
ವರದಿ :- ವೇಣುಗೋಪಾಲ ಮದ್ಗುಣಿ
ಅಂಕೋಲಾ:- ಅಂಕೋಲಾ ತಾಲೂಕಿನ ಕಟ್ಟಕಡೆಯ ಗ್ರಾಮದ ಗ್ರಾಮೀಣ ಭಾಗದ ವಿದ್ಯಾರ್ಥಿ ಹಳವಳ್ಳಿಯ ರಜೀತ್ ಹೆಬ್ಬಾರ ಈ ಸಲ ನಡೆದ ಸಿ,ಇ,ಟಿ ಪರಿಕ್ಷೆಯಲ್ಲಿ ೩೪೦ ನೇ ಸ್ಥಾನ ಗಳಿಸುವದರ ಮೂಲಕ ಸಾಧನೆಗೈದಿದ್ದಾನೆ.
ಈತ ಪಿಯುಸಿ ಯಲ್ಲಿ ೬೦೦ ಅಂಕಗಳಿಸಿದ್ದು ಗಮನಾರ್ಹ, ಈತ ಶೈಕ್ಷಣಿಕವಾಗಿ ಮೊದಲಿನಿಂದಲೂ ಮುಂದಿರುವ ವಿದ್ಯಾರ್ಥಿಯಾಗಿದ್ದು, ಹಳವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ,ನಂತರ ಮೂಡಬಿದ್ರೆಯ ಆಳ್ವಾಸ್‌ನಲ್ಲಿ ತನ್ನ ಶಿಕ್ಷಣ ಪಡೆದಿದ್ದಾನೆ.
ಹಳವಳ್ಳಿಯ ನಾರಾಯಣ ಹೆಬ್ಬಾರ ಹಾಗೂ ವಿನಯಾ ಹೆಬ್ಬಾರ ಇವರ ಪುತ್ರನಾಗಿದ್ದಾನೆ
ಈತನ ಸಾಧನೆಗೆ ಕಿರಣ ಯುವಕ ಸಂಘ ಹಳವಳ್ಳಿಇದರ ಪದಾಧಿಕಾರಿಗಳು,,ದೊನ್ನೇಮಡಿಯ ಸುಬ್ರಾಯ ಹೆಗಡೆಯವರು ಹಾಗೂ ಊರನಾಗರಿಕರು ಅಭಿನಂದಿಸಿದ್ದಾರೆ.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ