May 19, 2024

Bhavana Tv

Its Your Channel

ಅರಣ್ಯವಾಸಿಗಳನ್ನ ಉಳಿಸಿ ಬೃಹತ್ ಜಾಥಕ್ಕೆ ಚಾಲನೆ: ಅರಣ್ಯವಾಸಿಗಳ ಹಕ್ಕಿಗೆ ಸಂಘಟಿತ ಹೋರಾಟಕ್ಕೆ ನಿರ್ಧಾರ

ಕುಮಟ: ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಜಾಥಕ್ಕೆ ಇಂದು ಕುಮಟತಾಲೂಕಿನಲ್ಲಿ ಸಹಸ್ರಾರು ಅರಣ್ಯವಾಸಿಗಳು ವಿಶೇಷ ರೀತಿಯಲ್ಲಿ ವಿನ್ಯಾಸದೊಂದಿಗೆ ರಚಿತಗೊಂಡ ಹೋರಾಟದ ವಾಹಿನಿಯೊಂದಿಗೆ, ವಿವಿಧ ರೀತಿಯ ಸಾಂಸ್ಕçತಿಕ ತಂಡ, ಘೋಷಣೆಯೊಂದಿಗೆ ಅದ್ದೂರಿಯಾಗಿ ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳು ಚಾಲನೆ
ನೀಡಿದರು.
ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆ ಆಶ್ರಯದಲ್ಲಿ ಇಂದು ಕುಮಟ ತಾಲೂಕಿನ ಮಾಸ್ತಿಕಟ್ಟಾ ದೇವಾಲಯದ ಸರ್ಕಲ್‌ನಿಂದ ಜಾಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ರಾಜ್ಯ ಮಟ್ಟದ ಕಾರ್ಯಕ್ರಮದ ಅಂಗವಾಗಿ ಪ್ರಥಮ ಹಂತದಲ್ಲ ಜಿಲ್ಲೆಯಲ್ಲಿ ಹತ್ತುಸಾವಿರ ಕೀ.ಮೀ ಸಂಚರಿಸುವ ಹೋರಾಟ ವಾಹಿನಿ 500 ಹಳ್ಳಿಗಳಿಗೆ ಮುಂದಿನ 30 ದಿನಗಳಲ್ಲಿ ತಿರುಗಾಟಮಾಡಲಿದ್ದು, ಅರಣ್ಯವಾಸಿಗಳ ಹಳ್ಳಿಗಳಲ್ಲಿ ಹೋರಾಟ ವಾಹಿನಿ ಮೂಲಕ ಕಾನೂನು ಜಾಗೃತೆ ಮೂಡಿಸುವ ಕಾರ್ಯಕ್ರಮವು ವಿಶಿಷ್ಟ ರೀತಿಯಲ್ಲಿ ಆರಂಭಗೊAಡವು.

ಜಾಥದ ನೇತ್ರತ್ವವನ್ನ ಹೋರಾಟ ಸಮಿತಿಯ ಕುಮಟ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ, ಜಿಲ್ಲಾ ಸಂಚಾಲಕ ಜಿ.ಎಮ್ ಶೆಟ್ಟಿ ಅಂಕೋಲಾ, ಅಂಕೋಲಾ ತಾಲೂಕ ಅಧ್ಯಕ್ಷ ರಮಾನಂದ ನಾಯ್ಕ ಅಚಿವೆ, ದೇವರಾಜ ಗೊಂಡ, ಪಧಾದಿಕಾರಿಗಳಾದ ಸುರೇಶ ಬೆಟ್ಕುಳಿ, ಯಾಕೂಬ, ರಾಜೇಶ ಮಿತ್ರ ನಾಯ್ಕ, ಚಂದ್ರಕಾAತ ಕೊಚರೆಕರ, ಸಂದೇಶ ನಾಯ್ಕ ಬ್ರಹ್ಮಾವರ, ಸಾರಂಬಿ ಬೆಟ್ಕುಳಿ, ಸುರೇಶ ಪಟಗಾರ, ಸೀತಾರಾಮ ಬೋಗ್ರಿಬೈಲ್, ವೆಂಕಟೇಶ ನಾಯ್ಕ,
ಶ್ರೀಧರ ಭಟ್, ರಿಜವಾನ ಭಟ್ಕಳ, ಶಬ್ಬೀರ್ ಭಟ್ಕಳ, ವಿನೋಧ ನಾಯ್ಕ ಹೊನ್ನಾವರ,ನಾಗಪತಿ ಗೌಡ, ಸೀತರಾಮ ಗೌಡ ನೀರಗಾನ, ಆರ್ ಹೆಚ್ ನಾಯ್ಕ ಹೊನ್ನಾವರ ಮುಂತಾದವರು ಉಪಸ್ಥಿತರಿದ್ದರು.
ಉದ್ಘಾಟನೆ:
ಹೋರಾಟದ ಭಾವುಟವನ್ನ ಪ್ರದರ್ಶಿಸುತ್ತಾ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟದ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಜಾಥಕ್ಕೆ ಚಾಲನೆ ನೀಡುತ್ತಾ ಇತ್ತೀಚಿನ ಸುಫ್ರೀಂ ಕೋರ್ಟ ನ್ಯೂಡೆಲ್ಲಿಯ ಬೇರೆ ಬೇರೆ ರಾಜ್ಯಕ್ಕೆ ಸಂಬAಧಿಸಿದ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ತೀರ್ಮಾನದಿಂದ ಅರಣ್ಯವಾಸಿಗಳು ವಿಚಲಿತ ಹಾಗೂ ಆತಂಕಕ್ಕೆ ಒಳಗಾಗಿರುವ ಹಿನ್ನೆಲೇಯಲ್ಲಿ ಸರಕಾರದ ಮೇಲೆ ಹೇಚ್ಚಿನ ಒತ್ತಡ
ಹೇರಲು ಮತ್ತು ಹೋರಾಟಕ್ಕೆ ಇನ್ನಷ್ಟು ಗಟ್ಟಿತನ ತರುವ ಉದ್ದೇಶದಿಂದ “ಹೋರಾಟ ವಾಹಿನಿ” ಮೂಲಕ ಹೋರಾಟಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುವದು ಎಂದು ಅವರು ಹೇಳಿದರು.

error: