May 16, 2024

Bhavana Tv

Its Your Channel

’30 ವರ್ಷ ಹೋರಾಟ – 30 ಸಾವಿರ ಗಿಡ’ ನೆಡುವ ಜಿಲ್ಲಾಮಟ್ಟದ ಕಾರ್ಯಕ್ರಮ ಜುಲೈ 18 ರಂದು ಭಟ್ಕಳದಲ್ಲಿ ಚಾಲನೆ

ಭಟ್ಕಳ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ೩೦ ವರ್ಷವಾಗಿರುವ ಹಿನ್ನೆಲೆಯಲ್ಲಿ ‘೩೦ ವರ್ಷ ಹೋರಾಟ- ೩೦ ಸಾವಿರ ಗಿಡ’ ನೆಡುವ ಕ್ರಾರ್ಯಕ್ರಮದ ಅಂಗವಾಗಿ ಜುಲೈ ೧೮, ಆದಿತ್ಯವಾರ ಮುಂಜಾನೆ ೧೦:೩೦ ಕ್ಕೆ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಜನತಾ ಕಾಲೋನಿಯ ಗಜಾನನ ಯುವಕ ಸಂಘ ಆವರಣದಲ್ಲಿ ಜಿಲ್ಲಾ ಮಟ್ಟದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟನೆಯ ಚಾಲನೆಯನ್ನು ನಿವೃತ್ತ ಸೈನಿಕ ಅಚ್ಯತ್ ನಾಗಪ್ಪ .ನಾಯ್ಕ, ಚಿಪ್ರಿ ಮನೆ, ಹಡೀನ್ ಇವರು ಉದ್ಘಾಟಿಸಲಿದ್ದಾರೆ ಎಂದು ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ದೇವರಾಜ ಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯ ರಕ್ಷಣೆ ಮತ್ತು ಪರಿಸರ ಜಾಗೃತೆ ಹೆಚ್ಚಿಸುವ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ೩೦ ವರ್ಷವಾಗಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಂದ ಜಿಲ್ಲಾದ್ಯಂತ ಪ್ರಸಕ್ತ ಮಳೆಗಾಲದಲ್ಲಿ ದೀರ್ಘಕಾಲದ ಬಾಳಿಕೆಯ ೩೦ ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಜರಗುವ ಕಾರ್ಯಕ್ರಮವನ್ನ ಭಟ್ಕಳದಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: