
ಯಲ್ಲಾಪುರ : ೨೦೨೦-೨೧ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕೋವಿಡ್ ಕಾರಣದಿಂದಾಗಿ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಅಂಕಗಳನ್ನು ನೀಡಲಾಗಿದೆ,
ಪಟ್ಟಣದ ವೈ.ಟಿ.ಎಸ್.ಎಸ್ ಪದವಿಪೂರ್ವ ಕಾಲೇಜಿನ ೧೫೯ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು ವಿಜ್ಞಾನ ವಿಭಾಗದಲ್ಲಿ ಸಹನಾ ನಾಯ್ಕ ೫೯೮(೯೯.೬೭%) ಅಂಕಗಳೊoದಿಗೆ ಪ್ರಥಮ, ಶಿವಾನಿ ಶೇಟ್ ೫೯೭ (೯೯.೫%) ಅಂಕ ಪಡೆದು ದ್ವಿತೀಯ, ಆಕಾಶ ರವಿ ಭಟ್ ೫೯೧(೯೮.೫%) ಅಂಕ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸ್ವಾತಿ ವಡಮಾವ ೫೯೮(೯೯.೬೭%) ಅಂಕಗಳೊAದಿಗೆ ಪ್ರಥಮ, ಜ್ಯೋತಿರಾದಿತ್ಯ ಭಟ್ ೫೫೮ (೯೩%) ಅಂಕಗಳೊAದಿಗೆ ದ್ವಿತೀಯ, ವಸುಂಧರಾ ಭಟ್ ೫೫೬ (೯೨.೬೬%) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದ ವೈಷ್ಣವಿ ದಯಾನಂದ ಮಿರಾಶಿ ೫೨೮ (೮೮%) ಅಂಕದೊAದಿಗೆ ಪ್ರಥಮ ಸ್ಥಾನದಲ್ಲೂ, ಪ್ರೀತಿ ಶ್ರೀನಿವಾಸ ರಾವ್ ೫೨೪(೮೭.೩೩%) ಅಂಕ ಪಡೆದು ದ್ವಿತೀಯ ಹಾಗೂ ಪಿ ಇಂದೂಧರ ೫೦೬ (೮೪.೩೩%) ಅಂಕ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷ ಗಜಾನನ ಬಾಬುರಾವ ಭಟ್, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ಪ್ರಾಂಶುಪಾಲ ಜಯರಾಮ ಗುನಗಾ, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.
ವರದಿ: -ವೇಣಗೋಪಾಲ ಮದ್ಗುಣಿ


More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ