April 30, 2024

Bhavana Tv

Its Your Channel

ಹಿರೇಗುತ್ತಿ ಹೈಸ್ಕೂಲಿನಲ್ಲಿ ೧೦ನೇ ವರ್ಗದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಕುಮಟಾ: ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕರು “ವಿದ್ಯಾರ್ಥಿಗಳು ಶಿಸ್ತು ಮತ್ತು ಪ್ರೀತಿಯಿಂದ ವಿದ್ಯಾರ್ಜನೆ ಮಾಡಿದಾಗ ಯಶಸ್ಸು ಸುಲಭವಾಗುತ್ತದೆ. ಪರಿಶ್ರಮದ ಮೂಲಕ ವಿದ್ಯಾರ್ಥಿ ಜೀವನವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಸಮಯದ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ತಮ್ಮ ಆಶಯ ಹಾಗೂ ಆಸಕ್ತಿಗಳಿಗೆ ತಕ್ಕಂತೆ ವಿದ್ಯಾರ್ಜನೆ ಮುಂದುವರೆಸಿದ್ದಲ್ಲಿ ಯಶಸ್ಸು ಖಂಡಿತವಾಗಿ ಸಿಗುತ್ತದೆ” ಎಂದರು.

ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ ನೀಡುವುದರ ಮೂಲಕ ಪಾಲಕರಿಗೆ, ಶಾಲೆಗೆ, ಊರಿಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ವರ್ಗ ಶಿಕ್ಷಕರಾದ ಜಾನಕಿ ಎಂ ಗೊಂಡ ಮಾತನಾಡಿ “ಗುರಿಯ ಸಫಲತೆಯಲ್ಲಿ ಅವಿರತ ಪ್ರಯತ್ನ ಮುಖ್ಯ” ಎಂದರು.
ವಿದ್ಯಾರ್ಥಿಗಳಾದ ಕಾಂಚಿಕಾ ನಾಯಕ, ಎಮ್.ಜಿ ನಾಗಭೂಷಣ, ವಿಜೇತ ಗುನಗಾ ಶಾಲೆಯಲ್ಲಿ ಕಲಿಕೆಯ ತಮ್ಮ ಸಿಹಿ ಅನುಭವವನ್ನು ಹಂಚಿಕೊoಡರು.

ಶಿಕ್ಷಕರಾದ ಶ್ರೀ ವಿಶ್ವನಾಥ ಪಿ ಬೇವಿನಕಟ್ಟಿ ಬಹುಮಾನ ವಿಜೇತರ ಯಾದಿ ವಾಚಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿನಯಪೂರ್ಣ ನಡತೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಆದರ್ಶ ವಿದ್ಯಾರ್ಥಿಯಾಗಿ ವಿಜೇತ ಗುನಗಾ ಹಾಗೂ ಆದರ್ಶ ವಿದ್ಯಾರ್ಥಿನಿಯಾಗಿ ವಿಘ್ನೇಶ್ವರಿ ಗೌಡ ಹಾಗೂ ೨೦೨೧-೨೨ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಾದ ಶಿವಾನಿ ಬೇವಿನಮಟ್ಟಿ, ಸುವರ್ಣ ಲೋಕು ಗೌಡ, ನಚಿತ ಸಿ ಅಂಬಿಗ ಇವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್, ನಾಗರಾಜ ನಾಯಕ, ಬಾಲಚಂದ್ರ ನಾಯಕ, ಇಂದಿರಾ ನಾಯಕ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ,ಗೋವಿಂದ ನಾಯ್ಕ, ಕಂಪ್ಯೂಟರ್ ತರಬೇÃತಿದಾರರಾದ ಪ್ರಮಿಳಾ ನಾಯ್ಕ, ಅನಸೂಯಾ ಗೌಡ, ರಶ್ಮಿ ನಾಯಕ, ಚೈತ್ರಾ ಪಟಗಾರ ಉಪಸ್ಥಿತರಿದ್ದರು.
ಕಾರ್ಯಕ್ರಮವು ನಾಗಶ್ರೀ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊAಡಿತು. ಎನ್.ರಾಮು.ಹಿರೇಗುತ್ತಿ ಸ್ವಾಗತಿಸಿದರು. ಮಹಾದೇವ ಗೌಡ ವಂದಿಸಿದರು.
ವರದಿ: ಎನ್ ರಾಮು ಹಿರೇಗುತ್ತಿ

error: