April 29, 2024

Bhavana Tv

Its Your Channel

ಶ್ರೀ ಕ್ಷೇತ್ರ ಉಳ್ಳೂರು ಮಠದಲ್ಲಿ 24 ಗಂಟೆಗಳ ನಿರಂತರ ಭಜನೆಯೊಂದಿಗೆ ಯಾಮಾಷ್ಟಕ ಭಜನಾ ಕಾರ್ಯಕ್ರಮ ಹಾಗೂ ಕಾರ್ತೀಕ ದೀಪೋತ್ಸವ ಸಂಪನ್ನ

ಕುಮಟಾ ತಾಲೂಕಿನ ಶ್ರೀ ಕ್ಷೇತ್ರ ಉಳ್ಳೂರು ಮಠದಲ್ಲಿ 24 ಗಂಟೆಗಳ ನಿರಂತರ ಭಜನೆಯೊಂದಿಗೆ ಯಾಮಾಷ್ಟಕ ಭಜನಾ ಕಾರ್ಯಕ್ರಮ ಹಾಗೂ ಕಾರ್ತೀಕ ದೀಪೋತ್ಸವ ಸಂಪನ್ನಗೊAಡಿತು.

ಶ್ರೀ ಕ್ಷೇತ್ರ ಉಳ್ಳೂರು ಮಠದ ಶ್ರೀ ಇಷ್ಟಸಿದ್ಧಿ ಮಹಾಗಣಪತಿ, ಶ್ರೀ ಮಹಾವಿಷ್ಣು, ಶ್ರೀ ಚಂದ್ರಮೌಳೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಕಾರ್ತಿಕ ಕೃಷ್ಣ ಪಕ್ಷದ ಚತುರ್ಥಿಯಂದು ಮುಂಜಾನೆ ಯಾಮಾಷ್ಟಕ ಭಜನಾ ಕಾರ್ಯಕ್ರಮ ಏರ್ಪಡಿಸಿ, ನಿರಂತರ 24 ಗಂಟೆಗಳ ಕಾಲ ತಾಳ ನಿಲ್ಲಿಸದೆ ಭಜನಾ ಸಂಕೀರ್ತನೆ ಮಾಡಿ, ಮಾರನೇ ದಿನ ಮುಂಜಾನೆ ಉತ್ಸವದೊಂದಿಗೆ ಮಂಗಲಗೊಳಿಸಲಾಯಿತು.

ವಿವಿಧ ವೃತ್ತಿಪರ ಭಜನಾ ತಂಡಗಳು ಈ ಯಾಮಾಷ್ಟಕ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಾಸೇವೆಗೈದರು. ಅದರಂತೆ ಜಿಲ್ಲೆಯ ಹೆಸರಾಂತ ಭಜನಾ ಮಂಡಳಿಯಾದ ಕುಮಟಾದ ಶ್ರೀ ಮಾರುತಿ ಭಜನಾ ಮಂಡಳಿ ಯವರಿಂದಲೂ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ರಾಜ್ಯಪ್ರಶಸ್ತಿ ಪುರಸ್ಕೃತ ಮಾರುತಿ ನಾಯ್ಕ ಕೂಜಳ್ಳಿ, ಶಂಕರ್ ನಾಯ್ಕ್, ವೀರೇಂದ್ರ ಗುನಗಾ ಸುಮಧುರವಾಗಿ ಹಾಡುವ ಮೂಲಕ ಭಕ್ತವೃಂದದ ಶ್ಲಾಘನೆಗೆ ಸಾಕ್ಷಿಯಾದರು. ಖ್ಯಾತ ಕೀಬೋರ್ಡ್ ವಾದಕ ವಿಜಯ್ ಮಹಾಲೆ ಹಾರ್ಮೋನಿಯಂ ಹಾಗೂ ಯುವ ಕಲಾವಿದ ರಾಜೇಶ್ ಗುನಗ ತಬಲಾ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮೆರಗು ತಂದರು.

ನೂರಾರು ಸಂಖ್ಯೆಯಲ್ಲಿ ಭಕ್ತರು, ಕಲಾಭಿಮಾನಿಗಳೆಲ್ಲ ದೀಪೋತ್ಸವದಲ್ಲಿ ಪಾಲ್ಗೊಂಡು ಭಜನೆಯನ್ನು ಆಲಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

ವರದಿ:ನರಸಿಂಹ ನಾಯ್ಕ್ ಹರಡಸೆ

error: