December 20, 2024

Bhavana Tv

Its Your Channel

ಮಂಕಿಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಬಾಲಾಜೀ ಬಾಯೋ ಡೀಸೆಲ್ ಬಂಕ್ : ಯಂತ್ರೋಪಕರಣಗಳನ್ನು ವಶಕ್ಕೆ ಪಡೆದ ಕಂದಾಯ, ಪೊಲೀಸ್ ಅಧಿಕಾರಿಗಳು.

ಹೊನ್ನಾವರ : ಉತ್ತರ ಕನ್ನಡ ಪೆಟ್ರೋಲಿಯಂ ಅಸೋಸಿಯೇಷನ್ ದೂರಿನನ್ವಯ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನ ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಬಾಲಾಜೀ ಬಾಯೋ ಡೀಸೆಲ್ ಹೆಸರಿನಲ್ಲಿ ನಡೆಯುತ್ತಿರುವ ಮೋಸದ ವ್ಯವಹಾರವನ್ನು ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಪತ್ತೆಮಾಡಿ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.

ಪಟ್ಟಣ ಪಂಚಾಯತ ಮಂಕಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಹೊಂದಿಕೊಂಡಿರುವ ರ‍್ವೇ ನಂ.೩೨೦/೧ ರಲ್ಲಿ ಅಧಿಕೃತ ಲೈಸೆನ್ಸ್ ಪಡೆಯದೇ ಬಾಲಾಜಿ ಬಾಯೋ ಡಿಸೇಲ್ ಉದ್ದಿಮೆಯನ್ನು ನಡೆಸುತ್ತಿರುವ ಬಗ್ಗೆ ಉತ್ತರ ಕನ್ನಡ ಪೆಟ್ರೋಲಿಯಂ ಅಸೋಸಿಯೇಷನ್ ವತಿಯಿಂದ ಜು.೧೧ ರಂದು ದೂರು ದಾಖಲಾಗಿತ್ತು. ಈ ದೂರಿನನ್ವಯ ಸ್ಥಳ ಪರಿಶೀಲನೆ ನಡೆಸಿದ ಮಂಕಿ ಪಟ್ಟ ಪಂಚಾಯಿತಿ ಅಧಿಕಾರಿಗಳು ಅನಧಿಕೃತ ಉದ್ದಿಮೆಗೆ ನಡೆಸಬಹುದಾದ ಮಾಲೀಕರಿಗೆ ಜು.೧೨ ರಂದು ನೋಟಿಸ್ ನೀಡಲಾಗಿತ್ತು.

ಜಿಲ್ಲಾಧೀಕಾರಿಗಳ ಆದೇಶದನ್ವಯ ಶನಿವಾರ ಬಾಲಾಜೀ ಬಾಯೋ ಡೀಸೆಲ್ ಉದ್ದಿಮೆ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಮಂಕಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ತಂಡ ಭೇಟಿ ನೀಡಿದ್ದು, ಅನಧಿಕೃತ ಡಿಸೇಲ್ ಪಂಪ್ ಯಂತ್ರವನ್ನು ನಿಯಮಾನುಸಾರ ಪಂಚನಾಮೆ ನಡೆಸಿ ಮುಟ್ಟುಗೊಲು ಹಾಕಿದ್ದಾರೆ. ಮಂಕಿ ಪಪಂ ಮುಖ್ಯಾಧಿಕಾರಿ ಅಜಯ್ ಬಂಡಾರಕರ್, ಪಪಂ ಹಾಗೂ ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

error: