May 19, 2024

Bhavana Tv

Its Your Channel

ಚುಟುಕು ಬ್ರಹ್ಮನ ನಾಡಿನಲ್ಲಿ ಅಂಕೋಲಾ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ

ವರದಿ :- ವೇಣುಗೋಪಾಲ ಮದ್ಗುಣಿ

ಅಂಕೋಲಾ : ಸಮಾಜವನ್ನು ಸರಿದಾರಿಗೆ ನಡೆಸುವುದೇ ಚುಟುಕು ಸಾಹಿತ್ಯ ಉದ್ದೇಶವಾಗಿದೆ. ದಿನಕರ ದೇಸಾಯಿಯಂತಹ ಹಿರಿಯರು ಸಮಾಜ ಓರೆ-ಕೋರೆಗಳನ್ನು ತಿದ್ದಲು ಚುಟುಕನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಚುಟುಕು ಬ್ರಹ್ಮನ ಕರ್ಮಭೂಮಿಯಲ್ಲಿ ತಾಲೂಕ ಚುಟುಕು ಸಾಹಿತ್ಯ ಪರಿಷತನ ಘಟಕವನ್ನು ಉದ್ಘಾಟಿಸಲು ನನಗೆ ಸಂತೋಷವಾಗುತ್ತದೆಯೆAದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.

ಅಂಕೋಲೆಯ ಪೂರ್ಣಪ್ರಜ್ಞಾ ಪಿ.ಯು. ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಕೋಲಾ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆ ಸ್ಥಾನ ವಹಿಸಿದ ಪ್ರೊ. ಮೋಹನ ಹಬ್ಬು ಮಾತನಾಡಿ, ಬರೆದಂತೆ ನಾವು ಬದುಕಿದರೆ ನಮ್ಮ ಚುಟುಕಿಗೆ ಹೆಚ್ಚು ಅರ್ಥ ಬರುತ್ತದೆ. ತಾಲೂಕಿನ ಚುಟುಕು ಸಾಹಿತಿಗಳಿಗೆ ಹೊಸ ವೇದಿಕೆ ದೊರಕಿದ್ದು ಸಂತೋಷಕರ ಸಂಗತಿಯೆoದರು.
ಪ್ರಾಚಾರ್ಯ ಫಾಲ್ಗುಣ ಗೌಡ ದಿನಕರ ದೇಸಾಯಿಯವರ ಬದುಕು ಬರಹದ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು. ದಿನಕರ ದೇಸಾಯಿಯವರ ನೆನಪಿನ ವಸ್ತು ಸಂಗ್ರಾಲಯವನ್ನು ಸ್ಥಾಪಿಸುವ ಬಗ್ಗೆ ಕರೆ ನೀಡಿದರು.
ಪದಾಧಿಕಾರಿಗಳಾಗಿ ಹೊನ್ನಪ್ಪ ನಾಯಕ ಅಧ್ಯಕ್ಷರಾಗಿ, ಡಾ. ಪುಷ್ಪಾ ವಿ. ನಾಯ್ಕ ಉಪಾಧ್ಯಕ್ಷರಾಗಿ, ಪಾಂಡುರAಗ ನಾಯಕ ಕಾರ್ಯದರ್ಶಿಗಳಾಗಿ ಜಯಶೀಲ ಆಗೇರ ಇವರು ಕೋಶಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.

ಕವಿಗೋಷ್ಠಿ : ಈ ಕಾರ್ಯಕ್ರಮದಲ್ಲಿ ಜರುಗಿದ ಕವಿಗೋಷ್ಠಿ ಹಾಗೂ ಚುಟುಕು ವಾಚನದಲ್ಲಿ ಜಿಲ್ಲೆಯ ಹಲವಾರು ಕವಿಗಳು ಭಾಗವಹಿಸಿದ್ದರು. ಕವಿಗೋಷ್ಠಿ ಅಧ್ಯಕ್ಷತೆಯನ್ನೂ, ಸಾಹಿತಿ ಕೃಷ್ಣ ನಾಯಕ ಹಿಚ್ಕಡ ವಹಿಸಿದ್ದರು. ಚುಟುಕುಗಳು ಜೀವನಾನುಭವದ ಪ್ರತಿಬಿಂಬವಾಗಬೇಕು. ಮತ್ತು ಹೃದಯಾಂತರಾಳದಿAದ ಹೊರಹೊಮ್ಮಿದರೆ ಆ ಚುಟುಕು ಬಹುಕಾಲ ಬಾಳುತ್ತದೆಯೆಂದರು.
ನಿವೃತ್ತ ಶಿಕ್ಷಕ ಜಿ.ಆರ್. ನಾಯಕರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಚುಟುಕು ಜಿಲ್ಲಾ ಪರಿಷತ್‌ನ ಅಧ್ಯಕ್ಷ ಜಿ.ಯು. ನಾಯಕ ಪ್ರಾಸ್ತವಿಕ ಮಾತನಾಡಿದರು. ಹೊನ್ನಪ್ಪ ನಾಯಕ ಸ್ವಾಗತಿಸಿದರು. ವೇದಿಕೆಯಲ್ಲಿದ್ದ ಸಾಹಿತಿ ನಾಗೇಂದ್ರ ತೊರ್ಕೆ ಸಾಂದಾರ್ಭಿಕವಾಗಿ ಮಾತನಾಡಿದರು. ಶಿಕ್ಷಕ ಗೌರೀಶ ನಾಯಕ ಶಿರಗುಂಜಿ ಕಾರ್ಯಕ್ರಮ ನಿರೂಪಿಸಿದರು. ಪಾಂಡುರoಗ ನಾಯಕ ಕವಿಗೋಷ್ಠಿಯನ್ನು ನಿರ್ವಹಿಸಿದರು. ಡಾ. ಪುಷ್ಪಾ ನಾಯ್ಕ ವಂದಿಸಿದರು. ಜಯಶೀಲ ಆಗೇರ ಕಾರ್ಯಕ್ರಮ ಸಂಯೋಜಿಸಿದರು. ಬರಹಗಾರ ಕಾಂತ ಮಾಸ್ತರ, ಲೇಖಕ ಮಹಾಂತೇಶ ರೇವಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ತಿಮ್ಮಣ್ಣ ಭಟ್ಟ, ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

error: