May 19, 2024

Bhavana Tv

Its Your Channel

ಅರಣ್ಯ ಭೂಮಿ ಹಕ್ಕು : ತೀವ್ರ ಹೋರಾಟಕ್ಕೆ ನಿರ್ಧಾರ

ಕುಮಟ: ಅರಣ್ಯವಾಸಿ ಭೂಮಿ ಹಕ್ಕಿಗಾಗಿ ತೀವ್ರ ಹೋರಾಟ ಜರುಗಿಸುವುದು ಅನಿವಾರ್ಯ ಹಾಗೂ ಭೂಮಿ ಹಕ್ಕಿಗಾಗಿ ಅರಣ್ಯವಾಸಿಗಳ ಮನೆ ಮನೆ ಭೇಟಿ ಮೂಲಕ ಸಾಮಾಜಿಕ ಜಾಗೃತೆ ಮೂಡಿಸುವ ಜೊತೆಯಲ್ಲಿ ಸಂಘಟನಾತ್ಮಕ ಹೋರಾಟ ತೀವ್ರಗೊಳಿಸಲು ಅರಣ್ಯವಾಸಿಗಳು
ತೀರ್ಮಾನಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕರ ಅಧ್ಯಕ್ಷತೆಯಲ್ಲಿ ಜರುಗಿದ ಅರಣ್ಯವಾಸಿಗಳನ್ನ ಉಳಿಸಿ ಜಾಥದ ಸಭಾ ಬೃಹತ್ ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳು ಮೇಲಿನಂತೆ ನಿರ್ಣಯಿಸಿದರು.
ಅರಣ್ಯ ಭೂಮಿ ಹಕ್ಕಿಗೆ ಸಂಬAಧ ಪಟ್ಟಂತೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು, ಇಲ್ಲದಿದ್ದಲ್ಲಿ ಅರಣ್ಯವಾಸಿಗಳು ನಿರಾಶ್ರಿತರಾಗುವ ಪ್ರಸಂಗ ಬಂದೊಗುವುದು. ಅತೀ ಶೀಘ್ರದಲ್ಲಿ ರಾಜ್ಯ ಸರಕಾರ ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿ ಪರವಾದ ಅಫೀಡಾವಿಟ್ ನ್ನ
ಸಲ್ಲಿಸಬೇಕೆಂದು ಸಭೆಯಲ್ಲಿ ಮಾತನಾಡಿದ ಪ್ರಮುಖರು ಹೇಳಿದರು.
ಸಭೆಯನ್ನು ಉದ್ದೇಶಿಸಿ ಆರ್ ಹೆಚ್ ನಾಯ್ಕ ಚಿಕ್ಕೋಳ್ಳಿ, ರಮಾನಂದ ನಾಯ್ಕ ಅಚಿವೆ, ಸುರೇಶ ಪಟಗಾರ ಹೆಗಡೆ, ನಾಗಪತಿ ಗೌಡ, ಸಿದ್ಧಾಪುರ, ಸೀತಾರಾಮ ಗೌಡ ನೀರಗಾನ, ಗಣೇಶ ನಾಯ್ಕ ಚಂದಾವರ, ದೇವರಾಜ ಗೊಂಡ ಭಟ್ಕಳ, ಸುರೇಶ ಮೇಸ್ತ ಹೊನ್ನಾವರ, ಸಾರಂಬಿ ಶೇಖ್ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಮಟ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ಸ್ವಾಗತಿಸಿ ಪ್ರಾಸ್ತವಿಕ ಭಾಷಣ ಮಾಡಿದರು

error: