May 17, 2024

Bhavana Tv

Its Your Channel

ಸಿರಸಿಯಲ್ಲಿ ಆಡುಭಾಷಾ ಕವಿಗೋಷ್ಠಿ.

ವರದಿ: ವೇಣುಗೋಪಾಲ ಮದ್ಗುಣಿ

ಸಿರಸಿ:- ಶಿರಸಿಯ ನೆಮ್ಮದಿ ಕುಟೀರದಲ್ಲಿ ಸಾಹಿತ್ಯ ಚಿಂತಕರ ಚಾವಡಿಯ ಆಶ್ರಯದಲ್ಲಿ ಬಹು ಅಪರೂಪದ “ಆಡುಭಾಷಾ ಕವಿಗೋಷ್ಠಿ” ಸರಳ,ಸುಂದರವಾಗಿ ನಡೆದು ಸಹೃದಯರ ಮನ ಮುಟ್ಟಿತು
ಕಾರ್ಯಕ್ರಮವನ್ನು ಚಿಂತಕರೂ,ಬರಹಗಾರರೂ ಆಗಿರುವ ದಿವಸ್ಪತಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಆಡುಭಾಷೆ ಹೃದಯದಿಂದ ಹುಟ್ಟುವುದು.ಇದರ ಸಂಗ್ರಹ ಕಾರ್ಯ ಆಗಬೇಕು.ಸಾವಿರಾರು ಉಪ ಪಂಗಡಗಳಲ್ಲಿ ಹುದುಗಿರುವ ಜ್ಞಾನರಾಶಿಯನ್ನು ಮುಂದಿನ ತಲೆಮಾರಿಗೂ ದಾಟಿಸುವ ಅವಶ್ಯಕತೆಯಿದೆಯೆಂದರು. ಅವರು ಈ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಹುದುಗಿದ ಹಳೇ ಹಾಡನ್ನು ಹೇಳುತ್ತ ಉದಾಹರಿಸಿದರು.
ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿದ್ದ ಅಂಕಣಕಾರರೂ,ಬರಹಗಾರರೂ ಆಗಿರುವ ವಾಸುದೇವ ಶಾನುಭಾಗ ಮಾತನಾಡಿ ಕರ್ನಾಟಕದ ಅನೇಕ ಆಡುಭಾಷೆ ಪ್ರಸ್ತಾಪಿಸಿ ಕೊಂಕಣಿಯ ಜನಾಂಗದ ಭಾಷೆ ,ಕನ್ನಡದವರ ಜೊತೆಗಿನ ಸೌಹಾರ್ದತೆ ವಿವರ ನೀಡಿದರು. ಗೋವಾ ಮೂಲದಿಂದ ಅರಸರ ಕಾಲದಲ್ಲಿ ಕರ್ನಾಟಕದಾದ್ಯಂತ ಅವರ ಆವಾಸವನ್ನು ಅಧ್ಯಯನಪೂರ್ಣ ಮಾಹಿತಿಯೊಂದಿಗೆ ವಿವರಿಸಿದರು.
ಚಾವಡಿಯ ರೂವಾರಿ,ಚಿಂತಕ ಎಸ್.ಎಸ್.ಭಟ್ಟ ಉಪಸ್ಥಿತಿ ನೀಡಿ ಮಾತನಾಡುತ್ತ ಆಡುಭಾಷೆ ಪ್ರಾದೇಶಿಕ ಸಮೃದ್ದಿಯನ್ನು ಬಿಂಬಿಸುತ್ತದೆಯೆoದರು…
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಥೆಗಾರ,ಚಿಂತಕ, ಆನ್ಲೈನ್ ಗ್ರೂಪ್ ರೂವಾರಿ ಡಿ.ಎಸ್.ನಾಯ್ಕ ಮಾತನಾಡಿ ಪ್ರಸ್ತುತದಲ್ಲಿ ಆಡುಭಾಷೆಯ ಮೂಲಸ್ವರೂಪದ ಅಧ್ಯಯನ ,ಸಾಹಿತ್ಯ ಕೃಷಿ ನಡೆಯಬೇಕು ಎಂದರು.
ಶ್ರೀರAಗ ಕಟ್ಟಿ ಯಲ್ಲಾಪುರ, ಡಿ ಎಸ್ ಭಟ್ಟ ಕುಳವೆ ಮತ್ತು ಜಗದೀಶ ಭಂಡಾರಿ ಅನಿಸಿಕೆ ವ್ಯಕ್ತಪಡಿಸಿದರು. ಅನೇಕ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ಕವಯತ್ರಿ ಯಶಸ್ವಿನಿಮೂರ್ತಿ ಮತ್ತು ವಿಮಲಾ ಭಾಗ್ವತ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿವಿಧ ಕವಿಗಳಿಂದ ಹವ್ಯಕ, ಕೊಂಕಣಿ, ನಾಮಧಾರಿ, ತುಳು ಹೀಗೆ ವಿವಿಧ ಆಡುಭಾಷೆಯ ಕವನಗಳನ್ನು ಸುಮಾರು 15 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಾಚನವಾದವು.
ಶಿರಸಿಯ ಹಿರಿ,ಕಿರಿ ಕವಿಗಳು 20ಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಬರಹಗಾರ್ತಿ ,ಕವಯಿತ್ರಿ ಯಶಸ್ವನಿ ಶ್ರೀಧರಮೂರ್ತಿ ನಿರ್ವಹಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿಯಿತ್ರಿ ವಿಮಲಾ ಭಾಗ್ವತ ಪ್ರಾರ್ಥಿಸಿದರು.ಕತೆಗಾರ ಕೆ.ಮಹೇಶ ಸ್ವಾಗತಿಸಿದರು.. ಬರಹಗಾರ ರಾಜು ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಕೊನೆಯಲ್ಲಿ ಕವಿ ಮಹೇಶ ಹೆಗಡೆ ಸಿದ್ದಾಪುರ ವಂದಿಸಿದರು.

error: