May 16, 2024

Bhavana Tv

Its Your Channel

ಜಿಲ್ಲೆಯಲ್ಲಿ ಆರು ಸಾವಿರ ಅತಿಕ್ರಮಣದಾರರ ಒಕ್ಕಲೆಬ್ಬಿಸುವ ಪ್ರಕ್ರೀಯೆ : ವಿಳಂಬಕ್ಕೆ ಆಸ್ಪದ ನೀಡದೇ ಒಕ್ಕಲೆಬ್ಬಿಸಬೇಕೆಂಬ ಪ್ರಕ್ರೀಯೆ ಆದೇಶಕ್ಕೆ ಹೋರಾಟಗಾರ ರವೀಂದ್ರ ನಾಯ್ಕ ಆಕ್ಷೇಪ.

ಶಿರಸಿ: ಅರಣ್ಯ ಭೂಮಿಯ ಮೇಲೆ ಅವಲಂಭಿತವಾಗಿರುವ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ದಿಶೆಯಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ತಕ್ಷಣ ಅರಣ್ಯ ಸಾಗುವಳಿದಾರರನ್ನ
ಒಕ್ಕಲೆಬ್ಬಿಸುವ ಪ್ರಕರಣ ಇತ್ಯರ್ಥಕ್ಕೆ ಕ್ರಮ ಜರುಗಿಸಬೇಕೆಂಬ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರವರ ಆದೇಶವು ಕಾನೂನು ಬಾಹಿರವಾಗಿದ್ದು, ಅಧಿಕಾರಿ
ವರ್ಗಗಳ ಸರ್ವಾಧಿಕಾರ ಧೋರಣೆಯು ಖಂಡನಾರ್ಹ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಇಂದು ಒಕ್ಕಲೆಬ್ಬಿಸುವ ಪ್ರಕ್ರೀಯೆ ಸಂಬAಧಿಸಿ ಪ್ರಾಧಿಕಾರದಿಂದ ಅತಿಕ್ರಮಣದಾರರಿಗೆ ಬಂದಿರುವ ನೋಟಿಸ್‌ದಾರರೊಂದಿಗೆ ಸಮಾಲೋಚಿಸುತ್ತ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರವರ ಆದೇಶ ಪ್ರಕಟಿಸುತ್ತಾ ಮೇಲಿನಂತೆ ಹೇಳಿದರು. ಅರಣ್ಯ ಹಕ್ಕು ಕಾಯಿದೆಯಲ್ಲಿನ ಅರ್ಜಿಗಳು ವಿಚಾರಣೆ ಹಂತದಲ್ಲಿ ಒಕ್ಕಲೆಬ್ಬಿಸಬಾರದೆಂಬ ಕಾನೂನು ಮತ್ತು ಸರ್ವೋಚ್ಛ ನ್ಯಾಯಾಲಯ ಸುಫ್ರೀಂ ಕೋರ್ಟಿನ ಸ್ಪಷ್ಟ ನಿರ್ದೇಶನ ಇದ್ದಾಗಿಯೂ ಅರಣ್ಯ ಇಲಾಖೆಯು ಪ್ರತಿ ಸೋಮವಾರ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರುಗಿಸಿ, ಪ್ರತಿ ತಿಂಗಳು ವರದಿ ನೀಡಬೇಕೆಂಬ ನಿರ್ಧೇಶನವನ್ನು ನೀಡಿ, ಸದ್ರಿ ನಿರ್ಧೇಶನವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂಬ ಕೆಳಹಂತದ ಅಧಿಕಾರಿಗಳಿಗೆ ನಿರ್ಧೇಶನ ನೀಡಿರುವುದು ಖೇದಕರ ಎಂದು ರವೀಂದ್ರ ನಾಯ್ಕ ಹೇಳಿದ್ದಾರೆ.
ಹಿಂದಿನ ಸರಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಹೊಸ ಆದೇಶದಂತೆ ಮೂರು ಎಕರೆಗಿಂತ ಕಡಿಮೆ ಇರುವ ಅತಿಕ್ರಮಣದಾರರನ್ನು ಯಾವುದೇ ಅಡ್ಡಿ ಆತಂಕವಿಲ್ಲದೇ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರುಗಿಸಬಹುದು ಎಂಬ ಅಂಶ ಸದ್ರಿ ಆದೇಶದಲ್ಲಿ ಅಡಕವಾಗಿರುವುದು ಗಮನಾರ್ಹ ಅಂಶವಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.
ವೇದಿಕೆಯಲ್ಲಿ ಸುಶೀಲಾ ಅಣ್ಣಪ್ಪ ನಾಯ್ಕ, ಸವಿತಾ ಪೂಜಾರಿ, ಶಾಯಿದಾ ಮೈನುದ್ದೀನ್ ಸೈಯದ್, ನಾಗರತ್ನ ವೆರ್ಣೆಕರ್, ಕಮಲಾ ರಘುಪತಿ ನಾಯ್ಕ, ಸಾವಿತ್ರಿ ಗೋವಿಂದ ನಾಯ್ಕ, ಗಣಪತಿ ಗೋವಿಂದ ನಾಯ್ಕ, ಶ್ರೀಧರ ನಾರಾಯಣ ನಾಯ್ಕ, ರಜಿನಿ ಕುಮಾರ ಆಚಾರಿ ಮುಂತಾದವರು ಉಪಸ್ಥಿತರಿದ್ದರು.

ಆರು ಸಾವಿರ ಅರಣ್ಯವಾಸಿಗೆ ನೋಟಿಸ್:
ಜಿಲ್ಲಾದ್ಯಂತ ಅರಣ್ಯವಾಸಿಗಳನ್ನು ಒಕಲೆಬ್ಬಿಸುವ ಪ್ರಕ್ರೀಯೆ ಪ್ರತಿವಾರ ಜರುಗಿಸಬೇಕೆಂಬ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೇಂಗಳೂರವರ ಆದೇಶದಂತೆ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುವ ದಿಶೆಯಲ್ಲಿ ಸಂಬoಧಿಸಿದ ಪ್ರಾಧಿಕಾರಗಳಿಂದ ಈಗಾಗಲೇ ಜಿಲ್ಲಾದ್ಯಂತ ಸುಮಾರು ಆರು ಸಾವಿರ ಅತಿಕ್ರಮಣದಾರರಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಯಿಂದ ಅಧೀಕೃತ ನೋಟಿಸ್ ಜಾರಿಯಾಗುತ್ತಿದೆ ಎಂದು ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ

error: