May 16, 2024

Bhavana Tv

Its Your Channel

ಅರಣ್ಯ ಹಕ್ಕು ಹೋರಾಟ ಸಮಿತಿ: ೩೦ ವರ್ಷ ಹೋರಾಟ- ೩೦ ಸಾವಿರ ಗಿಡ ನೆಡುವ ಕಾರ್ಯಕ್ರಮ ಲಾಂಛನ ಬಿಡುಗಡೆ.

ಶಿರಸಿ: ಅರಣ್ಯ ರಕ್ಷಣೆ ಮತ್ತು ಪರಿಸರ ಜಾಗೃತೆ ಹೆಚ್ಚಿಸುವ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ೩೦ ವರ್ಷವಾಗಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಂದ “೩೦ ವರ್ಷ ಹೋರಾಟ- ೩೦ ಸಾವಿರ ಗಿಡ” ನೆಡುವ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು. ಅವರು ಇಂದು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ “೩೦ ವರ್ಷ ಹೋರಾಟ೩೦ ಸಾವಿರ ಗಿಡ” ನೆಡುವ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡುತ್ತಾ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು ಅರಣ್ಯೀಕರಣ ಪೂರಕವಾದ ಚಟುವಟಿಕೆಗಳನ್ನು ಮಾಡುತ್ತಿದ್ದು, ಅಭೀವೃದ್ಧಿ ಕಾರ್ಯ, ಬೆಂಕಿ, ಜಲವಿದ್ಯುತ್ ಯೋಜನೆ, ಸಾರಿಗೆ, ಅರಣ್ಯ ಇಲಾಖೆಯ ಕಾಮಗಾರಿ ಮುಂತಾದ ಉದ್ದೇಶದಿಂದ ಜಿಲ್ಲೆಯಲ್ಲಿನ ಅರಣ್ಯ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆ ಯಾಗುತ್ತಿರುವುದು ವಿಷಾದಕರ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭೌಗೋಳಿಕವಾಗಿ ೧೦,೫೭೧ ಚದರ್.ಕೀ.ಮೀ ಪ್ರದೇಶ ಹೊಂದಿದ್ದು ಇರುತ್ತದೆ. ಅವುಗಳಲ್ಲಿ ೮,೫೦೦ ಚದರ್.ಕೀ.ಮೀ ಅರಣ್ಯ ಪ್ರದೇಶವಾಗಿದೆ. ಜಿಲ್ಲೆಯ ಜನಸಂಖ್ಯೆಯ ಸಾಂಧ್ರತೆಯ ಪ್ರಮಾಣ ಪ್ರತಿ ಸ್ಕೆö್ಯÃರ್ ಕೀ. ಮೀ ಗೆ ೨೦೨ ಜನ ಸಂಖ್ಯೆ ಸಾಂಧ್ರತೆ ಇದ್ದರೇ ಅರಣ್ಯ ಸಾಂದ್ರತೆಯ ಪ್ರದೇಶವು ಜನಸಂಖ್ಯೆಯ ಸಾಂಧ್ರತೆಗಿoತ ೧೦ ಪಟ್ಟು ಹೆಚ್ಚಾಗಿ ಇದ್ದರೂ ವಾಸ್ತವಿಕವಾಗಿ ಗಿಡ, ಮರ ಪ್ರಮಾಣ ಕಡಿಮೆ ಇರುವುದು ಉಲ್ಲೇಖನಾರ್ಹ.

ಅರಣ್ಯ ಇಲಾಖೆ ನೀತಿ ಖಂಡನೆ:
ಜಿಲ್ಲೆಯ ಪರಿಸರ ಮತ್ತು ಮಣ್ಣು ಮಾರಕಕ್ಕೆ ಪೂರಕವಾದ ಗಿಡ, ಮರಗಳನ್ನು ಅರಣ್ಯ ಇಲಾಖೆ ನೆಡುವ ಅವೈಜ್ಞಾನಿಕವಾಗಿ ಮಣ್ಣಿನ ಮತ್ತು ನೀರಿನ ಸಾಂಧ್ರತೆಗೆ ಧಕ್ಕೆ ತರುವಂತಹ ಅವೈಜ್ಞಾನಿಕ ಪರಿಸರಕ್ಕೆ ಪೂರಕವಲ್ಲದ ಸಸಿ ನೆಡುವ ಪದ್ದತಿ ಅರಣ್ಯ ಇಲಾಖೆಯು ಜಾರಿಯಲ್ಲಿ ತಂದಿರುವುದು ಖಂಡನಾರ್ಹ. ಪರಿಸರ ವಿರೋಧಿ ಅರಣ್ಯ ಇಲಾಖೆಯ ನೀತಿಯು ಅರಣ್ಯ ಪರಿಸರ ಮೌಲ್ಯ ನಾಶವಾಗುವುದರಲ್ಲಿ ಸಂಶಯವಿಲ್ಲವೆAದು ರವೀಂದ್ರ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಲಕ್ಷö್ಮಣ ಮಾಳಕ್ಕನವರ, ಜಿಲ್ಲಾ ಸಂಚಾಲಕ ವಕೀಲ ಉದಯ ನಾಯ್ಕ, ತಿಮ್ಮ ಮರಾಠಿ, ಶಿವಪ್ಪ ಹಂಚಿನಕೇರಿ, ಮಜೀದ್ ಉಪಸ್ಥಿತರಿದ್ದರು.

error: