May 1, 2024

Bhavana Tv

Its Your Channel

ಕೂಜಳ್ಳಿಯ ಶ್ರೀ ಪ್ರಸಾದ ಗಣಪತಿ ದೇವಾಲಯದಲ್ಲಿ ಸಂಕಷ್ಟಿ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಭಜನಾ ಸಂಕೀರ್ತನೆ

ಕುಮಟಾ ತಾಲೂಕಿನ ಕೂಜಳ್ಳಿಯ ಶ್ರೀ ಪ್ರಸಾದ ಗಣಪತಿ ದೇವಾಲಯದಲ್ಲಿ ಸಂಕಷ್ಟಿ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಭಜನಾ ಸಂಕೀರ್ತನೆ ನಡೆಯಿತು. ಕಲಾತ್ಮಕ ವರದಿಗಾರ ನರಸಿಂಹ ನಾಯ್ಕ್ ಹರಡಸೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕೂಜಳ್ಳಿ ಶ್ರೀ ಗಣಪತಿಯು ಪ್ರಸಾದ ಗಣಪತಿ ಎಂದೇ ಮನೆಮಾತಾಗಿದ್ದು, ಹೂವಿನ ಪ್ರಸಾದ ನೀಡುವ ಮೂಲಕ ಭಕ್ತರ ಶುಭ ಕಾರ್ಯಗಳನ್ನು ಸಾಂಗವಾಗಿ ನೆರವೇರಿಸುವ ಆರಾಧ್ಯ ದೈವವಾಗಿದ್ದಾನೆ. ಅವರ ಕಷ್ಟಗಳನ್ನು ಕಳೆದು ಇಷ್ಟಾರ್ಥಗಳನ್ನು ಈಡೇರಿಸುವ ಮಹಾಮಹಿಮಾನಾಗಿದ್ದಾನೆ. ಕಂಕಣ ಭಾಗ್ಯ, ಸಂತಾನ ಭಾಗ್ಯ, ಆಯುರಾರೋಗ್ಯ, ಆಸ್ತಿ-ಪಾಸ್ತಿ, ವಾಹನ ಖರೀದಿ ಸೇರಿದಂತೆ ಮುಂತಾದ ಮಹತ್ವದ ವಿಚಾರಗಳಲ್ಲಿ ಶ್ರೀ ದೇವರ ಪ್ರಸಾದ ಪಡೆದ ಭಕ್ತರು ನೆಮ್ಮದಿ ಕಂಡುಕೊAಡಿದ್ದಾರೆ.

ಇಲ್ಲಿ ಸಂಕಷ್ಟಿ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಕುಮಟಾದ ಶ್ರೀ ಮಾರುತಿ ಭಜನಾ ಮಂಡಳಿಯವರಿAದ ಭಜನಾ ಸಂಕೀರ್ತನೆ ನಡೆಯಿತು. ಕೂಜಳ್ಳಿಯ ಸುಧಾಕರ್ ನಾಯ್ಕ್ ರಚಿಸಿದ “ನಮೋ ನಮೋ ಕೂಜಳ್ಳಿ ಗಣೇಶ..” ಭಕ್ತಿಗೀತೆಯನ್ನು ಇದೇ ಊರಿನ ರಾಜ್ಯಪ್ರಶಸ್ತಿ ಪುರಸ್ಕೃತ ಮಾರುತಿ ನಾಯ್ಕ್ ಸುಮಧುರವಾಗಿ ಹಾಡಿದರು.
ಚಲನಚಿತ್ರ ನಟ ನಿರ್ಮಾಪಕ ಜಿ.ಡಿ ಹೆರಂಭಾ ಹಾಡಿದ “ಏತರ ಕಟಪಟಿ…” ಭಜನೆಗೆ ಜಗದೀಶ್ ಭಂಡಾರಿ ತಬಲಾ ಸಾಥ್ ಹಾಗೂ ವಿಜಯ ಮಹಲೆ ಹಾರ್ಮೋನಿಯಂ ವಾದನ ಅತ್ಯಮೋಘವಾಗಿತ್ತು. ಇನ್ನು ಶಂಕರ್ ನಾಯ್ಕ್, ವೀರೇಂದ್ರ ಗುನಗ, ಕುಮಾರಿ ಯಶೋಧ ಸಹ ಸೊಗಸಾಗಿ ಹಾಡಿ ಭಜನಾ ಸಂಕೀರ್ತನೆಯ ಯಶಸ್ಸಿಗೆ ಕಾರಣರಾದರು.

ಬಳಿಕ ಕೂಜಳ್ಳಿ ಊರಿನ ಸಮಸ್ತರು ಹಾಗೂ ಮಾರುತಿ ಭಜನಾ ಮಂಡಳಿಯ ಕಲಾವಿದರು ಸೇರಿ, ಕಲಾತ್ಮಕ ವರದಿಗಾರ ನರಸಿಂಹ ನಾಯ್ಕ್ ಹರಡಸೆ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.

ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಾಯ ಭಟ್ ಈ ಸಂದರ್ಭದಲ್ಲಿ ಮಾತನಾಡಿ “ಕೂಜಳ್ಳಿಯ ಪ್ರಸಾದ ಗಣಪತಿ ಮೋದಕ ಪ್ರಿಯನಷ್ಟೇ ಅಲ್ಲ, ಗುಂಡಬಾಳ ಮುಖ್ಯಪ್ರಾಣನಂತೆ ಕಲಾಪ್ರಿಯನೂ ಹೌದು. ಇದಕ್ಕೆ ನಿದರ್ಶನವಾಗಿ ಊರಿನ ಬಹಳಷ್ಟು ಪ್ರತಿಭೆಗಳು ಕಲಾಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
‘ಪ್ರಸಾದ ಗಣಪತಿ ಪ್ರಾಮಾಣಿಕ ಪ್ರತಿಭೆಗಳನ್ನು ತನ್ನ ಸನ್ನಿದಾನಕೆ ಕರೆಸಿಕೊಂಡು, ಭಕ್ತರ ಕೈಯಲ್ಲಿ ಗೌರವಿಸಿ ಅನುಗ್ರಹಿಸುತ್ತಾನೆ’ ಎಂಬುದಕ್ಕೆ ಈ ಸನ್ಮಾನವೇ ಸಾಕ್ಷಿಯಾಗಿದೆ.” ಎಂದರು.

ಇನ್ನು ಸನ್ಮಾನ ಸ್ವೀಕರಿಸಿದ ನರಸಿಂಹ ನಾಯ್ಕ್ ಮಾತನಾಡಿ “ನಾನು ಮಾರುತಿ ಭಜನಾ ಮಂಡಳಿಯ ಅಭಿಮಾನಿ. ಕಲಾಭಿಮಾನಿಗಳು ಕಲಾವಿದರನ್ನು, ಜನ ಸಾಮಾನ್ಯರು ಸಾಧಕರನ್ನು ಸನ್ಮಾನಿಸುವುದು ಸಹಜ. ಆದರೆ ಇಲ್ಲಿ ಜನಪ್ರಿಯ ಕಲಾವಿದರೇ ಅಭಿಮಾನಿಯನ್ನು ಸನ್ಮಾನಿಸಿರುವುದು ವಿಶೇಷ.” ಎಂದರು.

ಶಿಕ್ಷಕ ವಿಜಯಕುಮಾರ್ ನಾಯ್ಕ್ ಈ ಸನ್ಮಾನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ನಂತರ ಭಕ್ತರೆಲ್ಲ ಸೇರಿ ಪ್ರಣತೆಯಲ್ಲಿ ಜ್ಯೋತಿಯನ್ನು ಬೆಳಗಿಸುವ ಮೂಲಕ ಶ್ರೀ ದೇವರನ್ನು ಸ್ತುತಿಸಿದರು. ಮಹಾ ಮಂಗಳಾರತಿಯ ಬಳಿಕ ಪ್ರಸಾದ ವಿತರಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ನೀತರಾದರು.

error: