April 30, 2024

Bhavana Tv

Its Your Channel

ಅರಣ್ಯ ಭೂಮಿ ಹಕ್ಕು ಹೋರಾಟ 32 ನೇ ವರ್ಷಕ್ಕೆ ಪಾದಾರ್ಪಣೆ ; ಸ್ಫಂಧಿಸದ ಸರಕಾರ- ಒಕ್ಕಲೆಬ್ಬಿಸುವ ಭೀತಿಯಲ್ಲಿ ಅತಿಕ್ರಮಣದಾರರು.

ಶಿರಸಿ: ರಾಜ್ಯದಲ್ಲಿಯೇ ಅರಣ್ಯವಾಸಿಗಳ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟದ ಹೆಜ್ಜೆಗಳು 32 ನೇ ವಸಂತಕ್ಕೆ ಸಪ್ಟೆಂಬರ್ 13 ರಂದು ಪಾದಾರ್ಪಣೆ ಮಾಡುತ್ತಿದೆ. ಆದರೆ,ಸರಕಾರದ ಸ್ಫಂದನೆಯ ಕೊರತೆಯಿಂದ ಅರಣ್ಯ ಅತಿಕ್ರಮಣದಾರರು ಒಕ್ಕಲೆಬ್ಬಿಸುವ ಭೀತಿಯಲ್ಲಿ ದಿನ ದೂಡುತ್ತಿರುವುದು ವಿಷಾದಕರ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಉತ್ತರ ಕನ್ನಡ ಜಿಲ್ಲೆ ಒಳಗೊಂಡ 16 ಜಿಲ್ಲೆಗಳಲ್ಲಿ ನಿರಂತರವಾಗಿ ಜರುಗಿದ ಅರಣ್ಯ ಭೂಮಿ ಹಕ್ಕು ಹೋರಾಟ, ಆಂದೋಲನ ರೂಪು ಗೊಂಡಿದ್ದಾಗಿಯೂ ಸಮಸ್ಯೆ ಬಗೆಹರಿಯದಿರುವುದು ಖೇದಕರ.
ಉತ್ತರ ಕನ್ನಡ ಜಿಲ್ಲೆಯ ಬೌಗೋಳಿಕ 10,571 ಚದರ್ ಕಿಲೋ ಮೀಟರ್ ನಲ್ಲಿ 8,500 ಚದರ್ ಕಿಲೋ ಮೀಟರ್ ಅರಣ್ಯದಿಂದ ಆವೃತ್ತವಾಗಿರುವ ಜಿಲ್ಲೆಯು ಭೌಗೋಳಿಕ ಹಿನ್ನೆಲೆಯಲ್ಲಿ ಅರಣ್ಯ ಭೂಮಿಯಲ್ಲಿ ವಾಸಿಸಿರುವ ಸುಮಾರು 85,000 ಕುಟುಂಬವು ಜನಜೀವನಕ್ಕೆ ಅರಣ್ಯ ಭೂಮಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗೆಗೆ ಅವಲಂಭಿತರಾಗಿದ್ದಾರೆ. ಅರಣ್ಯ ಭೂಮಿ ಹಕ್ಕು ಅರ್ಜಿ ಸಲ್ಲಿಸಿದವರಲ್ಲಿ 2852 ಅರ್ಜಿಗಳಿಗೆ ಮಾತ್ರ ಹಕ್ಕು ಪ್ರಾಪ್ತವಾಗಿದ್ದು, ಅವುಗಳಲ್ಲಿ
ಪಾರಂಪರಿಕ ಅರಣ್ಯವಾಸಿಗಳಿಗೆ 394, ಪರಿಶಿಷ್ಟ ಪಂಗಡ 1331 ಹಾಗೂ ಸಮುದಾಯ ಉದ್ದೇಶಕ್ಕೆ 1,127 ಒಳಗೊಂಡಿದೆ.
ಹೋರಾಟಕ್ಕೆ ಕಾಗೋಡ ತಿಮ್ಮಪ್ಪ ಅವರ ಮಾರ್ಗದರ್ಶನ, ನಿವೃತ್ತ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್ ಎನ್ ನಾಗ ಮೋಹನದಾಸ ಅವರ ಕಾನೂನಾತ್ಮಕ ಬೆಂಬಲವು ಸಂಘಟನಾತ್ಮಕ ಹೋರಾಟದ ಗಟ್ಟಿತನಕ್ಕೆ ಪ್ರಮುಖ ಶಕ್ತಿ ಎಂದರೆ ತಪ್ಪಾಗಲಾರದು. ಸರ್ವೋಚ್ಛ ನ್ಯಾಯಾಲಯ ನ್ಯೂಡೆಲ್ಲಿಯಲ್ಲೂ ಅರಣ್ಯವಾಸಿಗಳ ಪರವಾಗಿ ಸಮರ್ಥ ಕಾನೂನು ಹೋರಾಟದೊಂದಿಗೆ ಹಳ್ಳಿಯಿಂದ ಡೆಲ್ಲಿಯವರೆಗೂ 31 ವರ್ಷ ಹೋರಾಟ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಹೋರಾಟದ ಹೇಜ್ಜೆಯ ಪ್ರತೀಕವಾಗಿದೆ.
ವಿವಿಧ ರೀತಿಯ ಹೋರಾಟ :
3 ದಶಕದಲ್ಲಿ 5,000 ಕ್ಕಿಂತ ಮಿಕ್ಕಿ ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಮತ್ತು ಜಾಗೃತೆ ಕಾರ್ಯಕ್ರಮವು 31 ವರ್ಷ ಹೋರಾಟದ ಮೈಲುಗಲ್ಲಾಗಿದೆ.
ಇಚ್ಛಾಶಕ್ತಿ ಕೊರತೆ :
ಜಿಲ್ಲೆಯ ಇತಿಹಾಸದಲ್ಲಿ ನಿರಂತರ, ಸತತ 30 ವರ್ಷದ ಹೋರಾಟದಲ್ಲಿ ಅರಣ್ಯ ವಾಸಿಗಳು ಹಕ್ಕಿನ ನೀರಿಕ್ಷೆಯಲ್ಲಿ ಅರಣ್ಯವಾಸಿ ಅತಿಕ್ರಮಣದಾರರು ಇದ್ದಾರೆ. ರಾಜಕೀಯ ಇಚಾಶಕ್ತಿ, ಜನಪ್ರತಿನಿಧಿಗಳಿಗೆ ಕಾನೂನು ಅಜ್ಞಾನದ ಕೊರತೆಯಿಂದ ಅರಣ್ಯ ಭೂಮಿ ಮಂಜೂರಿಯಲ್ಲಿ ಹಿನ್ನೆಡೆಯಾಗಿದೆ ಎಂದು ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

error: