April 27, 2024

Bhavana Tv

Its Your Channel

ಕನ್ನಡ ನಾಡು ನುಡಿ ನಮನದೊಂದಿಗೆ ಪುನೀತ್ ನೆನಪು ಕಾರ್ಯಕ್ರಮ;ಜಾನಪದ ತಂಡದೊoದಿಗೆ ಭವ್ಯ ಮೆರವಣಿಗೆ.

ಶಿರಸಿ: ಕನ್ನಡ ನಾಡು ನುಡಿ ನಮನ ಮತ್ತು ಪುನೀತ್ ರಾಜಕುಮಾರ ನೆನಪು ಕಾರ್ಯಕ್ರಮದ ಅಂಗವಾಗಿ ವಿಶಿಷ್ಟ ಜಾನಪದ ನೃತ್ಯ, ಡೊಳ್ಳು, ಕುಂಭಮೇಳ, ರಾರಾಜಿಸುವ ಕನ್ನಡಾಂಬೆಯ ಧ್ವಜ, ಸ್ಥಬ್ಧ ಚಿತ್ರ, ಜೂನಿಯರ್ ರಾಜಕುಮಾರ ಉಪಸ್ಥಿತಿಯಲ್ಲಿ ಶಿರಸಿ ನಗರದಲ್ಲಿ ಭವ್ಯ ಮೆರವಣಿಗೆ ಜರುಗಿದವು.

ಸ್ಫಂದನಾ ಸಾಂಸ್ಕçತಿಕ ಏಕಾಡೆಮಿಯ ಅಧ್ಯಕ್ಷ ರವೀಂದ್ರನಾಯ್ಕ ಅವರು ಡೊಳ್ಳು ಭಾರಿಸಿ ಕಾರ್ಯಕ್ರಮ ಉದ್ಘಾಟಿಸಿ, ಮಾರಿಕಾಂಬ ದೇವಾಲಯದ ಏದುರು ಮೆರವಣಿಗೆ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳ ಮೂಲಕ ವಿಕಾಸ ಆಶ್ರಮ ಮೈದಾನದವರೆಗೂ ಸಂಚರಿಸಿತು.
ಜಡ್ಡಿಗದ್ದೆಯ ಸಿದ್ಧಿ ಸಮಾಜದ ಧಮಾಮಿ ನೃತ್ಯ, ವಾಲ್ಮೀಕಿ ಸಮಾಜದ ವಿಶಿಷ್ಟ ಕಲೆಯಾದ ಲಮಾಣಿ ನೃತ್ಯ, ನಿಲ್ಕುಂದದ ಡೊಳ್ಳು ಕುಣಿತ, ಕುಂಭಮೇಳ, ಯಕ್ಷಗಾನ, ಪುನೀತ್ ಮತ್ತು ಭುವನೆಶ್ವರಿಯ ಸ್ಥಬ್ಧ ಚಿತ್ರ, ಜೂನಿಯರ್ ರಾಜಕುಮಾರ್ ಹಾವಬಾವಗಳು ಜಾಥದ ವಿಶೇಷ ಆಕರ್ಷಣೆಯಾಗಿದ್ದವು. ಜಿಲ್ಲಾದ್ಯಂತ ಪುನೀತ್ ರಾಜಕುಮಾರ ಅಭಿಮಾನಿಗಳು ನೃತ್ಯಕ್ಕೆ ಹೆಜ್ಜೆಹಾಕಿರುವುದು ಜಾಥದ ಮೆರಗು ಹೆಚ್ಚಿಸಿದವು.
ಜಾಥದಲ್ಲಿವಿವಿಧ ಸಂಘಟನೆಗಳ ಪ್ರಮುಖರಾದ ಮಂಜು ಶೆಟ್ಟಿ, ಮಹೇಶ್ ಶೆಟ್ಟಿ, ಕಾರ್ತಿಕ್, ಎಮ್ ಆರ್ ನಾಯ್ಕ, ಲಕ್ಷö್ಮಣ ಮಾಳ್ಳಕ್ಕನವರ, ನೆಹರೂ ನಾಯ್ಕ, ಹರಿ ನಾಯ್ಕ, ಬಾಬು ಮರಾಠಿ, ರಾಜು ಮುಕ್ರಿಮುಂತಾದವರು ನೇತ್ರತ್ವ ವಹಿಸಿದ್ದರು.

ರಾರಾಜಿಸಿದ ಕನ್ನಡ ಭಾವುಟ:
ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕನ್ನಡ ನಾಡು ನುಡಿ ನಮನ-ಪುನೀತ್ ರಾಜಕುಮಾರ್ ನೆನಪು ಕಾರ್ಯಕ್ರಮದಲ್ಲಿ ಕನ್ನಡ ಭಾವುಟವು ರಾರಾಜಿಸಿರುವುದು ಜಾಥದಲ್ಲಿವಿಶೇಷವಾಗಿತ್ತು.

error: