May 3, 2024

Bhavana Tv

Its Your Channel

ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಲರವ ;

ಕುಮಟಾ:- ಮಕ್ಕಳ ದಿನಾಚರಣೆಯ ನಿಮಿತ್ತ ಮುಂಜಾನೆಯಿAದಲೇ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳಿಗಾಗಿ ಗೋಣಿಚೀಲದ ಓಟ , ಬಿಸ್ಕೆಟ್ ಹಾರಿ ತಿನ್ನುವ, ಸಂಗೀತ ಕುರ್ಚಿ, ಪೊಟಾಟೋ ರೇಸ್, ತಲೆಯ ಮೇಲೆ ಪುಸ್ತಕ ಇಟ್ಟು ಓಡುವುದು, ಬೊಗಸೆಯಲ್ಲಿ ನೀರು ತುಂಬುವುದು ಈ ಮೊದಲಾದ ಸ್ಪರ್ಧೆಗಳು ತರಗತಿವಾರು ನಡೆದವು. ಮಧ್ಯಾಹ್ನದ ಹೊತ್ತಿಗೆ ವೇದಿಕೆಯ ಕಾರ್ಯಕ್ರಮ ನಡೆಯಿತು. ಮಕ್ಕಳೇ ಕಾರ್ಯಕ್ರಮದ ಅಧ್ಯಕ್ಷರು ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಾರಿ ರಕ್ಷಾ ನಾಯ್ಕ ಇಂದು ನನಗೆ ಅತ್ಯಂತ ಖುಷಿ ಕೊಟ್ಟ ದಿನವಾಗಿದೆ. ಈ ದಿನ ನಮ್ಮ ಶಿಕ್ಷಕರು ನಮಗಾಗಿಯೇ ಇಡೀ ವೇದಿಕೆಯನ್ನು ಸಿದ್ಧಪಡಿಸಿದ್ದಾರೆ. ಈ ಕಾರ್ಯಕ್ರಮ ಶಿಕ್ಷಕರಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ನಡೆಯುತ್ತಿರುವ ಕಾರ್ಯಕ್ರಮವಾಗಿದೆ ಎಂಬುದಕ್ಕೆ ನನಗೆ ಅತ್ಯಂತ ಸಂತೋಷವಾಗಿದೆ. ನನ್ನ ಜೀವನದಲ್ಲಿ ಇದು ಮರೆಯಲಾಗದ ದಿನ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಉದ್ಘಾಟಿಸಿದ ಕುಮಾರಿ ನಮೃತ ಪಟಗಾರ ನಾವು ಮಕ್ಕಳಾಗಿದ್ದರೂ ಶಿಕ್ಷಕರು ನಮ್ಮನ್ನು ಹಿರಿಯರನ್ನಾಗಿ ಮಾಡಿದ್ದಾರೆ. ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನ ವನ್ನು ಮಕ್ಕಳ ದಿನಾಚರಣೆ ಯನ್ನಾಗಿ ಆಚರಿಸುತ್ತಿದ್ದೇವೆ ಎಂದರು. ಅತಿಥಿಗಳಾಗಿ ಕುಮಾರಿ ಭೂಮಿಕಾ ಅಂಬಿಗ, ನಾಗಶ್ರೀ ನಾಯ್ಕ, ಅಂಕಿತಾ ಹೆಗಡೆಕರ ಮಾತನ್ನಾಡಿದರು. ವೇದಿಕೆಯಲ್ಲಿ ದೀಕ್ಷೀತಾ ಗೌಡ, ಶಾಂತಿಕಾ ಭಂಡಾರಿ, ಕಾನಾಕ್ಷಿ ಮುಕ್ರಿ, ಗೌತಮಿ ಮುಕ್ರಿ, ಲೇಖನ ಪಟಗಾರ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ರಾದ ಮಂಗಲಾ ಹೆಬ್ಬಾರ್ ರವರು ಮಕ್ಕಳ ದಿನಾಚರಣೆಯ ಮಹತ್ವ ತಿಳಿಸಿ ಶುಭಕೋರಿದರು. ಶಿಕ್ಷಕಿ ನಯನಾ ಪಟಗಾರ ಮಾತನ್ನಾಡಿದರು. ಶಿಕ್ಷಕ ಶ್ರೀಧರ್ ಗೌಡ ಸ್ವಾಗತಿಸಿದರು. ಶಿಕ್ಷಕಿ ಭಾಗ್ಯಲಕ್ಷ್ಮಿ ನಾಯಕ ವಂದಿಸಿದರು. ಸಂಜನಾ ನಾಯ್ಕ ಹಾಗೂ ಧನ್ಯಶ್ರೀ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಲಕ್ಷ್ಮೀ ನಾಯ್ಕ ಸಹಕರಿಸಿದರು.
ಮಕ್ಕಳ ದಿನಾಚರಣೆ ನಿಮಿತ್ತ ಸಿಹಿ ಊಟದ ವ್ಯವಸ್ಥೆ ಮಾಡಿ ಸಂಭ್ರಮಿಸಿದರು. ಸ್ಪರ್ಧೆ ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮವಿತರಿಸಲಾಯಿತು. ಇದೇ ವೇಳೆಯಲ್ಲಿ ಕೆನರಾ ಬ್ಯಾಂಕ್ ಹೆಗಡೆ ಶಾಖೆ ಯವರು ಎಲ್ಲಾ ವಿದ್ಯಾರ್ಥಿಗಳಿಗೆ ಪೆನ್ನು, ಚಾಕೊಲೇಟ್ ವಿತರಿಸಿದರು.

error: