May 18, 2024

Bhavana Tv

Its Your Channel

ದೀಪಾಲಂಕಾರಗಳಿoದ ಕಂಗೊಳಿಸುತ್ತಿದೆ ಐತಿಹಾಸಿಕ ಮಿರ್ಜಾನ್ ಕೋಟೆ

ಕುಮಟಾ ತಾಲೂಕಿನ ಮಿರ್ಜಾನ್ ನಲ್ಲಿರುವ ಐತಿಹಾಸಿಕ ಮಿರ್ಜಾನ್ ಕೋಟೆ ಯು ದೀಪಾಲಂಕಾರಗಳಿAದ ಕಂಗೊಳಿಸುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಐತಿಹಾಸಿಕ ಹಿನ್ನಲೆಯುಳ್ಳ ಕುಮಟಾ ಮಿರ್ಜಾನ್ ಕೋಟೆಯು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಕೋಟೆ ಈಗ ದೀಪಾಲಂಕಾರದಿAದ ಕಂಗೊಳಿಸುತ್ತಿದ್ದು, ಸ್ಥಳೀಯ ಮಕ್ಕಳಿಗೆ, ಪ್ರವಾಸಿಗರಿಗೆ ಹೆಚ್ಚು ಆಕರ್ಷಣೀಯ ಕೇಂದ್ರವಾಗಿದೆ. ಸ್ವಾತಂತ್ರ‍್ಯದ 75 ನೇ ವರ್ಷದ ಅಮೃತ ಮಹೋತ್ಸವದ ಆಚರಣೆ ನಿಮಿತ್ತ ಧಾರವಾಡದ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯು ಮಿರ್ಜಾನ್ ಕೋಟೆಯನ್ನು ದೀಪಾಲಂಕಾರಗೊಳಿಸಿದೆ. ಲೇಸರ್ ಲೈಟ್ ಬಳಸಿ ಕೋಟೆಯ ಸುತ್ತಲೂ ಕೇಸರಿ ಬಿಳಿ ಹಸಿರು ಬಣ್ಣದ ಲೈಟ್ ಗಳನ್ನು ಅಳವಡಿಸಲಾಗಿದೆ. ದೀಪಾಲಂಕಾರಗೊAಡ ಈ ಕೋಟೆಯು ರಾತ್ರಿ ಸಮಯದಲ್ಲಿ ಬಹಳ ಸುಂದರವಾಗಿ ಗೋಚರಿಸುತ್ತಿದೆ. ಈ ಕಾರಣದಿಂದ ಕೋಟೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕೋಟೆ ಬಳಿ ಧಾವಿಸುತ್ತಿದ್ದಾರೆ. ಮಿರ್ಜಾನ್ ಕೋಟೆಯಲ್ಲಿ ಸ್ವಾತಂತ್ರ‍್ಯೋತ್ಸವ ಹಬ್ಬದ ಕಳೆ ನಯನಮನೋಹರವಾಗಿದ್ದು, ಈ ದೀಪಾಲಂಕಾರ ಸ್ವಾತಂತ್ರ‍್ಯ ದಿನಾಚರಣೆಯ ವರೆಗೆ ಇರಲಿದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ವರದಿಗಾರ : ನರಸಿಂಹ ನಾಯ್ಕ್ ಹರಡಸೆ.

error: