May 3, 2024

Bhavana Tv

Its Your Channel

ಅರಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಾ. ಸರಸ್ವತಿ ಚಿಮ್ಮಲಗಿ ಭೇಟಿ

ಕುಮಟಾ:- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ಶಾಲೆಗೆ ಹಿರಿಯ ಸಾಹಿತಿಗಳು ಆದ ಡಾ. ಶ್ರೀಮತಿ ಸರಸ್ವತಿ ಚಿಮ್ಮಲಗಿ ರವರು ಭೇಟಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸುತ್ತ ತಾವು ತಮ್ಮ ಬಾಲ್ಯದಲ್ಲಿ ಭರಣಿ ತಟ್ಟಿ ಅದನ್ನು ಮಾರಿ ಬಂದ ಹಣದಲ್ಲಿ ಶಿಕ್ಷಣ ಪಡೆದ ಕುರಿತು ಹಾಗೂ ಪರಿಶ್ರಮ, ಆಸಕ್ತಿ, ಶ್ರದ್ಧೆಯಿಂದ ಪಡೆದ ಶಿಕ್ಷಣ ನಮ್ಮ ಬದುಕಿಗೆ ಭದ್ರ ಬುನಾದಿಯಿದ್ದಂತೆ.ಪರಿಸರದ ಮಡಿಲಿನಲ್ಲಿ ಗುಡ್ಡಗಾಡು ಪ್ರದೇಶದಿಂದ ಧೈರ್ಯದಿಂದ ಶಾಲೆಗೆ ಬಂದು ಶಿಕ್ಷಣ ಪಡೆವ ಮುದ್ದು ಮಕ್ಕಳಿಗೆ ಸರಸ್ವತಿ ಸದಾ ವಿದ್ಯೆಯನ್ನು ಧಾರೆಯೆರೆದು
ಭಾವಿ ಭವಿಷ್ಯ ಉಜ್ವಲವಾಗಲೆಂದು,ಕಥೆ,ಕವಿತೆಗಳನ್ನು ಬರೆಯುವ ಮಕ್ಕಳಿಗೆ ಓದಿನತ್ತ ಹೆಜ್ಜೆ ಆಸಕ್ತಿ ಬೆಳೆಸಿಕೊಳ್ಳಲು ಕಿವಿಮಾತು ಹೇಳಿದರು.

ಬಸವರಾಜ ದೆಹಲಿ ಇವರು ಮುಖ್ಯ ಅತಿಥಿಗಳಾಗಿ ಮಕ್ಕಳಿಗೆ ಹಿರಿಯ ಸಾಹಿತಿಗಳು ಹಾಗೂ ಅವರ ಕೃತಿಗಳ ಬಗ್ಗೆ ತಿಳಿಸಿಕೊಡುವುದು ಬಹುಮುಖ್ಯವೆಂದರು.

ಮುಖ್ಯಾಧ್ಯಾಪಕಿ ಸಾಹಿತಿ ಶಿವಲೀಲಾ ಹುಣಸಗಿ ಸ್ವಾಗತಿಸಿದರು. ವಂದನಾರ್ಪಣೆಯನ್ನು ಸಹಶಿಕ್ಷಕರಾದ ನಾಗರಾಜ ಆಚಾರಿ ನೆರವೇರಿಸಿದರು,ಸಹಶಿಕ್ಷಕಿ ಮಮತಾ ನಾಯಕ ಉಪಸ್ಥಿತರಿದ್ದರು.ಶಾಲಾಮಕ್ಕಳು ಪ್ರಾರ್ಥಿಸಿದರು.

error: