May 14, 2024

Bhavana Tv

Its Your Channel

ಕರೋನಾದಂತಹ ಸಾಂಕ್ರಮಿಕ ಖಾಯಿಲೆಗಳು ಹೆಚ್.ಐ.ವಿ ಸೊಂಕಿತರಿಗೆ ಹೆಚ್ಚು ತೊಂದರೆದಾಯಕ- ಡಾ|| ಆಜ್ಞಾ ನಾಯಕ

“ಕುಮಟಾ : “ಕರೋನಾದಂತಹ ಸಾಂಕ್ರಮಿಕ ಖಾಯಿಲೆಗಳು ಹೆಚ್.ಐ.ವಿ ಸೊಂಕಿತರಿಗೆ ಹೆಚ್ಚು ತೊಂದರೆದಾಯಕ” ಎಂದು ಕುಮಟಾ ಎ.ವಿ ಬಾಳಿಗಾ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ದಲ್ಲಿ ಡಾ|| ಆಜ್ಞಾ ನಾಯಕ ಹೇಳಿದರು.
“ಕರೋನಾದಂತಹ ಸಾಂಕ್ರಮಿಕ ಖಾಯಿಲೆಗಳು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಿನ ತೊಂದರೆ ಉಂಟುಮಾಡುವದರಿAದ ಹೆಚ್.ಐ.ವಿ ಸೊಂಕಿತರು ಕರೋನಾದಂತಹ ಸಾಂಕ್ರಮಿಕ ಖಾಯಿಲೆಗಳ ಬಗ್ಗೆ ಜಾಗರೂಕರಾಗಿರಬೇಕು. ಹೆಚ್.ಐ.ವಿ ವೈರಸ್ ಕೂಡ ಮಾನವ ದೇಹದಲ್ಲಿನ ರೋಗ ನಿರೋಧಕ ವ್ಯವಸ್ಥೆಯನ್ನು ನಾಶ ಪಡಿಸುತ್ತದೆ. ಹೆಚ್.ಐ.ವಿ ಸೊಂಕು ಕುಮಟಾ ಸೇರಿದಂತೆ ನಮ್ಮ ಜಿಲ್ಲೆಯಲ್ಲಿ ತೀರ ಆತಂಕ ತರುವ ಹಂತಕ್ಕೆ ಬಂದಿಲ್ಲವಾದರೂ ಜಾಗೃತಿಯಿಂದರಬೇಕಾಗಿದೆ.ಇವತ್ತಿನವರೆಗೂ ಹೆಚ್.ಐ.ವಿ ಯನ್ನು ಸಂಪೂರ್ಣ ಗುಣಪಡಿಸುವ ಔಷಧಿ ಬಂದಿಲ್ಲ. ಆದ್ದರಿಂದ ಹೆಚ್.ಐ.ವಿ ಬರದಂತೆ ಮುಂಜಾಗೃತೆ ವಹಿಸುವುದು ಜಾಣತನ” ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ|| ಆಜ್ಞಾ ನಾಯಕ ಹೇಳಿದ್ದರು.

ಅವರು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸ್öನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ತಾಲೂಕ ಆರೋಗ್ಯ ಇಲಾಖೆ ಕುಮಟಾ, ಎ.ವಿ ಬಾಳಿಗಾ ಕಾಲೇಜಿನ ಎನ್.ಎಸ್.ಎಸ್. ಮತ್ತು ಯುತ್ ಕ್ಲಬ್‌ಗಳು, ಇವುಗಳ ಸಂಯುಕ್ತಾಶ್ರಯದಲ್ಲಿ ಎ.ವಿ ಬಾಳಿಗಾ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಏಡ್ಸ್ ಕಾರ್ಯಕ್ರಮದಲ್ಲಿ ಉಧ್ಘಾಟಕರಾಗಿ ಭಾಗವಹಿಸಿ ಮಾತನಾಡಿದ್ದರು.”ಹೆಚ್.ಐ.ವಿ ಸೊಂಕನ್ನು ಕೊನೆಗೊಳಿಸುವ ಗುರಿಯನ್ನು ಮುಟ್ಟಬೇಕಾದರೆ ಹೆಚ್.ಐ.ವಿ ಬಗ್ಗೆ ಸರಿಯಾದ ಮಾಹಿತಿಯನ್ನು ಎಲ್ಲರೂ ಪಡೆದುಕೊಳ್ಳಬೇಕು. ಹೆಚ್.ಐ.ವಿ ಸೊಂಕಿತರಿಗೆ ಅನುಭವಿಸುವ ಕಳಂಕ ತಾರತಮ್ಯ ಹೋಗಲಾಡಿಬೇಕಾಗಿದೆ.ಆದ್ದರಿಂದಲೇ ಈ ಸಲದ ಘೋಷ ವಾಕ್ಯದಲ್ಲಿ “ಅಸಮಾನತೆಗಳನ್ನು ಕೊನೆಗೊಳಿಸೋಣ ಏಡ್ಸ್ ಕೊನೆಗೊಳಿಸೋಣ” ಅಂತಿದೆ.ಅAದರೆ ಹೆಚ್.ಐ.ವಿ ಸೊಂಕಿತೆರಿಗೆ ಆರೋಗ್ಯ ಸೇವೆ ಸಿಗುವಲ್ಲಿ ಯಾವುದೇ ರೀತಿಯಲ್ಲಿ ತಾರತಮ್ಯ ಆಗಬಾರದು. ಅವರಿಗೆ ಸರಾಗವಾಗಿ ಆರೋಗ್ಯ ಸೇವೆ ಲಭಿಸಿದರೆ ಏಡ್ಸ್ ಕೊನೆಗಳಿಸಲು ಸಹಕಾರಿಯಾಗುತ್ತದೆ. ಹೆಚ್.ಐ.ವಿ ಸೊಂಕಿತರಿಗೆ ಸರಕಾರದಿಂದ ಸಾಕಷ್ಟು ಅನೂಕುಲವಾಗುವತಂಹ ಹಲವಾರು ಯೋಜನೆ ಜಾರಿಗೆ ತಂದಿದ್ದು ಅದನ್ನು ಪಡೆಯಲು ಮುಂದೆ ಬರಬೇಕಾಗಿದೆ. ಹೆಚ್.ಐ.ವಿ ಸೊಂಕಿತರ ರಕ್ಷಣೆಗೆ ಕಾನೂನು ಸಹ ಬಂದಿದೆ.ಕುಮಟಾದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್.ಐ.ವಿ ಸೊಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು ಸಮಧಾನಕರ ಸಂಗತಿಯಾಗಿದೆ. ಕಾಲೇಜ್ ವಿದ್ಯಾರ್ಥಿಗಳು ಹೆಚ್.ಐ.ವಿ ಬಗ್ಗೆ ಪೂರ್ಣ ಮಾಹಿತಿ ತಿಳಿದುಕೊಳ್ಳುವದರ ಮೂಲಕ ಸೊಂಕು ಬರದಂತೆ ಜಾಗೃತರಾಬೇಕಿದೆ” ಎಂದು ಹೇಳಿದ್ದರು.
ಸಭೆಯ ಅದ್ಯಕ್ಷತೆ ವಹಿಸಿದ ಕಾಲೇಜ್ ಪ್ರಿನ್ಸಿಪಾಲರಾದ ಪಿ.ಡಿ ಭಟ್ಟ್ ಮಾತನಾಡುತ್ತ “ನಾವೆಲ್ಲರೂ ಹೆಚ್.ಐ.ವಿ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವದರ ಮೂಲಕ “ಏಡ್ಸ್”ನ್ನು ಜಗತ್ತಿನಿಂದ ಮುಕ್ತವಾಗಿಸುವ ನಿಟ್ಟಿನಲ್ಲಿ ಬದ್ಧರಾಗೋಣ ಎಂದು ಹೇಳಿದ್ದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ.ನಾಯ್ಕ ರವರು ಅತಿಥಿಗಳನ್ನು ಸ್ವಾಗತಿಸಿದ್ದರು. ಎನ್ ಎಸ್.ಎಸ್ ಮುಖ್ಯಸ್ಥರಾದ ಎಮ್ ಡಿ ನಾಯ್ಕ ವಂದನಾರ್ಪಣೆ ಮಾಡಿದ್ದರು. ಉಪನ್ಯಾಸಕರಾದ ವಿನಾಯಕ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹಿರಿಯ ಆರೋಗ್ಯ ನೀರಿಕ್ಷಕರಾದ ದಿನೇಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದ್ದರು. ಆಪ್ತಸಮಾಲೋಚಕರಾದ ಪ್ರದೀಪ್ ನಾಯ್ಕ, ಟಿಬಿ ಮೇಲ್ವಿಚರಕರಾದ ರವೀಂದ್ರ ಸಹಕರಿಸಿದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: