May 17, 2024

Bhavana Tv

Its Your Channel

ಸೇವಾ ಸಿಂಚನ ಟ್ರಸ್ಟ ವತಿಯಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ
ಸಿರ್ಸಿ : ನಮ್ಮ ಟ್ರಸ್ಟ್ ಅಡಿಯಲ್ಲಿ ನಗರದ ಗಾಂಧಿನಗರ ಪದ್ಮಾವತಿ ಸಮಾಜ ಮಂದಿರದಲ್ಲಿ ಮಹಿಳೆಯರಲ್ಲಿ ಉಂಟಾಗಬಹುದಾದ ವಯೋಸಹಜ ಸಮಸ್ಯೆಗಳ ಕುರಿತು ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆಯ ಮಾಜಿ ಅಧ್ಯಕ್ಷರಾದ ಮೋಹಿನಿ ಬೈಲೂರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಆಯುರ್ವೇದ ಚಿಕಿತ್ಸಾಲಯ ದ ವೈದ್ಯಾಧಿಕಾರಿಗಳು ಆದ ಡಾ ಪೂರ್ಣಿಮಾ ಎಸ್ ಬೀ ಅವರು ಮಾತನಾಡಿ ಮಹಿಳೆಯರಲ್ಲಿ ಉಂಟಾಗಬಹುದಾದ ವಯೋಸಹಜ ಬದಲಾವಣೆಗಳು, ಆ ಸಮಯದಲ್ಲಿ ಉಂಟಾಗಬಹುದಾದ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಮತ್ತು ಇಂದಿನ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಪಿ ಸಿ ಒ ಡಿ ಸಮಸ್ಯೆಗಳ ಮಾಹಿತಿ ನೀಡಿದರು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಆಹಾರ ಪದ್ಧತಿ, ವಾತ, ಪಿತ್ತ, ಕಫ,ಸಕ್ಕರೆ ಖಾಯಿಲೆ, ಬಿಪಿ ಮೆನೋಪಾಸ್ ಸಮಸ್ಯೆಗಳ ಕುರಿತು ಸುಧೀರ್ಘವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಿದರು.
ಟ್ರಸ್ಟ್ ನ ಅಧ್ಯಕ್ಷರಾದ ಸುಮಾ ಉಗ್ರಾಣಕರ ಮಾತನಾಡಿ ಟ್ರಸ್ಟ್ ನಡೆದುಬಂದ ದಾರಿ ಕೈಗೊಂಡ ಕಾರ್ಯಕ್ರಮಗಳ ಜೊತೆಗೆ ಸ್ವಾಗತ ಕೋರಿದರು.ಕಾರ್ಯಕ್ರಮದಲ್ಲಿ ಶಕುಂತಲಾ ಜೈವಂತ, ಲತಾ ಕೆರೇಕರ್, ವಿನುತಾ ಪಾಟೀಲ್,ವಿಮಲಾ ಅಂಕೊಲೇಕರ, ನ್ಯಾನ್ಸಿ ನರೋನ, ಪೂಜಾ ವೈದ್ಯ,ರುಕ್ಮಿಣಿ ಪಾಂಡುರAಗ, ಶ್ವೇತ ನಾಯ್ಕ, ಗೌತಮಿ ಕೆರೆಮನೆ,ಮುಂತಾದ ಕಾಲೇಜ್ ವಿದ್ಯಾರ್ಥಿನಿಯರೂ ಸೇರಿ ಎರಡು ನೂರಕ್ಕಿಂತ ಹೆಚ್ಚಿನ ಮಹಿಳೆಯರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಕಾರ್ಯಕ್ರಮವು ಕುಮಾರಿ ಅನ್ವಿತಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊAಡಿತು.
ಪವಿತ್ರಾ ಹೊಸೂರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ವೇತಾ ನಾಯ್ಕ ಅವರು ವಂದಿಸಿದರು.

error: