May 19, 2024

Bhavana Tv

Its Your Channel

ಧಾರೇಶ್ವರದ ಧಾರಾನಾಥ ದೇವರ ದರ್ಶನ ಪಡೆದ ಸಹಸ್ರಾರು ಭಕ್ತಾದಿಗಳು

ಕುಮಟಾ: ಗೋಕರ್ಣದ ಆತ್ಮಲಿಂಗದ ಭಾಗವೆಂದೇ ಪ್ರತೀತಿ ಇರುವ ಧಾರೇಶ್ವರದಲ್ಲಿ ಧಾರಾನಾಥ ದೇವರ ದರ್ಶನ ಪಡೆದ ಸಹಸ್ರಾರು ಭಕ್ತಾದಿಗಳು ಅಭಿಷೇಕಗೈದು ದೇವರ ಕೃಪೆಗೆ ಪಾತ್ರರಾದರು .

ಸುಮಾರು ೧೫ ರಿಂದ ೨೦ ಸಾವಿರ ಭಕ್ತಾಧಿಗಳು ವಿವಿಧ ಕಡೆಗಳಿಂದ ಆಗಮಿಸಿ, ಧಾರನಾಥನಿಗೆ ಜಲ ಹಾಗೂ ಪಂಚಾಮೃತಾಭಿಷೇಕ ಗೈದರು. ರಾಷ್ಟ್ರೀಯ ಹೆದ್ದಾರಿವರೆಗಿನ ಸರತಿ ಸಾಲಿನಲ್ಲಿ ದೇವಸ್ಥಾನದವರೆಗೆ ಭಕ್ತಾದಿಗಳು ಆಗಮಿಸಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಕೃತಾರ್ಥರಾದರು.

ಘಟ್ಟದ ಮೇಲಿನ ತಾಲೂಕುಗಳು, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ, ಶ್ರೀಕ್ಷೇತ್ರ ಧಾರೇಶ್ವರದ ಧಾರನಾಥನಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಮಂದಿರದ ಆಡಳಿತ ಸಮಿತಿ ಭಕ್ತರಿಗಾಗಿ ಉತ್ತಮ ವ್ಯವಸ್ಥೆ ಮಾಡಿದ್ದರು. ದೇವಸ್ಥಾನದ ಹೊರಾಂಗಣದಲ್ಲಿ ಜಾತ್ರೆ ಪೇಟೆ ಕಂಗೊಳಿಸುತ್ತಿತ್ತು. ವಿವಿಧ ಸಿಹಿ-ತಿನಿಸುಗಳು, ಗೆಡ್ಡೆ, ಗೆಣಸುಗಳು, ತಂಪು ಪಾನೀಯಗಳು ಸೇರಿದಂತೆ ವಿವಿಧ ವಸ್ತುಗಳು ಜನರನ್ನು ಕೈಬೀಸಿ ಕರೆಯುತ್ತಿದ್ದವು,

ದೇವಸ್ಥಾನದ ಮೊಕ್ತೇಸರ ಲಕ್ಷ್ಮಣ ಪ್ರಭು ಮಾತನಾಡಿ, ಪ್ರತಿ ವರ್ಷ ೧೫ ರಿಂದ ೨೦ ಸಾವಿರ ಭಕ್ತರು ಶಿವರಾತ್ರಿ ದಿನದಂದು ಆಗಮಿಸುತ್ತಾರೆ. ಬರುವ ಭಕ್ತಾಧಿಗಳಿಗೆ ದೇವಾಲಯದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಪೂಜೆ ಸಲ್ಲಿಸಿದ ನಂತರ ಪಾನಕದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷವೂ ಈ ಭಾಗದ ೬೦ ರಿಂದ ೭೦ ಯುವಕರು ಸೇವೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಈ ವೇಳೆ ದೇವಗಿರಿ ಗ್ರಾ.ಪಂ ಉಪಾಧ್ಯಕ್ಷ ಎಸ್.ಟಿ.ನಾಯ್ಕ, ಸದಸ್ಯ ಕುಮಾರ ಭಟ್ಟ, ಪ್ರಮುಖರಾದ ನಾಗೇಶ ನಾಯ್ಕ, ನಾಗಪ್ಪ ಹರಿಕಂತ್ರ, ಸಚಿನ ನಾಯ್ಕ, ಸುಬ್ಬು ಭಟ್ಟ ಇದ್ದರು.

error: