May 16, 2024

Bhavana Tv

Its Your Channel

ಅರಣ್ಯ ಭೂಮಿ ಹಕ್ಕು ಹೋರಾಟಗಾರ ಇಬ್ರಾಹಿಂ ಸಾಬ ವಿಧಿವಶ

ಶಿರಸಿ: ಕಳೆದ ಎರಡುವರೆ ವರ್ಷ ಅರಣ್ಯ ಭೂಮಿ ಹಕ್ಕು ಹೋರಾಟದಲ್ಲಿ ಸಕ್ರೀಯ ಕಾರ್ಯನಿರ್ವಹಿಸಿ, ವೇದಿಕೆಯ ಜಿಲ್ಲಾ ಸಂಚಾಲಕರಾಗಿರುವ ಇಬ್ರಾಹಿಂ ನಬೀ ಸಾಬ ಸೈಯದ್(68 ವರ್ಷ) ಅವರು ಇಂದು ಸ್ವಗೃಹದಲ್ಲಿ ಮೃತರಾಗಿರುತ್ತಾರೆ.
ಜಿಲ್ಲೆಯ ಜನಪರ ಹೋರಾಟ, ಅರಣ್ಯ ಭೂಮಿ ಹಕ್ಕು ಹೋರಾಟದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿ, ಅರಣ್ಯ ಭೂಮಿ 30 ವರ್ಷ ಹೋರಾಟದ ಕಾರ್ಯಲಯ ವೇದಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರು. ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಹಾಲಿ ಕಾರ್ಯನಿರ್ವಹಿಸುತ್ತಿದ್ದರು. ಆರೇಕೊಪ್ಪ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾಗಿ, ಗ್ರಾಮಸ್ಥರ ನೆರವಿನಿಂದ ಮಾದರಿ ನೇಡುತೋಪಿಗೆ ರಾಜ್ಯಮಟ್ಟದಲ್ಲಿ ಗಿಡ ನೆಡುವ ಮೂಲಕ ಹಸೀರುಕರಣ ಯೋಜನೆಗೆ ಪ್ರಶಂಸೆಗೆ ಕಾರಣರಾಗಿದ್ದರು.
ಮೃತ ಇಬ್ರಾಹಿಂ ಅವರು ಪತ್ನಿ, ಎರಡು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು, ಬಂಧು ಮತ್ತು ಸ್ನೇಹಿತರನ್ನು ಅಗಲಿದ್ದಾರೆ.
ತೀವ್ರ ಸಂತಾಪ:
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಹಿರಿಯ ಧುರೀಣ ಮೃತವು ಹೋರಾಟಗಾರರ ವೇದಿಕೆಗೆ ಅಪಾರ ನಷ್ಟ ಉಂಟಾಗಿದ್ದು, ಅವರ ಜೀವಿತ ಅವಧಿಯಲ್ಲಿ ಹೋರಾಟಕ್ಕೆ ನೀಡಿದ ಸಲಹೆ, ಮಾರ್ಗದರ್ಶನ ಮತ್ತು ಶ್ರಮ ಅದರ್ಶಮಯವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತಾಪ ಸೂಚಿಸಿದ ಸಭೆ:
ದಿವಂಗತ ಇಬ್ರಾಹಿಂ ಸಾಬ ನಿಧನದ ಹಿನ್ನೆಲೆಯಲ್ಲಿ ದಿ. ಜನವರಿ, 4 ಮುಂಜಾನೆ 10:30 ಕ್ಕೆ ಸಂತಾಪ ಸೂಚಿಸಿದ ಸಭೆಯನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಲ್ಲಿ ಸದ್ರಿ ಸಭೆ ಜರುಗಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: