸ್ವಿಗೊಳಿಸಬೇಕೆಂದು ಚಂದಾವರದ ಸಾಂತ್ ಫ್ರಾನ್ಸಿಸ್ ಝೇವಿಯರ್ ಚರ್ಚನ ಪಾಧರ್ ಫಾವೊಸ್ತಿನ್ ವುಡ್ತಾದೊ ಅವರು ಕೋರಿದ್ದಾರೆ.

error: