April 27, 2024

Bhavana Tv

Its Your Channel

ಯಲ್ಲಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ೩೪೮ ವಿದ್ಯಾರ್ಥಿಗಳು ಉತ್ತೀರ್ಣ

ಯಲ್ಲಾಪುರ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ೧೪೮, ವಾಣಿಜ್ಯ ವಿಭಾಗದಲ್ಲಿ ೧೫೧, ಹಾಗೂ ವಿಜ್ಞಾನ ವಿಭಾಗದಲ್ಲಿ ೪೯ ಒಟ್ಟೂ ೩೪೮ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕಲಾ ವಿಭಾಗದಲ್ಲಿ ಶಿವಾಜಿ ಮಿಸಾಲ (೫೧೭) ಪ್ರಥಮ, ಸುಧಾ ಭಟ್ಟ (೫೦೬) ದ್ವಿತೀಯ ಹಾಗೂ ವಿನುತಾ ಬಡಿಗೇರ (೪೯೮) ತೃತೀಯ ಸ್ಥಾನ ಗಳಿಸಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಸುಮಾ ಮರಾಟಿ (೫೮೪) ಪ್ರಥಮ, ಕೆ.ಸಿಂಧು (೫೫೧) ದ್ವಿತೀಯ, ಹಾಗೂ ಆದರ್ಶ ಗಾಂವ್ಕರ (೫೪೯) ತೃತೀಯ ಸ್ಥಾನ ಗಳಿಸಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಗಿರೀಶ ಭಟ್ಟ (೫೪೯) ಪ್ರಥಮ, ವೈಭವಿ ನಾಯ್ಕ (೫೩೯) ದ್ವಿತೀಯ, ಹಾಗೂ ನಾಗವೇಣಿ ಮಿಸಾಲ (೫೩೨) ತೃತೀಯ ಸ್ಥಾನಗಳಿಸಿರುತ್ತಾರೆ

ವರದಿ: -ವೇಣಗೋಪಾಲ ಮದ್ಗುಣಿ

error: