May 3, 2024

Bhavana Tv

Its Your Channel

ಕುಮಟಾದ ಮುನ್ಸಿಪಾಲ್ಟಿ ಜಿಮ್ ಹಾಗೂ ಉತ್ಕನ್ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ ನಡೆದ “ಹ್ಯಾಂಗ್ ಮಾಸ್ಟರ್ 2022 ಸ್ಪರ್ಧೆ”

ಕುಮಟಾ: ರವಿವಾರದಂದು ಕುಮಟಾದ ಮುನ್ಸಿಪಾಲ್ಟಿ ಜಿಮ್ ಹಾಗೂ ಉತ್ಕನ್ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ ನಡೆದ “ಹ್ಯಾಂಗ್ ಮಾಸ್ಟರ್ 2022 ಸ್ಪರ್ಧೆ” ಅದ್ಧೂರಿಯಾಗಿ ನಡೆಯಿತು.

ಸ್ಪರ್ಧೆಯನ್ನು ಮೂರು ವಿಭಾಗವಾಗಿ ಮಾಡಿದ್ದು, ಮೊದಲ ಕೆಟಗರಿ “ಹ್ಯಾಂಗಿAಗ್ ದ ಪೋಲ್” ಸ್ಪರ್ಧೆಯಲ್ಲಿ ರಾಘವೇಂದ್ರ ನಾಯ್ಕ್ ಅವರು ಪ್ರಥಮ ಬಹುಮಾನ, ಪ್ರಜ್ವಲ್ ನಾಯ್ಕ್ ಅವರು ದ್ವಿತೀಯ ಬಹುಮಾನ ಹಾಗೂ ಸಂಕಲ್ಪ್ ಶೇಟ್ ಅವರು ತ್ರತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಎರಡನೆ ಕೆಟಗರಿಯ “ಪುಲ್ ಅಪ್ಸ್” ಸ್ಪರ್ಧೆಯಲ್ಲಿ ಕುಮಾರ ಹರಿಕಾಂತ ಅವರು ಪ್ರಥಮ ಬಹುಮಾನ, ಜೀವನ್ ತಾರಿ ಅವರು ದ್ವಿತೀಯ ಬಹುಮಾನ ಹಾಗೂ ಮಾರುತಿ ಪ್ರಭು ಅವರು ತೃತ್ತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.

ಮೂರನೆ ಕೆಟಗರಿ “ಪುಷ್ ಅಪ್ಸ್” ಸ್ಪರ್ಧೆಯಲ್ಲಿ ವಿನಾಯಕ್ ಗೌಡ ಅವರು ಪ್ರಥಮ ಬಹುಮಾನ, ಪ್ರಕಾಶ್ ಮಿರ್ ಜಾನ್ಕರ್ ಅವರು ದ್ದಿತೀಯ ಬಹುಮಾನ ಹಾಗೂ ಎಮ್ .ಡಿ. ಬುನೈನ್ ಮುಲ್ಲಾ ಅವರು ತೃತೀಯ ಬಹುಮಾನ ವನ್ನು ಪಡೆದುಕೊಂಡಿರುತ್ತಾರೆ. ಗೆದ್ದಂತಹ ಎಲ್ಲಾ ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಬಹುಮಾನವಾಗಿ ವಿತರಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ನವೀನ್ ಕುಮಾರ್ ನಾಯ್ಕ್ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಡಾ. ಶ್ರೀಧರ ಗೌಡ, ಉಪನ್ಯಾಸಕರಾದ ಶ್ರೀ ರಾಘವೇಂದ್ರ ಶೆಟ್ಟಿ, ಹೊಲನಗದ್ದೆ ಪಿ.ಡಿ.ಓ ನಾಗರಾಜ ನಾಯ್ಕ್, ಉತ್ಕನ್ ಫೌಂಡೇಶನ್ ನ ಸಹಸಂಸ್ಥಾಪಕರು ಹಾಗೂ ಪ್ರೊಜೆಕ್ಟ್ ಹೆಡ್ ಜಯಂತ್ ಮಡಿವಾಳ, ಪುರಸಭೆ ವ್ಯಾಯಾಮ ಶಾಲೆ ಶಿಕ್ಷಕ ಗುರುರಾಜ್ ಉಪ್ಪಾರ್, ವ್ಯಾಯಾಮ ಶಾಲೆ ಹಿರಿಯ ವಿದ್ಯಾರ್ಥಿ ಶ್ರೀನಾಗ್ ಪ್ರಭು, ಅಶೋಕ್ ನಾಯ್ಕ್ ಮತ್ತು ಮಹೇಶ್ ನಾಯ್ಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 20 ಕ್ಕಿಂತಲೂ ಹೆಚ್ಚು ಜಿಮ್ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸ್ಪರ್ಧೆಯ ನಿರ್ಣಾಯಕರಾಗಿ ಮಹೇಶ್ ನಾಯ್ಕ್, ಶ್ರೀನಾಗ್ ಪ್ರಭು, ನವೀನ್ ಕುಮಾರ್, ರಾಘವೇಂದ್ರ ನಾಯ್ಕ್ ವಹಿಸಿದ್ದರು.

ವರದಿ :ವಿಶ್ವನಾಥ ಜಿ ನಾಯ್ಕ ಕುಮಟಾ

error: