April 29, 2024

Bhavana Tv

Its Your Channel

ಮುರುಡೇಶ್ವರದ ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

ಮುರುಡೇಶ್ವರದ ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನಲ್ಲಿ ಆಗಸ್ಟ್ 16 ಮತ್ತು 17ರಂದು ಟೊಯೋಟೊ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ವತಿಯಿಂದ ನಡೆದ ಪೂಲ್ ಕ್ಯಾಂಪಸ್ ಸಂದರ್ಶನದಲ್ಲಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಐಟಿಐ ಮತ್ತು ಡಿಪ್ಲೋಮಾ ಕಾಲೇಜುಗಳಿಂದ 155 ವಿದ್ಯಾರ್ಥಿಗಳು ಭಾಗವಹಿಸಿದ್ದರು, ತಾಂತ್ರಿಕ ಲಿಖಿತ ಪರೀಕ್ಷೆ ಹಾಗೂ ತಾಂತ್ರಿಕ ಸಂದರ್ಶನಗಳ ಮೂಲಕ ಅಂತಿಮವಾಗಿ ಐಟಿಐ ನಿಂದ 15 ವಿದ್ಯಾರ್ಥಿಗಳು ಹಾಗೂ ಡಿಪ್ಲೋಮಾದಿಂದ 48 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಇವರಲ್ಲಿ ಭಟ್ಕಳದ ಸರ್ಕಾರಿ ಐಟಿಐ ನಿಂದ 3 ಜನರು, ಸರ್ಕಾರಿ ಐಟಿಐ ಕಾಲೇಜು ಹೊನ್ನಾವರದಿಂದ ಆರು ಜನ ಹಾಗೂ ಜೀವನ ಜ್ಯೋತಿ ಐಟಿಐ ಕಾಲೇಜು ಹೊನ್ನಾವರದಿಂದ ಆರು ಜನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೆ,

ಮುರುಡೇಶ್ವರ ಆರ್ ಎನ್ ಎಸ್ ಪಾಲಿಟೆಕ್ನಿಕ್ ಕಾಲೇಜಿನಿಂದ 14 ವಿದ್ಯಾರ್ಥಿಗಳು, ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕುಮಟಾದಿಂದ 27 ಜನ ವಿದ್ಯಾರ್ಥಿಗಳು, ಸರಕಾರಿ ಪಾಲಿಟೆಕ್ನಿಕ್ ಮುಂಡಗೋಡದಿAದ ಮೂರು ಜನ ವಿದ್ಯಾರ್ಥಿಗಳು ಹಾಗೂ ಕಾಮತ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದಿAದ ನಾಲ್ಕು ಜನ ವಿದ್ಯಾರ್ಥಿಗಳು ಅಂತಿಮವಾಗಿ ಆಯ್ಕೆಯಾಗಿರುತ್ತಾರೆ. ಟೊಯೋಟೊ ಕಂಪನಿಯ ವತಿಯಿಂದ ಎಚ್ ಆರ್ ಮ್ಯಾನೇಜರ್ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಪ್ರೊಡಕ್ಷನ್ ಇಂಜಿನಿಯರ್ ಮಧುಸೂದನ್ ರವರು ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದರು ಇವರಿಗೆ ಉಪನ್ಯಾಸಕರಾದ ಸಚಿನ್ ನಾಯ್ಕ ಮತ್ತು ಪ್ರಕಾಶ್ ಫೌಲ್ ಸಹಕರಿಸಿದರು ಎಂದು ಈ ಉದ್ಯೋಗ ಮೇಳವನ್ನು ಸಂಘಟಿಸಿದ ಉಪ ಪ್ರಾಂಶುಪಾಲರು ಹಾಗೂ ಪ್ಲೇಸೆಂಟ್ ಅಧಿಕಾರಿ ಕೆ.ಮರಿಸ್ವಾಮಿ ಅವರು ಮಾಹಿತಿಯನು ನೀಡಿರುತ್ತಾರೆ.ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಆರ್ ಎನ್ ಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ದಿನೇಶ್ ಗಾಲ್ಕಾರ್ ಹಾಗೂ ಪ್ರಾಚಾರ್ಯರಾದ ಸಂತೋಷ್ ರವರು ಹರ್ಷ ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: